ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ಕುರಿತು ರಾಜಕೀಯ ಜಟಾಪಟಿ ಮುಂದುವರಿದಿದ್ದು, ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಜಾತಿ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವವರ ಹೆಸರನ್ನು ಬಹಿರಂಗಪಡಿಸಬೇಕೆಂದು ಇಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜಾತಿ ಸಮೀಕ್ಷೆ -
ಇದು ಜಾತಿಗಣತಿಯಲ್ಲ, ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದ್ದು, ಇದರಿಂದ ಪ್ರತಿಯೊಂದು ಜಾತಿಯ ಸಂಖ್ಯೆಯನ್ನು ಕ್ರೋಢೀಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದನ್ನು ಜಾತಿ ಜನಗಣತಿ ಎಂದು ವಿರೋಧಿಸಲಾಗುತ್ತಿದೆ, ಆದರೆ ಇದನ್ನು ದಾಖಲಿಸುವುದರಿಂದ ಆಗುವ ತೊಂದರೆಯಾದರೂ ಏನು? ಎಂದು ಅವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ಸಮೀಕ್ಷೆಯ ಫಲಿತಾಂಶದಿಂದ ಸತ್ಯ ಹೊರಬಂದಾಗ ಕೆಲವರಿಗೆ ಬೇಸರವಾಗುತ್ತದೆ, ಆದರೆ ಅದು ಜನರಿಗೆ ಗೊತ್ತಾಗಲಿ ಎಂದು ನೇರವಾಗಿ ನುಡಿದಿದ್ದಾರೆ.
'ಬೆಣ್ಣೆ, ಮೊಸರು ತಿಂದವರು ಹಂಚಿಕೆಗೆ ಹಿಂಜರಿಕೆ'
ಕಳೆದ 75 ವರ್ಷಗಳಿಂದ ದೇಶದಲ್ಲಿ ಕೆಲವೇ ಸಮುದಾಯಗಳು 'ಬೆಣ್ಣೆ, ಹಾಲು, ಮೊಸರನ್ನು' ತಿಂದಿವೆ. ಈಗ ಅದನ್ನು ಎಲ್ಲರಿಗೂ ಹಂಚುವ ಸಮಯ ಬಂದಾಗ ಹಿಂಜರಿಯುತ್ತಿದ್ದಾರೆ ಎಂದವರು ಜಾತಿಗಣತಿ ವಿರೋಧಿಗಳನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಸೀಮಿತ ಸಮುದಾಯದವರು ತಮ್ಮದೇ ಆದ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡಿದ್ದು, ಅದಕ್ಕೆ ತೊಂದರೆಯಾಗುತ್ತದೆ ಎಂಬ ಭಯದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. Jadunath Sarkar Collection (5 Books): Shivaji and His Times, Military History of India, India Through the Ages, Mughal Administration & Nadir Shah in India Paperback – 1 September 2024
ಜಾತಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವವರು ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಬಯಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಈ ಸಮೀಕ್ಷೆ ಬಡವರ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಸಹಾಯಕವಾಗಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ರಸ್ತೆಯಲ್ಲಿ ಸಾಗುವ ವೇಳೆ ಫೋನ್ ಬಳಸುವವರಿಗೆ ಎಚ್ಚರಿಕೆ: ಸ್ಕೂಟರ್‌ನಲ್ಲಿ ಬಂದು ಕೈಯಿಂದ ಮೊಬೈಲ್ ಕಸಿದುಕೊಳ್ತಾರೆ.!