ಶಾಸಕ ಇಕ್ಬಾಲ್ ಹುಸೇನ್ ಸಹೋದರನಿಂದ ಕೋಟ್ಯಾಂತರ ರೂಪಾಯಿ ಗೋಲ್ಮಾಲ್ ನಡೆದಿದೆ. ಸಾವಿರಾರು ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಕಬಳಿಸಿರುವ ಆರೋಪ ಕೇಳಿ ಬರುತ್ತಿದೆ. ಬಡವರ ಜಮೀನನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡ್ಕೊಂಡಿದ್ದಾರೆ ಈ ಇಸಾರ್ ಅಹಮದ್. ರಾಮನಗರ ತಾಲೂಕಿನ ಬೊಮ್ಮಚನಹಳ್ಳಿಯಲ್ಲಿರು ಜಮೀನನ್ನು ಏಕಾಏಕಿ ಮುತ್ತಿಗೆ ಹಾಕಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.ಇದನ್ನೂ ಓದಿ: ಜಾತಿ ಸಮೀಕ್ಷೆ ವಿರೋಧಿಗಳ ಹೆಸರು ಬಹಿರಂಗಪಡಿಸಿ - ಸಿಎಂಗೆ ಆಗ್ರಹಿಸಿರುವ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್
ಸರ್ವೇ ನಂಬರ್ 297ರಲ್ಲಿ 4 ಎಕರೆ ಹಾಗೇ ಸರ್ವೇ ನಂಬರ್ 295ರಲ್ಲಿ 4 ಎಕರೆ ಜಮೀನು ಗುಳುಂ ಸ್ವಾಹ ಆಗಿದೆ. ಒಟ್ಟು 8 ಎಕರೆ ಜಮೀನನ್ನು ನೊಂದಣಿ ಮಾಡಿಸಿದ್ದಾರೆ ಇಸಾರ್ ಅಹಮದ್ ಅದೂ ಜಮೀನಿನ ಮಾಲೀಕರಿಗೆ ತಿಳಿಯದೇನೆ ನೊಂದಣಿ ಮಾಡಿಸಿಕೊಂಡಿದ್ದಾರೆ. ಇದೇ ಮೇ 19 ರಂದು ನೊಂದಣಿ ಮಾಡಿಸಿಕೊಂಡಿದ್ದಾರೆ ಇಸಾರ್ ಅಹಮದ್.ಇದನ್ನೂ ಓದಿ: ದೆಹಲಿಯಲ್ಲಿ ರಾಮಲೀಲಾ, ದುರ್ಗಾಪೂಜೆಗೆ ಮಧ್ಯರಾತ್ರಿಯವರೆಗೆ ಅನುಮತಿ: ಸಿಎಂ ರೇಖಾ ಗುಪ್ತಾ..!
ಶಾಸಕರು 50000 ಸಾವಿರ ಕೊಡುತ್ತಾರೆ ಅಂತ ಕರೆತಂದು ರಿಜಿಸ್ಟರ್ ಮಾಡಿದ್ದಾರೆ. ಸರ್ವೇಯವರು ಬಂದ ಸಮಯದಲ್ಲಿ ಗೋಲ್ಮಾಲ್ ನಡೆದಿದೆ. ಎಸಿ ಮತ್ತು ಪೊಲೀಸರಿಗೆ ಮೂಲ ಜಮೀನು ಮಾಲೀಕರು ದೂರನ್ನು ನೀಡಿದ್ದಾರೆ. ಶಾಸಕ ಇಕ್ಬಾಲ್ ಸಹೋದರ ಇಸಾರ್ ಅಹಮದ್‌ಗೆ ಈಗ ನೋಟೀಸ್ ನೀಡಲಾಗಿದೆ. 1927ರಲ್ಲಿ ರಹೀಂ ಖಾನ್ ಎಂಬುವವರಿಗೆ ಖಾತೆ ಆಗಿತ್ತು. ಅದೇ ರೀತಿ ಬಾಬ್ ಜಾನ್ ಸಾಬ್‌ಗೂ ಸಹ ಖಾತೆಯಾಗಿತ್ತು.ಇದನ್ನೂ ಓದಿ: ಪತ್ನಿ ಸ್ನಾನ ಮಾಡುತ್ತಿರುವ ಸಮಯದಲ್ಲಿ ಹಿಂದಿನಿಂದ ಚಾ*ಕು ಇರಿತ: ಫೇಸ್ಬುಕ್ ನಲ್ಲಿ ಲೈವ್ ಬಂದು ತಪ್ಪೊಪ್ಪಿಗೆ
ಆ ಜಮೀನನ್ನೇ ರಹೀಂ ಖಾನ್ ಸಾಬ್ ಬೇರೆಯವರಿಗೆ ಮಾರಿದ್ದನು. ಆದರೆ ಮೂಲ ಜಮೀನಿನ ಮಾಲೀಕರಿಬ್ಬರೂ ಸಹ ಸಾವನ್ನಪ್ಪಿರುತ್ತಾರೆ. ಆದ್ರೆ ಈಗ ಅದೇ ಹೆಸರಿರೋರನ್ನ ಹುಡುಕಿ ಜಮೀನನ್ನು ನೊಂದಣಿ ಮಾಡಿಸಲಾಗಿದೆ. ಹಾರೋಹಳ್ಳಿಯ 69 ವರ್ಷದ ರಹೀಂ ಖಾನ್ ಸಾಬ್ ಮತ್ತು ಮುಳಬಾಗಿಲಿನ ಬಾಬ್ ಜಾನ್ ಸಾಬ್‌ನನ್ನು ಕರೆತಂದು ನೊಂದಣಿ ಮಾಡಿಸಲಾಗಿದೆ.ರಾಮನಗರದ ಸಬ್ ರಿಜಿಸ್ಟರ್ ಆಫೀಸ್ ಅಲ್ಲಿ ನೊಂದಣಿ ಮಾಡಿಸಲಾಗಿದೆ.NOBERO Men's Cotton Solid Regular Fit Polo Shirt