ಸಾಕಷ್ಟು ಕಾಮಿಡಿ ವಿಡಿಯೋಗಳ ಮುಖೇನ ಜನಪ್ರಿಯತೆ ಹೊಂದಿದ್ದ, ಯೂಟ್ಯೂಬರ್ ಮುಕಳೆಪ್ಪ ಮತ್ತು ಗಾಯತ್ರಿ ವಿವಾಹ ವಿವಾದ ಹೊಸ ತಿರುವು ಪಡೆದುಕೊಂಡಿದೆ. 'ಲವ್ ಜಿಹಾದ್' ಆರೋಪಕ್ಕೆ ಸಂಬಂಧಿಸಿದಂತೆ, ಈ ವಿರುದ್ದ ಯುವತಿ ಗಾಯತ್ರಿ ಪೋಷಕರು ದೂರು ದಾಖಲಿಸಿದ್ದಾರೆ. ಈ ನಡುವೆ ಹಿಂದೂ ಸಂಘಟನೆಗಳ ಹೈಡ್ರಾಮವೂ ಮುಂದುವರೆದಿದೆ ಎನ್ನಲಾಗಿದೆ. ಗಾಯತ್ರಿ ಇಂದು ತಮ್ಮ ವಕೀಲರೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆಗೆ ಒಳಗಾಗಲಿದ್ದಾರೆ ಎಂದು ಮಾಹಿತಿ ತಿಳಿಸಲಾಗಿದೆ.
ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ದೂರು ದಾಖಲಿಸಿ, ಇದೀಗ ಅವರಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. ದೂರಿನ ಹಿನ್ನೆಲೆಯಲ್ಲಿ, ವಿವಾಹ ನೋಂದಣಿ ಮಾಡಿದ್ದ ಸಬ್-ರಿಜಿಸ್ಟರ್ ಸಿಬ್ಬಂದಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ. ತಮ್ಮ ಪೋಷಕರು ಯಾರದೋ ಮಾತು ನಂಬಿ ಹೀಗೆ ಮಾಡಿದ್ದಾರೆ ಎಂದು ಗಾಯತ್ರಿ ಬಲವಾಗಿ ವಿರೋಧಿಸಿದ್ದಾರೆ. ಈ ಹಿಂದೆ ವೀಡಿಯೋ ಒಂದನ್ನು ಬಿಡುಗಡೆ ಮಾಡಿ, 'ನಾನು ಇಷ್ಟಪಟ್ಟು ಮದುವೆಯಾಗಿದ್ದೇನೆ' ಈ ಹಿಂದೆ ಸಪೋರ್ಟ್ ಮಾಡಿದ್ದಕ್ಕೆ ನನ್ನ ಬಳಿ ಸಾಕ್ಷಿಯಿದೆ ಎಂದು ಸ್ಪಷ್ಟಪಡಿಸಿದ್ದ ಗಾಯತ್ರಿ, ಇಂದು ಪೊಲೀಸರ ಎದುರು ಏನು ಹೇಳಿಕೆ ನೀಡುವರೆಂದು ನಿರೀಕ್ಷಿಸಲಾಗುತ್ತಿದೆ. 1947-1957, India: the Birth of a Republic Hardcover – 28 August 2023
ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲಿಸಿರುವ ಗಾಯಿತ್ರಿ ಪೋಷಕರು, ಗಾಯಿತ್ರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಧಾರವಾಡದ ಸದನ ಶಕ್ತಿಕೇಂದ್ರದಲ್ಲಿರಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಈ ಗಂಭೀರ ಆರೋಪಗಳ ಕುರಿತು ತನಿಖೆ ನಡೆಸುತ್ತಿದ್ದು, ಗಾಯತ್ರಿ ಅವರ ಹೇಳಿಕೆಯ ನಂತರ ಪ್ರಕರಣ ಮತ್ತಷ್ಟು ಜಟಿಲಗೊಂಡಿದೆ. ಇಂದು ನ್ಯಾಯಾಲಯದ ಮುಂದೆ ಅವರ ಹೇಳಿಕೆಯು ಲವ್ ಜಿಹಾದ್ ಆರೋಪದ ಪ್ರಕರಣಕ್ಕೆ ಒಂದು ದೊಡ್ಡ ಟ್ವಿಸ್ಟ್ ನೀಡಲಿದೆಯಾ ಎಂದು ಹೇಳಬಹುದಾಗಿದೆ. ಇದನ್ನೂ ಓದಿ: ಜಾತಿ ಸಮೀಕ್ಷೆ ವಿರೋಧಿಗಳ ಹೆಸರು ಬಹಿರಂಗಪಡಿಸಿ - ಸಿಎಂಗೆ ಆಗ್ರಹಿಸಿರುವ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್