ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಇತ್ತೀಚೆಗೆ ಭಾರತದ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು, ಕಾಂಗ್ರೆಸ್ ಸಂಸದ ಶಶಿ ತರೂರ್ ಕಿಡಿ ಕಾರಿದ್ದಾರೆ. ಅಲ್ಲದೇ ಅವರು ಭಾರತವನ್ನು ಮಹಾರಾಜ ಆಫ್ ಟ್ಯಾರಿಫ್ಸ್ ಮತ್ತು ರಷ್ಯಾದ ಲಾಂಡ್ರೊಮ್ಯಾಟ್ ಎಂದು ಕರೆದಿದ್ದಾರೆ. ಎರಡು ದೇಶಗಳ ಸಂಬಂಧಗಳು ಉತ್ತಮಗೊಳ್ಳುತ್ತಿರುವಾಗ ಇಂತಹ ಭಾಷೆ ಅನಗತ್ಯ ಎಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಾಯಕ ಪೀಟರ್ ನವರೊ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಪೀಟರ್ ನವರೊ ಅವರು ಭಾರತವನ್ನು ಮಹಾರಾಜ ಆಫ್ ಟ್ಯಾರಿಫ್ಸ್, ರಷ್ಯಾದ ಲಾಂಡ್ರೊಮ್ಯಾಟ್ ಮತ್ತು ಉಕ್ರೇನ್ ಸಂಘರ್ಷವನ್ನು ಮೋದಿಯ ಯುದ್ಧ ಎಂದು ಉಲ್ಲೇಖಿಸಿದ್ದಾರೆ. ಬ್ರಾಹ್ಮಣರು ಭಾರತೀಯ ಜನರ ಹಿತಾಸಕ್ತಿಯನ್ನು ಬದಿಗೊತ್ತಿ ಲಾಭ ಗಳಿಸುತ್ತಿದ್ದಾರೆ ಎಂದೂ ನವರೊ ಟೀಕಿಸಿದ್ದಾರೆ. Hindu Superiority : An attempt to determine the position of Hindu Race in the scale of Nations (Paperback: English) Paperback – 28 February 2025
ಟ್ರಂಪ್ ಮತ್ತು ನವರೊ ಅವರ ಟೀಕೆಗಳ ಬಗ್ಗೆ ತಿರುವನಂತಪುರಂ ಸಂಸದ ಶಶಿ ತರೂರ್ ANI ಸುದ್ದಿ ಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸುಂಕಗಳ ಅನ್ಯಾಯದ ಹೇರಿಕೆಯು ಭಾರತದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ ಎಂದರು. ಟ್ರಂಪ್ ಅವರ ಹೇಳಿಕೆಗಳು ಮತ್ತು ಟ್ವೀಟ್‌ಗಳಲ್ಲಿನ ಅವಮಾನಗಳು ಈ ವಿರೋಧಕ್ಕೆ ಇನ್ನಷ್ಟು ಕಾರಣವಾಗಿವೆ ಎಂದು ಅವರು ಹೇಳಿದರು.
ನವರೊ ಅವರ ಆಕ್ಷೇಪಾರ್ಹ ಹೇಳಿಕೆಗಳು ದೇಶಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿವೆ ಎಂದು ಶಶಿ ತರೂರ್ ತಿಳಿಸಿದರು. ಮೂವತ್ತು ವರ್ಷಗಳಿಂದ ಉತ್ತಮ ಸಂಬಂಧ ಹೊಂದಿರುವಾಗ, ಭಾರತದ ಬಗ್ಗೆ ಇಂತಹ ಭಾಷೆಯನ್ನು ಏಕೆ ಬಳಸಬೇಕು ಎಂದು ಅವರು ಪ್ರಶ್ನಿಸಿದರು. ಇದು ಖಂಡಿತವಾಗಿಯೂ ಮೆಚ್ಚುವಂತಹದ್ದಲ್ಲ ಎಂದು ಕಾಂಗ್ರೆಸ್ ಸಂಸದರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗ್ರೂಪ್ ಡಿ ಹುದ್ದೆ: ಅನುಕಂಪದ ನೇಮಕಾತಿ ತಾತ್ಕಲಿಕ ಸ್ಥಗಿತ..!!!