ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಮೃತ ಪತಿ ಅಥವಾ ತಂದೆಯ ಕುಟುಂಬದ ಅವಲಂಬಿತರಿಗೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಇದನ್ನೂ ಓದಿ: ಶಾಸಕ ಇಕ್ಬಾಲ್ ಸಹೋದರ ಇಸಾರ್ ಅಹಮದ್‌ನಿಂದ ಕೋಟ್ಯಾಂತರ ರೂಪಾಯಿ ಜಮೀನು ಗೋಲ್ಮಾಲ್…!!!
ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಇದರಿಂದಾಗಿ ಸುಮಾರು 500ಕ್ಕೂ ಹೆಚ್ಚು ಅವಲಂಬಿತರ ನಿರೀಕ್ಷೆಗಳಿಗೆ ದೊಡ್ಡ ಆಘಾತವಾಗಿದೆ.ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರು ಅಚಾನಕ ಮರಣಹೊಂದಿದ್ದಾಗ ಅವರ ಕುಟುಂಬದ ಅವಲಂಬಿತರಿಗೆ ಕನಿಷ್ಠ ಗ್ರೂಪ್ ಡಿ ಹುದ್ದೆಗಳಲ್ಲಿ ನೇಮಕಾತಿ ನೀಡುವ ಅನುಕಂಪ ನೀತಿಯಿದೆ ಆದರೂ ಸಹಿತ ಅದನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.ಇದನ್ನೂ ಓದಿ: ಪತ್ನಿ ಸ್ನಾನ ಮಾಡುತ್ತಿರುವ ಸಮಯದಲ್ಲಿ ಹಿಂದಿನಿಂದ ಚಾ*ಕು ಇರಿತ: ಫೇಸ್ಬುಕ್ ನಲ್ಲಿ ಲೈವ್ ಬಂದು ತಪ್ಪೊಪ್ಪಿಗೆ
ಈ ನೀತಿಯಡಿ ಕಳೆದ ಕೆಲವು ವರ್ಷಗಳಲ್ಲಿ ಸುಮಾರು 1,200ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಇದೀಗ ಸ್ಥಗಿತಗೊಂಡಿದ್ದು, ಕಾರಣಗಳು ಆರ್ಥಿಕ ಸಂಕಷ್ಟ, ಹುದ್ದೆಗಳ ಕೊರತೆ ಮತ್ತು ಸರ್ಕಾರದ ಹೊಸ ನೀತಿ ಸುಧಾರಣೆಗಳು ಎಂದು ಇಲಾಖೆ ಮೂಲಗಳು ತಿಳಿಸಿವೆ..ಇದನ್ನೂ ಓದಿ: ರಾಜ್ಯ ಸಾರಿಗೆ ದರ ನಿಯಂತ್ರಣ ಸಮಿತಿ ರಚನೆ: KSRTC ಬಸ್ ದರ ಏರಿಕೆಗೆ ಹೊಸ ನೀತಿ..!
ಹೊಸ ನೇಮಕಾತಿಗಳಿಗೆ ಬದಲಾಗಿ, ಯೋಜನಾಬದ್ಧ ತರಬೇತಿ ಮತ್ತು ಹುದ್ದೆಗಳನ್ನು ಸರಿ ಮಾಡುವತ್ತ ಗಮನ ಹರಿಸಲಾಗಿದೆ. ಅನುಕಂಪ ನೇಮಕಾತಿಯನ್ನು ಸ್ಥಗಿತಗೊಳಿಸಿರುವುದು ತಾತ್ಕಾಲಿಕವಾಗಿದ್ದು, ಸರ್ಕಾರದ ಹೊಸ ಬಜೆಟ್ ಅನುಮೋದನೆಯ ನಂತರ ಮತ್ತೆ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು.ಇದನ್ನೂ ಓದಿ: ‘ಲವ್ ಜಿಹಾದ್' ಆರೋಪ: ಯೂಟ್ಯೂಬರ್ ಮುಕಳೆಪ್ಪಗೆ ಸಂಕಷ್ಟ, ಪತ್ನಿ ಗಾಯತ್ರಿ ಪೊಲೀಸ್ ಕಸ್ಟಡಿಯಲ್ಲಿ.!
ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಒಟ್ಟು 13,000ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆಯಲ್ಲಿದ್ದರೂ, ಅನುಕಂಪ ನೇಮಕಾತಿಯನ್ನು ಮೊದಲು ಆರ್ಥಿಕ ಕಾರಣಗಳಿಂದ ಸ್ಥಗಿತಗೊಳಿಸಲಾಗಿದೆ. ಕಳೆದ ವರ್ಷ 2024ರಲ್ಲಿ ಮಾತ್ರ 300ಕ್ಕೂ ಹೆಚ್ಚು ಅನುಕಂಪ ಅರ್ಜಿಗಳು ಬಾಕಿಯಲ್ಲಿವೆ. ಯೂನಿಯನ್‌ಗಳ ಆಕ್ಷೇಪ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಬ್ಬಂದಿ ಒಕ್ಕೂಟದ ಅಧ್ಯಕ್ಷ ಎಂ. ಜ್ಯೋತಿಬಾಸಪ್ಪ ಅವರು ಈ ನಿರ್ಧಾರವು ಕುಟುಂಬಗಳನ್ನು ದುರಂತಕ್ಕೆ ಕಾರಣವಾಗುತ್ತದೆ. ಅನುಕಂಪ ನೇಮಕಾತಿ ಒಂದು ಮಾನವೀಯ ನೀತಿ. ಇದನ್ನು ಸ್ಥಗಿತಗೊಳಿಸುವುದು ಸರ್ಕಾರದ ವಿಶ್ವಾಸಘಾತಕವಾಗಿದೆ. ನಾವು ಶೀಘ್ರದಲ್ಲೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತೇವು ಎಂದು ಆಕ್ಷೇಪ ವ್ಯಕ್ತಪಡಿಸಿದರು.NOBERO Men's Cotton Solid Regular Fit Polo Shirt