ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಕುರಿತು ಹೈಕೋರ್ಟ್‌ನಲ್ಲಿ ಇಂದು ವಾದ-ಪ್ರತಿವಾದಗಳು ನಡೆದಿವೆ. ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸಿತು. ಈ ಮಧ್ಯೆಯೇ ಸಮೀಕ್ಷೆ ಆರಂಭಗೊಂಡಿದ್ದು, ಈ ಬಗ್ಗೆ ವಿವರಗಳು ಈ ಕೆಳಗಿನಂತಿವೆ.
ಸಾಕಷ್ಟು ವಿರೋಧಗಳ ನಡುವೆ ರಾಜ್ಯದಾದ್ಯಂತ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಿನ್ನೆಯಿಂದಲೇ ನಡೆಸಲಾಗಿದೆ. ನಿನ್ನೆ ಬೆಳಿಗ್ಗೆಯಿಂದ ಇಂದು ಮಧ್ಯಾಹ್ನದವರೆಗೆ 92,079 ಮನೆಗಳ ಸಮೀಕ್ಷೆ ಶಿಕ್ಷಕರು ಹಾಗೂ ಆಶಾಕಾರ್ಯಕರ್ತೆಯರು ಮಾಹಿತಿಯನ್ನು ದಾಖಲಿಸಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆ, ದಕ್ಷಿಣ ಕನ್ನಡದಲ್ಲಿ ಸಮೀಕ್ಷೆಗೆ ನೀರಸ ಪ್ರತಿಕ್ರಿಯೆ ದೊರೆತಿದೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ - ಅರ್ಜಿದಾರರ ವಾದ
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ರಾಜ್ಯ ಸರ್ಕಾರಕ್ಕೆ ಜಾತಿ ಸಮೀಕ್ಷೆ ನಡೆಸಲು ಅಧಿಕಾರವಿಲ್ಲ ಎಂದು ವಾದಿಸಿದರು. ರಾಷ್ಟ್ರಪತಿಗಳಿಗೆ ಮಾತ್ರ ಸಂವಿಧಾನದಡಿಯಲ್ಲಿ ಜಾತಿಗಳ ಪಟ್ಟಿ ಪರಿಷ್ಕರಣೆ ಮಾಡುವ ಅಧಿಕಾರವಿದೆ. ವಿಧಿ 342(A) ರ ಪ್ರಕಾರ, ನಾಗರಿಕರ ಸರ್ವೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು ಎನ್ನಲಾಗಿದೆ.
ಈ ಸಮೀಕ್ಷೆಯನ್ನು ಡಿಜಿಟಲ್ ಆಪ್ ಮೂಲಕ, ಜಿಪಿಎಸ್ ಮತ್ತು ವಿದ್ಯುತ್ ಮೀಟರ್ ಸಹಕಾರದೊಂದಿಗೆ ನಡೆಸಲಾಗುತ್ತಿದೆ. ಆದರೆ, ಈ ಸಮೀಕ್ಷೆಗೆ ಸೂಕ್ತ ಕಾನೂನು ಆಧಾರವಿಲ್ಲ. 'ಕರ್ನಾಟಕ ಹಿಂದುಳಿದ ವರ್ಗಗಳ ಕಾಯ್ದೆ' ಅಡಿಯಲ್ಲಿ ಸರ್ವೇ ಮಾಡಲಾಗಿ ಸರ್ಕಾರವು ಆದೇಶ ನೀಡಿದೆ. ಜೈಶ್ರೀ ಪಾಟೀಲ್ ಕೇಸ್ ಉಲ್ಲೇಖಿಸಿ ಸಮೀಕ್ಷೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ವಾದ ಮಂಡಿಸಿದ್ದಾರೆ. Mahabharata Unravelled (Hindi) Paperback – 18 December 2022
ಈ ಕುರಿತು ಪ್ರತಿಕ್ರಿಯಿಸಿದ, ನ್ಯಾಯಪೀಠವು, ಜಾತಿ ಸಮೀಕ್ಷೆಯನ್ನು ವಿರೋಧಿಸಿ ಕೆಲವು ಸಮುದಾಯಗಳು ಸಲ್ಲಿಸಿದ್ದ ಅರ್ಜಿಗಳ ನ್ಯಾಯಪೀಠ ವಿಚಾರಣೆ ಬಗ್ಗೆ ಇಂದು ವಾದದ ಅಂತಿಮ ತೀರ್ಪು ಹೊರಬಿದ್ದಿಲ್ಲ, ಆದರೆ ಅರ್ಜಿದಾರರ ವಾದವನ್ನು ಸಂಕ್ಷಿಪ್ತವಾಗಿ ನ್ಯಾಯಪೀಠದ ಮುಂದೆ ಮಂಡಿಸಿ ಎಂದು ನ್ಯಾಯಾಲಯ ತಿಳಿಸಿದೆ. ಈ ವಿಷಯದ ಕುರಿತು ಹೆಚ್ಚಿನ ವಿಚಾರಣೆ ಮುಂದುವರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಇಟಲಿಯಲ್ಲಿ ಪ್ರತಿಭಟನೆಯ ಕಿಚ್ಚು - ಪ್ಯಾಲೆಸ್ಟೀನ್ ಪ್ರತ್ಯೇಕ ರಾಷ್ಟ್ರಕ್ಕೆ ಆಗ್ರಹ
ಈವರೆಗೆ ಯಾವ ಜಿಲ್ಲೆಯಲ್ಲಿ ಎಷ್ಟು ಮನೆ ಸಮೀಕ್ಷೆ ಮಾಡಲಾಗಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ:
ಜಿಲ್ಲೆ ಮನೆಗಳು
1. ಚಿತ್ರದುರ್ಗ. 25,381
2. ಬಾಗಲಕೋಟೆ 10,786
3. ಗದಗ. 7,382
4. ಕೊಪ್ಪಳ. 7,091
5. ಶಿವಮೊಗ್ಗ. 5,589
6. ಬಳ್ಳಾರಿ 5,482
7. ಕೋಲಾರ. 5,004
8. ಕಲ್ಬುರ್ಗಿ 3,785
9. ದಾವಣಗೆರೆ 3,022
10. ವಿಜಯಪುರ. 2,954
11. ಹಾವೇರಿ 2,629
12. ರಾಮನಗರ. 2,628
13. ಮಂಡ್ಯ. 1,425
14. ಬೀದರ್ 1,192
15. ಧಾರವಾಡ. 1,167
16. ಹಾಸನ. 940
17. ಚಾಮರಾಜನಗರ 936
18. ಬೆಳಗಾವಿ 919
19. ಕೊಡಗು 701
20. ಉತ್ತರಕನ್ನಡ. 528
21. ತುಮಕೂರು 482
22. ಯಾದಗಿರಿ 469
23. ವಿಜಯನಗರ. 428
24. ರಾಯಚೂರು 403
25. ಮೈಸೂರು 184
26. ಚಿಕ್ಕಮಗಳೂರು 155
27. ಉಡುಪಿ 130
28.ಬೆಂಗಳೂರು ಗ್ರಾ 129
29. ಚಿಕ್ಕಬಳ್ಳಾಪುರ 87
30. ಬೆಂಗಳೂರು ನಗರ. 69
31. ದಕ್ಷಿಣ ಕನ್ನಡ. 2
ಒಟ್ಟು 92,079