ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು, ಹೊಸ ಜಿಎಸ್‌ಟಿ ದರ ಜಾರಿಯಾದರೂ ಕೆಎಂಎಫ್ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹಾಲು ಮತ್ತು ಮೊಸರನ್ನು ಹೊರತುಪಡಿಸಿ ಉಳಿದ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ. KMF SHIMUL ನೇಮಕಾತಿ 2025: ಸಹಕಾರಿ ಹಾಲು ಉತ್ಪಾದಕರ ಸಂಘದಲ್ಲಿ 27 ಹುದ್ದೆಗಳು; ಪದವೀಧರರು ಆನ್‌ಲೈನ್‌ನಲ್ಲಿ ಕೂಡಲೇ ಅರ್ಜಿ ಸಲ್ಲಿಸಿ
ಕೇಂದ್ರ ಸರ್ಕಾರದ ಸೂಚನೆಯಂತೆ ಕೆಎಂಎಫ್ ಜಿಎಸ್‌ಟಿ ಕಡಿತದ ದರದಲ್ಲಿ ಮಾರಾಟ ನಡೆಸುತ್ತಿದೆ. ಎಂಆರ್‌ಪಿ ಯಾವುದೇ ಇದ್ದರೂ, ಕಡಿಮೆ ಜಿಎಸ್‌ಟಿ ದರದ ಆಧಾರದಲ್ಲಿ ಬೆಲೆ ನಿಗದಿಪಡಿಸಲಾಗಿದೆ. ಒಂದು ವೇಳೆ ದೂರುಗಳು ಬಂದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿವಸ್ವಾಮಿ ಎಚ್ಚರಿಸಿದ್ದಾರೆ.Varanga Women Pink Zari Work textured Kurta with Trouser and Printed Dupatta
ವಿದೇಶದಲ್ಲಿ ಕೆಎಂಎಫ್ ಘಟಕ ಸ್ಥಾಪನೆಯ ಬಗ್ಗೆ ಮಾತನಾಡಿದ ಅವರು, ಅಮೆರಿಕದ ನಾವಿಕ ಸಮ್ಮೇಳನದಲ್ಲಿ ಕೆಎಂಎಫ್ ಉತ್ಪನ್ನಗಳನ್ನು ಲಾಂಚ್ ಮಾಡಲಾಗಿದೆ ಎಂದರು. ಅಮೆರಿಕದಲ್ಲಿ ಕೆಎಂಎಫ್ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದ್ದು, ಗುಣಮಟ್ಟದಿಂದಾಗಿ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಕ್ಕರೆ ಅಂಶ ಕಡಿಮೆಯಿರುವ ಹೊಸ ಉತ್ಪನ್ನಗಳನ್ನು ಶೀಘ್ರದಲ್ಲಿ ಮಾರಾಟಕ್ಕೆ ತರಲಾಗುವುದು ಎಂದು ಶಿವಸ್ವಾಮಿ ತಿಳಿಸಿದ್ದಾರೆ. ರಾಜ್ಯದ ವಿವಿಧೆಡೆ ಕೆಎಂಎಫ್ ಶಾಖೆಗಳ ಉದ್ಘಾಟನೆಯ ಬಗ್ಗೆ ಮಾಹಿತಿ ನೀಡಿದ ಅವರು, ಮುಖ್ಯಮಂತ್ರಿಯವರು ಕಲಬುರಗಿಯಲ್ಲಿ ಹೊಸ ಶಾಖೆಯನ್ನು ಉದ್ಘಾಟಿಸಿದ್ದಾರೆ ಎಂದರು.ಪ್ಲಾಸ್ಟಿಕ್ ಮುಕ್ತ ಪ್ಯಾಕೇಜಿಂಗ್ ಕಡೆ ದಿಟ್ಟ ಹೆಜ್ಜೆ: ನಂದಿನಿಯಿಂದ ಪರಿಸರ ಸ್ನೇಹಿ ಹಾಲು ಪ್ಯಾಕೆಟ್ ಪ್ರಯೋಗ!
ಮುಂದಿನ ದಿನಗಳಲ್ಲಿ ರಾಜ್ಯದ ಇತರ ಭಾಗಗಳಲ್ಲಿ ಘಟಕಗಳನ್ನು ತೆರೆಯಲಾಗುವುದು. ತಿರುಪತಿಗೆ ತುಪ್ಪ ಸರಬರಾಜಿನ ಬಗ್ಗೆ ಮಾತನಾಡಿದ ಶಿವಸ್ವಾಮಿ, 5,000 ಮೆಟ್ರಿಕ್ ಟನ್ ತುಪ್ಪವನ್ನು ಈಗಾಗಲೇ ಪೂರೈಸಲಾಗಿದೆ ಎಂದು ಹೇಳಿದರು. ಹೆಚ್ಚಿನ ಬೇಡಿಕೆ ಬಂದರೆ ಇನ್ನಷ್ಟು ತುಪ್ಪ ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕೆಎಂಎಫ್‌ನ ಗುಣಮಟ್ಟ ಮತ್ತು ಕೈಗೆಟುಕುವ ಬೆಲೆಯಿಂದ ಗ್ರಾಹಕರಿಗೆ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ.ಗ್ರಾಹಕರಿಗೆ ರಿಲೀಫ್: ಸೆ. 22 ರಿಂದ ಹಾಲಿನ ಬೆಲೆಯಲ್ಲಿ ಇಳಿಕೆ..!