Skip to main content
ವಿಡಿಯೋ
1/3
crime

'ಸೌಜನ್ಯ ಕೊಲೆ ಸುಳ್ಳು'..ಮಾಸ್ಕ್ ಮ್ಯಾನ್ ಚಿನ್ನಯ್ಯನ ಪತ್ನಿ ಸ್ಫೋಟಕ ಹೇಳಿಕೆ! ಷಡ್ಯಂತ್ರಗಳ ಎಳೆ ಬಿಚ್ಚಿಟ್ಟ ಮಲ್ಲಿಕಾ!

By Gireesh Vasishta
'ಸೌಜನ್ಯ ಕೊಲೆ ಸುಳ್ಳು'..ಮಾಸ್ಕ್ ಮ್ಯಾನ್ ಚಿನ್ನಯ್ಯನ ಪತ್ನಿ ಸ್ಫೋಟಕ ಹೇಳಿಕೆ! ಷಡ್ಯಂತ್ರಗಳ ಎಳೆ ಬಿಚ್ಚಿಟ್ಟ ಮಲ್ಲಿಕಾ!

ಮಂಗಳೂರಿನಲ್ಲಿ ಚಿನ್ನಯ್ಯನ ಪತ್ನಿ ಮಲ್ಲಿಕಾ ನೀಡಿರುವ ಸ್ಫೋಟಕ ಹೇಳಿಕೆ. ಸೌಜನ್ಯ ಕೊಲೆ ಸುಳ್ಳು, ಪತಿ ಚಿನ್ನಯ್ಯನನ್ನು ನೇರವಾಗಿ ಬಾಧೆ ತಪ್ಪಿಸಲು ಆರೋಪ. ಧರ್ಮಸ್ಥಳ ಪ್ರಕರಣದ ನಿಜಸತ್ಯ ಬಹಿರಂಗ!

ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆರೋಪಿ ಚಿನ್ನಯ್ಯನ ಪತ್ನಿ ಮಲ್ಲಿಕಾ, ರಹಸ್ಯ ಕ್ಯಾಮರಾ ಮುಂದೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಸುಳ್ಳು ಎಂದು ಬಾಯಿಬಿಟ್ಟಿದ್ದಾರೆ.

 

ಮಂಗಳೂರಿನಲ್ಲಿ ಈ ಮಾಹಿತಿ ಬಹಿರಂಗಗೊಂಡಿದ್ದು, ಧರ್ಮಸ್ಥಳ ಗ್ರಾಮದಲ್ಲಿ ಸೌಜನ್ಯ ಕೊಲೆ ಸುಳ್ಳು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸುವುದು ಬುರುಡೆ ಗ್ಯಾಂಗ್‌ನ ಮುಖ್ಯ ಉದ್ದೇಶವಾಗಿತ್ತು ಎಂದು ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಹೇಳಿದ್ದಾರೆ.

 

ಮಾಧ್ಯಮದ ಮುಂದೆ ಮಲ್ಲಿಕಾ ನೀಡಿರುವ ಹೇಳಿಕೆ ಈಗ ಆತಂಕಕಾರಿ ಸಂಗತಿಗಳನ್ನು ಬಯಲು ಮಾಡಿದೆ. ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಬಂಧಿತನಾಗಿರುವ ಪತಿ ಚಿನ್ನಯ್ಯನನ್ನು ಬಿಡಿಸಿಕೊಡುವಂತೆ ಮಲ್ಲಿಕಾ ನ್ಯೂಸ್ ಚಾನೆಲ್‌ಗಳಲ್ಲಿ, ಸೌಜನ್ಯ ಸಾವಿನ ಕುರಿತಂತೆ ನೈಜ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.ಇದನ್ನು ಓದಿ: ಇಬ್ಲೂರು ಜಂಕ್ಷನ್‌ ಟ್ರಾಫಿಕ್ ಜಾಮ್ ನಿವಾರಣೆ: ಸಿದ್ದರಾಮಯ್ಯರಿಂದ ಅಜೀಂ ಪ್ರೇಮ್‌ಜಿ‌ಗೆ ವಿಶೇಷ ಮನವಿ!

 


ದೇವಾಲಯಕ್ಕೆ ಕಪ್ಪು ಮಸಿ ಬಳಿಯಲು ಸೌಜನ್ಯ ಪ್ರಕರಣ ಒಂದು ನೆಪ ಅಷ್ಟೇ. ಮೊದಲು ಸೌಜನ್ಯ ತಾಯಿ ಕುಸುಮಾವತಿ ಅವರ ಬ್ರೈನ್‌ ಮ್ಯಾಪಿಂಗ್‌ ಮಾಡಬೇಕು. ದೇವಾಲಯದಲ್ಲಿ ನಡೆದಿದೆ ಎನ್ನಲಾದ ಕೊಲೆ ಒಂದು ದೊಡ್ಡ ಷಡ್ಯಂತ್ರ. ಸೌಜನ್ಯ ತಾಯಿ, ಮಾವ ವಿಠಲ ಗೌಡ, ಗಿರೀಶ್‌ ಮಟ್ಟಣ್ಣವರ್‌, ತಿಮರೋಡಿ ಇವರಿಗೆ ಯಾವುದೇ ತೊಂದರೆ ಇಲ್ಲ. ಆದರೆ, ನನ್ನ ಗಂಡನಿಗೆ ಅಪಾಯವಾದರೆ ನಾನು ಸುಮ್ಮನಿರಲ್ಲ, ನಾನು ಸಾಯುತ್ತೇನೆ ಎಂದು ಮಲ್ಲಿಕಾ ದುಃಖ ತೋಡಿಕೊಂಡಿದ್ದಾರೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+

 


ತನ್ನ ಗಂಡನನ್ನು ಎಲ್ಲರೂ ಸೇರಿ, ಅವನಿಗೆ ಸುಳ್ಳು ಹೇಳಿಕೊಟ್ಟು ಮಾತನಾಡಿಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಸೌಜನ್ಯ ಕೊಲೆಯಾದಾಗ ನಾವು ಊಟಿಯಲ್ಲಿದ್ದೆವು. ಸೌಜನ್ಯ ಪ್ರಕರಣಕ್ಕೂ, ನನ್ನ ಗಂಡನಿಗೂ ಯಾವುದೇ ಸಂಬಂಧ ಇಲ್ಲ. ಸೌಜನ್ಯ ಕೊಲೆಯಾದಾಗ ನಾನು, ಚಿನ್ನಯ್ಯ ಧರ್ಮಸ್ಥಳದಲ್ಲಿ ಇರಲೇ ಇಲ್ಲ ಎಂದು ಮಲ್ಲಿಕಾ ಹೇಳಿದ್ದಾರೆ.

 

ಸೌಜನ್ಯ ಕೊಲೆಯನ್ನು ನೋಡಿದ್ದೇನೆ ಎಂಬ ಚಿನ್ನಯ್ಯನ ಹೇಳಿಕೆ ಸುಳ್ಳು. ಸೌಜನ್ಯ ಕೊಲೆ ನಡೆದಾಗ ನಾವು ಊಟಿಯಲ್ಲಿದ್ದೆವು. ಸೌಜನ್ಯ ಸಾವಿನ ದಿನ ನಾವು ಊಟಿಯಲ್ಲಿ ನನ್ನ ಮಗುವಿನ ಜೊತೆ ಇದ್ದೆವು ಎಂದು ಮಲ್ಲಿಕಾ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.