ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ. ಪ್ರಕರಣದ 17 ಆರೋಪಿಗಳ ವಿರುದ್ಧ ಸೆಪ್ಟೆಂಬರ್ 25ರಂದು ಅಧಿಕೃತವಾಗಿ ದೋಷಾರೋಪಣೆ ನಿಗದಿಪಡಿಸಲು ನ್ಯಾಯಾಲಯ ನಿರ್ಧರಿಸಿದೆ.
ಸೆಪ್ಟೆಂಬರ್ 25ರಂದು ಎಲ್ಲ ಆರೋಪಿಗಳು ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಆರೋಪಿಗಳ ಪಟ್ಟಿಯಲ್ಲಿ ನಟ ದರ್ಶನ್, ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನು, ರವಿ, ಧನರಾಜು, ವಿನಯ್, ನಾಗರಾಜ್, ಲಕ್ಷ್ಮಣ್, ದೀಪಕ್, ಪ್ರದೋಷ್, ಕಾರ್ತಿಕ್, ಕೇಶವಮೂರ್ತಿ ಮತ್ತು ನಿಖಿಲ್ ಮೂರ್ತಿ ಸೇರಿದ್ದಾರೆ.Symbol Premium Men's Slim Fit Stretch Knit Pants - Smart Casual | Flexi Waist
ದೋಷಾರೋಪಣೆಯಲ್ಲಿ ಅಪಹರಣ, ಕೊಲೆ, ಸುಲಿಗೆ, ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಗಂಭೀರ ಆರೋಪಗಳನ್ನು ಉಲ್ಲೇಖಿಸಲಾಗಿದೆ. ನ್ಯಾಯಾಲಯವು ದೋಷಾರೋಪಣೆಗೆ ಮುನ್ನವೇ ಆರೋಪಿಗಳಾದ ಪ್ರದೋಷ್ ಮತ್ತು ದೀಪಕ್ ಸೇರಿದಂತೆ ಕೆಲವರ ಕೇಸ್ ಡಿಸ್ಚಾರ್ಜ್ ಅರ್ಜಿಗಳನ್ನು ತಿರಸ್ಕರಿಸಿದೆ.ದರ್ಶನ್ ಸೋದರಳಿಯ ಚಂದನ್ ಮೈಸೂರಿನಲ್ಲಿ ‘ನೆಮ್ಮದಿಯಾಗಿ ಊಟ ಮಾಡಿ’ ಫುಡ್ ಸ್ಟಾಲ್ ಆರಂಭ..!
ಈ ತೀರ್ಮಾನದಿಂದ ಆರೋಪಿಗಳ ವಿರುದ್ಧದ ಕಾನೂನು ಪ್ರಕ್ರಿಯೆ ಮುಂದುವರಿಯುವುದು ನಿಶ್ಚಿತ. ಅಲ್ಲದೆ, ಸೆಪ್ಟೆಂಬರ್ 25ರಂದು ದೋಷಾರೋಪಣೆ ಪ್ರಕ್ರಿಯೆ ಹಾಗೂ ಜೈಲಿನಲ್ಲಿ ಆರೋಪಿಗಳಿಗೆ ಹಾಸಿಗೆ, ದಿಂಬು ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ನ್ಯಾಯಾಲಯ ಆದೇಶ ಹೊರಡಿಸಲಿದೆ.
ಸಾರ್ವಜನಿಕ, ಸಾಮಾಜಿಕ ಮತ್ತು ಕಾನೂನು ದೃಷ್ಟಿಯಿಂದ ಈ ಪ್ರಕರಣದ ಮುಂದಿನ ನಿರ್ಧಾರಗಳು ಹೆಚ್ಚು ಮಹತ್ವ ಪಡೆದಿವೆ.