ಖ್ಯಾತ ಕನ್ನಡ ಸಾಹಿತಿ ಎಸ್.ಎಲ್. ಭೈರಪ್ಪ ಅವರು 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 24ರಂದು ಕೊನೆಯುಸಿರೆಳೆದ ಅವರಿಗೆ ಎಲ್ಲೆಡೆ ಸಂತಾಪ ಸೂಚಿಸಲಾಗುತ್ತಿದೆ. ಭೈರಪ್ಪ ಅವರ ಅನೇಕ ಪ್ರಸಿದ್ಧ ಕಾದಂಬರಿಗಳು ಚಲನಚಿತ್ರಗಳಾಗಿ ತೆರೆಕಂಡಿವೆ.
ಅವರ 'ವಂಶವೃಕ್ಷ' ಕಾದಂಬರಿ ಆಧರಿಸಿ 1971ರಲ್ಲಿ ಅದೇ ಹೆಸರಿನ ಚಲನಚಿತ್ರ ಬಿಡುಗಡೆಯಾಯಿತು. ಬಿ.ವಿ. ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣುವರ್ಧನ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದು ಕನ್ನಡ ಚಿತ್ರರಂಗದಲ್ಲಿ ಮಹತ್ವದ ಸ್ಥಾನ ಪಡೆದಿದೆ.Symbol Premium Men's Slim Fit Stretch Knit Pants - Smart Casual | Flexi Waist
'ತಬ್ಬಲಿಯು ನೀನಾದೆ ಮಗನೆ' ಕಾದಂಬರಿ 1977ರಲ್ಲಿ ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತ್ ನಿರ್ದೇಶನದಲ್ಲಿ ಚಲನಚಿತ್ರ ರೂಪ ಪಡೆಯಿತು. ಈ ಚಿತ್ರದಲ್ಲಿ ಖ್ಯಾತ ಬಾಲಿವುಡ್ ನಟ ನಸೀರುದ್ಧೀನ್ ಶಾ ಕೂಡ ಅಭಿನಯಿಸಿದ್ದರು.
'ಮತದಾನ' ಕಾದಂಬರಿಯನ್ನು ಆಧರಿಸಿ ಟಿ.ಎನ್. ಸೀತಾರಾಮ್ ನಿರ್ದೇಶನದ ಚಲನಚಿತ್ರ 2001ರಲ್ಲಿ ತೆರೆಕಂಡಿತು. ಅನಂತ್ ನಾಗ್, ತಾರಾ ಮತ್ತು ದೇವರಾಜ್ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿತು.ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ: 17 ಆರೋಪಿಗಳ ವಿರುದ್ಧ ನಾಳೆಯೇ ದೋಷಾರೋಪಣೆ ದಿನಾಂಕ ಘೋಷಣೆ!
2006ರಲ್ಲಿ ಎಸ್.ಎಲ್. ಭೈರಪ್ಪ ಅವರ 'ನಾಯಿ ನೆರಳು' ಕಾದಂಬರಿಯನ್ನು ಗಿರೀಶ್ ಕಾಸರವಳ್ಳಿ ಅವರು ಚಲನಚಿತ್ರವಾಗಿ ನಿರ್ದೇಶಿಸಿದರು. ಈ ಚಿತ್ರದಲ್ಲಿ ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಮರ್ಶಕರಿಂದ ಮೆಚ್ಚುಗೆ ಗಳಿಸಿತು.
ಭೈರಪ್ಪ ಅವರ 'ಗೃಹಭಂಗ' ಮತ್ತು 'ದಾಟು' ಕಾದಂಬರಿಗಳು ಟಿವಿ ಸರಣಿಗಳಾಗಿ ಮೂಡಿಬಂದಿವೆ. ಜೊತೆಗೆ, ಅವರ 'ಪರ್ವ' ಕಾದಂಬರಿಯನ್ನು ಆಧರಿಸಿ ಪ್ರಕಾಶ್ ಬೆಳವಾಡಿ ಅವರು ನಾಟಕ ನಿರ್ದೇಶಿಸಿದ್ದು, ಇದು ಹಲವು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.