ವಿಶ್ವಸಂಸ್ಥೆ: ಸಾಮಾನ್ಯವಾಗಿ ವಿಶ್ವಸಂಸ್ಥೆಯಲ್ಲಿ ಜಾಗತಿಕ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುವುದು ಸಾಮಾನ್ಯವಾಗಿದೆ. ಆದರೆ ಇದೇ ಮೊದಲ ಭಾರಿಗೆ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಟರ್ಕಿ ಪ್ರಧಾನಿ ತಯ್ಯಪ್ ಎರ್ಡೊಗನ್ ಅವರು ಪ್ರಸ್ತಾಪಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಏರ್ಪಟ್ಟಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವು ಯುದ್ಧ ವಿರಾಮದಲ್ಲಿ ಕೊನೆಗೊಂಡಿದ್ದರಿಂದ ಬಹಳ ಸಂತಸವಾಗಿದೆ ಎಂದಿದ್ದಾರೆ.ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ..!!
ಭಯೋತ್ಪಾದನೆ ನಿಗ್ರಹಿಸುವಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಅತ್ಯಂತ ಉದ್ವಿಗ್ನ ಸ್ಥಿತಿ ಏರ್ಪಟ್ಟಿತ್ತು. ಆದರೆ ನಂತರದ ಮಾತುಕತೆಗಳ ಮೂಲಕ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಇದ್ದ ಉದ್ವಿಗ್ನತೆ ಶಮನವಾಗಿದೆ ಎಂದರು. ಆದರೆ ವಿಶ್ವಸಂಸ್ಥೆ ನಿರ್ಣಯದ ಆಧಾರದ ಮೇಲೆ ಭಾರತ ಮತ್ತು ಪಾಕಿಸ್ತಾನವು ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಅದು ಕಾಶ್ಮೀರದಲ್ಲಿರುವ ನನ್ನ ಸಹೋದರ ಮತ್ತು ಸಹೋದರಿಯರಿಗೆ ಉತ್ತಮ ಎಂದಿದ್ದಾರೆ.ಇದನ್ನೂ ಓದಿ: ಲಡಾಕ್ ರಾಜ್ಯಸ್ಥಾನಮಾನಕ್ಕಾಗಿ ಹೋರಾಟ: ಪ್ರತಿಭಟನಾಕಾರರಿಂದ ಬಿಜೆಪಿ ಕಚೇರಿಗೆ ಬೆಂಕಿ.!
ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ವಿಶ್ವಸಂಸ್ಥೆಯ ಪ್ರಮುಖ ಉದ್ಧೇಶವಾಗಿದೆ ಎಂದರು. ಕಳೆದ ಏಪ್ರಿಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಎದ್ದಿದ್ದ ಉದ್ವಿಗ್ನತೆ ಸಂಘರ್ಷವಾಗಿ ಬದಲಾಗಿತ್ತು. ಯುದ್ಧವಿರಾಮದ ಮೂಲಕ ಅದು ಕೊನೆಗೊಂಡಿದ್ದು ಸಂತಸವಾಗಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದ ಚರ್ಚೆ ವೇಳೆ ಹೇಳಿದ್ದಾರೆ.ಇದನ್ನೂ ಓದಿ: ಎಸ್.ಎಲ್. ಭೈರಪ್ಪ ಅವರ ನಿಧನ: ಸಿದ್ದರಾಮಯ್ಯ ಮತ್ತು ಮೋದಿಯವರು ಕೂಡ ಸಂತಾಪ..!
ಪಹಲ್ಲಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಬಳಿಕ ಅದಕ್ಕೆ ಪ್ರತಿಯಾಗಿ, ಭಾರತವು ಮೇ 7ರಂದು ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ಪ್ರಾರಂಭಿಸಿತ್ತು. ಪಾಕಿಸ್ತಾನ ಪ್ರತಿ ದಾಳಿಗೆ ಯತ್ನಿಸಿದಾಗ, ಅದರ ಸೇನಾನೆಲೆಗಳ ಮೇಲೆ ಭಾರತ ದಾಳಿ ನಡೆಸಿತ್ತು. ಈ ದಾಳಿಗಳು ನಾಲ್ಕು ದಿನಗಳ ತೀವ್ರ ಘರ್ಷಣೆಗಳಿಗೆ ಕಾರಣವಾಗಿದ್ದವು. ಮೇ 10ರಂದು ಯುದ್ಧ ವಿರಾಮದ ಮೂಲಕ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಒಪ್ಪಂದದೊಂದಿಗೆ ಸಂಘರ್ಷವು ತನ್ನ ಕೊನೆಯನ್ನು ಕಂಡುಕೊಂಡಿತ್ತು. SGF11 Women's Kanjivaram Soft Lichi Silk Saree With Blouse Piece