Skip to main content
ವಿಡಿಯೋ
1/3
cinema

ಈ ಹಳೆ ಸಾಂಪ್ರದಾಯಕ್ಕೆ ಬ್ರೇಕ್ ಹಾಕಿ ಶುರುವಾಗಲಿದೆ ಕನ್ನಡದ ಬಿಗ್‌ಬಾಸ್-12..! ಯಾಕೆ ಹೀಗೆ ಮಾಡ್ತು ಚಾನೆಲ್?

By Ram Chethan
ಈ ಹಳೆ ಸಾಂಪ್ರದಾಯಕ್ಕೆ ಬ್ರೇಕ್ ಹಾಕಿ ಶುರುವಾಗಲಿದೆ ಕನ್ನಡದ ಬಿಗ್‌ಬಾಸ್-12..! ಯಾಕೆ ಹೀಗೆ ಮಾಡ್ತು ಚಾನೆಲ್?

ಸೆಪ್ಟೆಂಬರ್ 28 ರಂದು ಕಿಚ್ಚ ಸುದೀಪ್ ನೇತೃತ್ವದಲ್ಲಿ ‘ಬಿಗ್ ಬಾಸ್ 12’ ಕನ್ನಡದಲ್ಲಿ ಪ್ರಾರಂಭವಾಗಲಿದೆ. ಹೊಸತೊಂದರೊಂದಿಗೆ, ಈ ಬಾರಿ ಸಾಂಪ್ರದಾಯಿಕ ಸುದ್ದಿಗೋಷ್ಠಿ ರದ್ದುಪಡಿಸಿ ಮನೆಗೆ ತಕ್ಷಣ ಲೈವ್ ಪ್ರವೇಶ ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 12' ಶುರುವಾಗಲು ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 28 ರಂದು ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಿದ್ದಾರೆ. ಈ ಬಾರಿ ಹಲವಾರು ಹೊಸತನಗಳೊಂದಿಗೆ ಶೋ ಮೂಡಿಬರಲಿದೆ ಎಂದು ವರದಿಯಾಗಿದೆ. ಆದರೆ, ಈ ಬಾರಿ ಒಂದು ಮಹತ್ವದ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿರುವ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ 'ಬಿಗ್ ಬಾಸ್ 12' ರ ಮನೆ ಸಂಪೂರ್ಣವಾಗಿ ಸಿದ್ಧವಾಗಿದೆ. ಇತ್ತೀಚೆಗೆ, ದೊಡ್ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಲಾಗಿದ್ದು, ಆಟಕ್ಕೆ ಯಾವುದೇ ವಿಘ್ನಗಳು ಬಾರದಿರಲಿ ಎಂದು ಪ್ರಾರ್ಥಿಸಲಾಗಿದೆ.Symbol Premium Men's Casual Cotton Poplin Shirt (Regular Fit)

ಸಾಮಾನ್ಯವಾಗಿ ಪ್ರತಿ ವರ್ಷ ಬಿಗ್ ಬಾಸ್ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ, ಕಾರ್ಯಕ್ರಮದ ಬಗ್ಗೆ ಮತ್ತು ಪ್ರಸಾರದ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಈ ಸಂಪ್ರದಾಯಕ್ಕೆ ವಿರಾಮ ನೀಡಲಾಗಿದೆ.

ಈ ಹಿಂದೆ ಕಾರ್ಯಕ್ರಮದ ಕುರಿತು ಹರಡಿದ್ದ ವದಂತಿಗಳಿಗೆ ಸ್ಪಷ್ಟನೆ ನೀಡಲು ಸುದೀಪ್ ಅವರ ಸಮ್ಮುಖದಲ್ಲಿಯೇ ಒಂದು ಸುದ್ದಿಗೋಷ್ಠಿ ನಡೆಸಲಾಗಿತ್ತು. ಹೀಗಾಗಿ, ಪ್ರತ್ಯೇಕವಾಗಿ ಮತ್ತೊಂದು ಸುದ್ದಿಗೋಷ್ಠಿಯನ್ನು ಆಯೋಜಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.S.L ಭೈರಪ್ಪ ಅವರ ಕಾದಂಬರಿ ಆಧಾರಿತ ಸಿನಿಮಾಗಳು ಎಷ್ಟಿವೆ ಗೊತ್ತಾ? ಇಲ್ಲಿವೆ ನೋಡಿ!

'ಬಿಗ್ ಬಾಸ್' ಹೊಸ ಸೀಸನ್ ಅನ್ನು ಜಿಯೋ ಹಾಟ್ ಸ್ಟಾರ್‌ನಲ್ಲಿ 24 ಗಂಟೆಗಳ ಕಾಲ ಲೈವ್ ಆಗಿ ಪ್ರಸಾರ ಮಾಡಲು ಯೋಜಿಸಲಾಗಿದೆ. ಇದರ ಮೂಲಕ ರಾತ್ರಿ 9.30ಕ್ಕೆ ಪ್ರಸಾರವಾಗುವ ಸಂಚಿಕೆಗೂ ಮುನ್ನವೇ ಕೆಲವು ವಿಷಯಗಳನ್ನು ಲೈವ್ ಮೂಲಕ ತಿಳಿದುಕೊಳ್ಳಲು ಪ್ರೇಕ್ಷಕರಿಗೆ ಅವಕಾಶ ಸಿಗಲಿದೆ.

ಈ ಬಾರಿಯ ಬಿಗ್ ಬಾಸ್‌ಗೆ ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಿನಿಮಾ, ಧಾರಾವಾಹಿ ನಟರು ಹಾಗೂ ಯೂಟ್ಯೂಬರ್‌ಗಳು ಕಾರ್ಯಕ್ರಮದ ಭಾಗವಾಗುವ ಸಾಧ್ಯತೆ ಇದೆ.