ವಿಜಯಪುರ: ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಯಾವುದೇ ಟ್ರಸ್ಟ್ಗೆ ಸಂಬಂಧವಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಪೀಠವನ್ನು ಭಕ್ತರು ಸ್ಥಾಪಿಸಿದ್ದು, ಟ್ರಸ್ಟ್ಗೆ ಯಾವುದೇ ಉಚ್ಚಾಟನೆಯ ಅಧಿಕಾರವಿಲ್ಲ. ಇಂತಹ ನೂರಾರು ಟ್ರಸ್ಟ್ಗಳಿವೆ ಎಂದು ಅವರು ಹೇಳಿದರು.ಕೂಡಲಸಂಗಮ ಪಂಚಮಸಾಲಿ ಪೀಠವನ್ನು ಭಕ್ತರು, ಲಿಂಗಾಯತ ಮಠಾಧೀಶರ ಒಕ್ಕೂಟ, ಸಹೃದಯಿ ಸಂತರ ಸಮ್ಮೇಳನ ಸೇರಿದಂತೆ ಎಲ್ಲರ ಸಮಕ್ಷಮದಲ್ಲಿ ಸ್ಥಾಪಿಸಲಾಗಿದೆ.ಇದನ್ನೂ ಓದಿ: ಕಥೆ ಬರೆದು ದಂತಕಥೆಯಾದ ಪದ್ಮಭೂಷಣ ಪುರಸ್ಕೃತರಾದ ಡಾ. S.L ಭೈರಪ್ಪ: ನಿಧನಕ್ಕೆ ಗಣ್ಯರು ಸೇರಿ ಹಲವರ ಕಂಬನಿ
ಈ ಪೀಠ ಸಂಪೂರ್ಣ ಸ್ವತಂತ್ರವಾಗಿದೆ. ಈ ಹಿಂದೆ ಟ್ರಸ್ಟ್ ಪದಾಧಿಕಾರಿಗಳು ಮಠಕ್ಕೆ ಜಾಗ ನೀಡುವ ಭರವಸೆ ನೀಡಿದ್ದರು. ಜೊತೆಗೆ, ತನ್ನನ್ನು ಟ್ರಸ್ಟ್ನ ಅಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿದ್ದರೂ, ಆ ಭರವಸೆ ಈಡೇರಿಲ್ಲ. ಈ ಟ್ರಸ್ಟ್ ವೈಯಕ್ತಿಕವಾಗಿ ರಚನೆಯಾಗಿದ್ದು, ಪೀಠಕ್ಕೆ ಭೂಮಿ ನೀಡುವ ಭರವಸೆಯೊಂದಿಗೆ ಟ್ರಸ್ಟ್ ಸದಸ್ಯರು ತಮಗಾಗಿ ಜಮೀನು ಒಡವೆ ಮಾಡಿಕೊಂಡಿದ್ದಾರೆ. ಆದ್ದರಿಂದ, ಸಮಾಜದ ಶಾಶ್ವತ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವ ಗುರಿಯೊಂದಿಗೆ ಸಮಾಜ ಸಂಘಟನೆಯ ಕೆಲಸದಲ್ಲಿ ತೊಡಗಿದ್ದೇನೆ ಎಂದು ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಟರ್ಕಿ ಪ್ರಧಾನಿಯಿಂದ ಕಾಶ್ಮೀರ ವಿಷಯ ಪ್ರಸ್ತಾಪ…!!!
ಕೂಡಲಸಂಗಮವನ್ನು ಮೂಲಪೀಠವಾಗಿಟ್ಟುಕೊಂಡು ಭಕ್ತರ ಸಭೆ ನಡೆಸಿ ಶಾಖಾ ಮಠಗಳನ್ನು ಸ್ಥಾಪಿಸಲಾಗುವುದು. ಒಂದು ಗುಡಿಸಲಿನಲ್ಲಿಯೂ ಸಮಾಜ ಸಂಘಟನೆಯ ಕಾರ್ಯವನ್ನು ಮುಂದುವರೆಸಲು ಬದ್ಧನಾಗಿದ್ದೇನೆ. ಭಕ್ತರ ನಿರ್ಧಾರವೇ ಅಂತಿಮವಾದದ್ದು ಎಂದು ಅವರು ಒತ್ತಿ ಹೇಳಿದರು. ಲಿಂಗಾಯತ ಧರ್ಮಕ್ಕೆ ಇನ್ನೂ ತನ್ನದೇ ಆದ ಕೋಡ್ ದೊರಕಿಲ್ಲ. ಇದರ ಜೊತೆಗೆ, ಪಂಚಮಸಾಲಿ ಸಮಾಜದ ಮೀಸಲಾತಿಗೆ ಯಾವುದೇ ತೊಂದರೆಯಾಗಬಾರದೆಂದು, ಧರ್ಮದ ಕಾಲಂನಲ್ಲಿ ಹಿಂದೂ ಎಂದು ಮತ್ತು ಜಾತಿಯ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಯಿಸುವ ನಿರ್ಣಯವನ್ನು ಸ್ವೀಕರಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.SGF11 Women's Kanjivaram Soft Lichi Silk Saree With Blouse Piece