ಬೆಂಗಳೂರಿನ ಮಡಿವಾಳದ ಸಂಧ್ಯಾ ಥಿಯೇಟರ್ ಬಳಿ ಪವನ್ ಕಲ್ಯಾಣ್ ಅಭಿನಯದ 'OG' ಚಿತ್ರ ಬಿಡುಗಡೆ ವೇಳೆ ಖಡ್ಗ ಪ್ರದರ್ಶನ ನಡೆದಿದೆ. ಚಿತ್ರದ ಮಧ್ಯರಾತ್ರಿ ಪ್ರದರ್ಶನದ ಸಮಯದಲ್ಲಿ ಈ ಘಟನೆ ವರದಿಯಾಗಿದ್ದು, ಸ್ಥಳೀಯರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.Fossil Townsman Auto Analog Black Dial Men's Watch-ME3170
ವಾಸ್ತವವಾಗಿ, ಇದು ಪ್ಲಾಸ್ಟಿಕ್ ಖಡ್ಗಗಳ ಪ್ರದರ್ಶನವಾಗಿತ್ತು. ಚಿತ್ರದಲ್ಲಿ ಪವನ್ ಕಲ್ಯಾಣ್ ಖಡ್ಗ ಹಿಡಿದಿರುವ ದೃಶ್ಯಗಳಿದ್ದು, ಇದರಿಂದ ಸ್ಫೂರ್ತಿಗೊಂಡ ಯುವಕರು ಪ್ಲಾಸ್ಟಿಕ್ ಖಡ್ಗಗಳನ್ನು ತಂದಿದ್ದರು. ಜಯನಗರದಲ್ಲಿ 200 ರೂಪಾಯಿ ನೀಡಿ ಈ ಪ್ಲಾಸ್ಟಿಕ್ ಖಡ್ಗಗಳನ್ನು ಖರೀದಿಸಲಾಗಿತ್ತು.ಈ ಹಳೆ ಸಾಂಪ್ರದಾಯಕ್ಕೆ ಬ್ರೇಕ್ ಹಾಕಿ ಶುರುವಾಗಲಿದೆ ಕನ್ನಡದ ಬಿಗ್‌ಬಾಸ್-12..! ಯಾಕೆ ಹೀಗೆ ಮಾಡ್ತು ಚಾನೆಲ್?
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಮಡಿವಾಳ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಪ್ಲಾಸ್ಟಿಕ್ ಖಡ್ಗಗಳನ್ನು ವಶಪಡಿಸಿಕೊಂಡು, ಸಿನಿಮಾ ಅಭಿಮಾನಿಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ನೀಡಿದರು. ಈ ಘಟನೆ ತಾತ್ಕಾಲಿಕವಾಗಿ ಗೊಂದಲ ಸೃಷ್ಟಿಸಿದರೂ, ಯಾವುದೇ ಗಂಭೀರ ಅನಾಹುತ ಸಂಭವಿಸಿಲ್ಲ.