ಕೆಲವು ವಾರಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರವು ಸಿನಿಮಾ ಟಿಕೆಟ್ ದರಗಳ ಕುರಿತು ಮಹತ್ವದ ಆದೇಶ ಹೊರಡಿಸಿತ್ತು. ಇದರನ್ವಯ, ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸ್‌ಗಳನ್ನು ಒಳಗೊಂಡಂತೆ, ಟಿಕೆಟ್ ದರವನ್ನು ₹200ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಹೊಂಬಾಳೆ ಫಿಲಂಸ್ ಸೇರಿದಂತೆ ಕೆಲವು ನಿರ್ಮಾಣ ಸಂಸ್ಥೆಗಳು ಸರ್ಕಾರದ ಈ ಆದೇಶದ ವಿರುದ್ಧ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ಪಡೆದಿವೆ.
ಈ ಬೆಳವಣಿಗೆಗಳ ನಡುವೆ, ರಾಜ್ಯ ಸರ್ಕಾರವು ಕನ್ನಡ ಚಿತ್ರರಂಗ ಮತ್ತು ಸಿನಿಮಾ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಹೊಸ ಯೋಜನೆಯನ್ನು ಹಾಕಿಕೊಂಡಿದೆ. ಕನ್ನಡ ಸಿನಿಮಾಗಳನ್ನು ಒಟಿಟಿಗಳು ನಿರ್ಲಕ್ಷಿಸುತ್ತಿವೆ ಮತ್ತು ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ ಎಂಬ ಆರೋಪಗಳು ಬಹಳ ಹಿಂದಿನಿಂದಲೂ ಕೇಳಿಬರುತ್ತಿವೆ. ಸ್ಟಾರ್ ನಟರ ಸಿನಿಮಾಗಳಿಗೂ ಸಹ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬ ದೂರುಗಳಿವೆ. ಹಲವು ನಿರ್ಮಾಪಕರು ಮತ್ತು ನಿರ್ದೇಶಕರು ಈ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.Fossil Leather Analog Blue Dial Men's Watch-Me3263, Band Color:Brown
ಇದೀಗ, ರಾಜ್ಯ ಸರ್ಕಾರವೇ ಕನ್ನಡ ಚಿತ್ರರಂಗದ ನೆರವಿಗೆ ಧಾವಿಸಿದ್ದು, ತನ್ನದೇ ಆದ ಒಟಿಟಿ ವೇದಿಕೆಯನ್ನು ಪ್ರಾರಂಭಿಸಲು ಮುಂದಾಗಿದೆ. ಈ ಒಟಿಟಿ ಪ್ರಾರಂಭದ ಯೋಜನೆ ಹೊಸದೇನಲ್ಲ; ಹಿಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದರು.
ಒಟಿಟಿ ಸ್ಥಾಪನೆಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಒಟಿಟಿ ನಿರ್ಮಾಣ, ಅದರ ಕಾರ್ಯವೈಖರಿ ಮತ್ತು ಇತರೆ ವಿವರಗಳ ಕುರಿತು ನೀಲನಕ್ಷೆಯನ್ನು ಸಿದ್ಧಪಡಿಸಲಿದೆ. ಒಟಿಟಿ ನಿರ್ಮಾಣದ ವೆಚ್ಚ, ಸರ್ಕಾರದಿಂದ ಬೇಕಾಗುವ ಅನುದಾನ ಮತ್ತಿತರ ವಿಷಯಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಮಾಹಿತಿ ಮತ್ತು ಪ್ರಸಾರ ಇಲಾಖೆಯ ಆಯುಕ್ತರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ - ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದು ಮಿಂಚಿದ ಪುಟಾಣಿ ತಾರೆ ಯಾರು ಗೊತ್ತಾ?
ಸಮಿತಿಯಲ್ಲಿ ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ ಪಾಷಾ, ನಟ ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಸಿನಿಮಾ ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್ ಮತ್ತು ರಾಕ್‌ಲೈನ್ ವೆಂಕಟೇಶ್, ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್, ಚಲನಚಿತ್ರ ಅಕಾಡೆಮಿ ಸದಸ್ಯ ಐವಾನ್ ಡಿಸೋಜಾ ಸೇರಿದಂತೆ ಇನ್ನಿತರರು ಸೇರಿದ್ದಾರೆ.
ನೆರೆಯ ಕೇರಳ ರಾಜ್ಯದಲ್ಲಿ 2024ರಲ್ಲಿ ಅಲ್ಲಿನ ಸರ್ಕಾರವು 'ಸಿ ಸ್ಪೇಸ್' ಹೆಸರಿನ ಒಟಿಟಿ ವೇದಿಕೆಯನ್ನು ಪ್ರಾರಂಭಿಸಿತ್ತು. ಇದು ಕೇವಲ ಮಲಯಾಳಂ ಸಿನಿಮಾಗಳನ್ನು ಮಾತ್ರ ಪ್ರದರ್ಶಿಸುವ ಮೂಲಕ ಚಿತ್ರರಂಗಕ್ಕೆ ನೆರವು ನೀಡುತ್ತಿದೆ. ಈ ಒಟಿಟಿಯಿಂದಾಗಿ ಪ್ರೇಕ್ಷಕರು ಕಡಿಮೆ ಬೆಲೆಗೆ ಮಲಯಾಳಂ ಸಿನಿಮಾಗಳನ್ನು ವೀಕ್ಷಿಸಲು ಸಾಧ್ಯವಾಗಿದೆ. 'ಸಿ ಸ್ಪೇಸ್' ಪೇ-ಪರ್-ವ್ಯೂ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು,
ಸಂಗ್ರಹವಾದ ಹಣದಲ್ಲಿ 50% ಅನ್ನು ನಿರ್ಮಾಪಕರಿಗೆ ನೀಡಲಾಗುತ್ತದೆ. ಇದೇ ಮಾದರಿಯ ಒಟಿಟಿ ಕನ್ನಡ ಚಿತ್ರರಂಗಕ್ಕೂ ನಿರ್ಮಾಣವಾಗುವ ನಿರೀಕ್ಷೆಯಿದೆ.