Skip to main content
ವಿಡಿಯೋ
1/2
general

ಧರ್ಮಸ್ಥಳ ತಲೆಬುರುಡೆ ಪ್ರಕರಣ: PIL ವಜಾ, ಚಿನ್ನಯ್ಯ ತಂಡ ಮತ್ತೆ ತನಿಖೆಗೆ ಒತ್ತಾಯ!

By Shravanthi R
ಧರ್ಮಸ್ಥಳ ತಲೆಬುರುಡೆ ಪ್ರಕರಣ: PIL ವಜಾ, ಚಿನ್ನಯ್ಯ ತಂಡ ಮತ್ತೆ ತನಿಖೆಗೆ ಒತ್ತಾಯ!

1995–2004 ರ ಪ್ರಕರಣಗಳ ಮರುತನಿಖೆಗೆ ಸಲ್ಲಿಸಿದ PIL ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದರೂ, ಚಿನ್ನಯ್ಯ ತಂಡ ರಾಜ್ಯ ಸರ್ಕಾರದ ಗಮನ ಸೆರೆಸಿಕೊಂಡು ತನಿಖೆ ಮುಂದುವರಿಸಲು ಮನವಿ ಮಾಡಿದೆ.

ಧರ್ಮಸ್ಥಳ ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಲಭಿಸಿದೆ. 1995 ರಿಂದ 2004 ರವರೆಗಿನ ಪ್ರಕರಣಗಳ ಮರುತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಮೇ 5, 2023 ರಂದು ವಜಾಗೊಂಡಿದ್ದರೂ, ಈ ವಿಷಯವನ್ನು ಮರೆಮಾಚಿ ರಾಜ್ಯ ಸರ್ಕಾರಕ್ಕೆ ತನಿಖೆ ನಡೆಸುವಂತೆ ಚಿನ್ನಯ್ಯನ ಹಿಂದಿದ್ದ ತಂಡ ಮನವಿ ಮಾಡಿರುವುದು ಈಗ ಬಹಿರಂಗವಾಗಿದೆ.

ಈ PIL ವಜಾಗೊಳಿಸಿದ್ದ ನ್ಯಾಯಾಲಯವು, ಇಂತಹ ಅರ್ಜಿ ಸಲ್ಲಿಸುವುದೇ ನಿಷ್ಪ್ರಯೋಜಕ ಎಂದು ಅಭಿಪ್ರಾಯಪಟ್ಟಿತ್ತು. ಸುಪ್ರೀಂ ಕೋರ್ಟ್, ಇದು ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಅಲ್ಲ, ಬದಲಿಗೆ ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಷನ್, ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್, ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್ ಎಂದು ಹೇಳಿಕೆ ನೀಡಿತ್ತು. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ವಕೀಲ ಕೆ.ವಿ. ಧನಂಜಯ ಸಲ್ಲಿಸಿದ್ದ PIL ಅನ್ನು ವಜಾಗೊಳಿಸಿತ್ತು.

SIT ತನಿಖೆ ಮತ್ತಷ್ಟು ಚುರುಕು:

ಧರ್ಮಸ್ಥಳ ಶವ ಹೂತ ಪ್ರಕರಣದ ಕುರಿತು SIT ತನಿಖೆಯನ್ನು ಮುಂದುವರಿಸಲು ರಾಜ್ಯ ಸರ್ಕಾರ ಆಸಕ್ತಿ ಹೊಂದಿದೆ ಎನ್ನಲಾಗಿದೆ. ತನಿಖೆಯು ಪ್ರಗತಿಯ ಹಂತದಲ್ಲಿದ್ದು, ಅದು ಸಂಪೂರ್ಣವಾಗುವವರೆಗೆ ಪ್ರಕರಣವನ್ನು ಮುಕ್ತಾಯಗೊಳಿಸಬಾರದು ಎಂದು ನಿರ್ಧರಿಸಲಾಗಿದೆ. ಬದಲಾಗಿ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ SIT ಮುಖ್ಯಸ್ಥ ಪ್ರಣವ್ ಮೊಹಾಂತಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ, ಈ ಷಡ್ಯಂತ್ರದ ಹಿಂದಿರುವವರನ್ನು ಪತ್ತೆಹಚ್ಚುವಂತೆಯೂ ರಾಜ್ಯ ಸರ್ಕಾರ ಮೌಖಿಕ ಸೂಚನೆ ನೀಡಿದೆ. Disha UPSC Paper 2 CSAT 31 Topic-wise IAS UPSC Prelims Previous Year Question Papers (1995 - 2025) with 3 Practice Sets | Civil Services Aptitude Test PYQs | UPSC Book 2025 - 26 by Mrunal Patel Unknown Binding – 5 June 2025

'40 ವರ್ಷಗಳ ಹಿಂದೆಯೇ ಷಡ್ಯಂತ್ರ ನಡೆದಿತ್ತು' -

ಬುರುಡೆ ಪ್ರಕರಣಕ್ಕೆ ಸಾಕ್ಷಿಗಳಾಗಿ ಬರುವವರನ್ನು ಆರೋಪಿಗಳೆಂದು ಪರಿಗಣಿಸಿ ತನಿಖೆ ಮಾಡುವಂತೆ ಧರ್ಮಸ್ಥಳ ಕ್ಷೇತ್ರದ ಭಕ್ತ ಶಶಿರಾಜ್ ಶೆಟ್ಟಿ ಅವರು SIT ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಚಿನ್ನಯ್ಯ ತಾನು ಹೇಳಿದ್ದೆಲ್ಲವೂ ಸುಳ್ಳು ಎಂದು ಒಪ್ಪಿಕೊಂಡಿದ್ದಾನೆ. ಈ ನಡುವೆ, ಧರ್ಮಸ್ಥಳದ ವಿರುದ್ಧದ ಷಡ್ಯಂತ್ರಕ್ಕೆ ಸಾಕ್ಷಿಗಳಾಗಿ ಅನೇಕರು ಮುಂದೆ ಬರುತ್ತಿದ್ದಾರೆ ಎಂದು ಶಶಿರಾಜ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.

40 ವರ್ಷಗಳ ಹಿಂದೆಯೇ ಇದೇ ರೀತಿ ಬೇರೆ ಬೇರೆ ಷಡ್ಯಂತ್ರಗಳನ್ನು ನಡೆಸಲಾಗಿತ್ತು. ಕಾನೂನಿನಡಿ ನ್ಯಾಯ ಪಡೆಯದೆ, ರಸ್ತೆ ಬದಿ ಪ್ರತಿಭಟನೆ ನಡೆಸಿ ನಿಂದಿಸುವ ಕೆಲಸ ಮಾಡಲಾಗುತ್ತಿದೆ. ಸಾಕ್ಷಿ ಎಂದು ಹೇಳಿಕೊಂಡು ಬರುವವರು ಆಮಿಷಕ್ಕೆ ಒಳಗಾಗಿ ಸುಳ್ಳು ಹೇಳುವ ಸಾಧ್ಯತೆ ಇರುವುದರಿಂದ, ಅವರನ್ನೂ ವಿಚಾರಣೆ ಮಾಡಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಇದನ್ನೂ ಓದಿ: ನೋಯ್ಡಾದಲ್ಲಿ ಯುಪಿ ಟ್ರೇಡ್ ಶೋ ಉದ್ಘಾಟನೆ - ಅನಿಶ್ಚಿತತೆಯ ನಡುವೆಯೂ ಸ್ಥಿರ ಭಾರತ - ಪ್ರಧಾನಿ ಮೋದಿ