Skip to main content
ವಿಡಿಯೋ
1/2
crime

ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಕುಡಿದ ಮತ್ತಿನಲ್ಲಿ ಹ**ಲ್ಲೆ - ಓರ್ವನ ಬಂಧನ

By Shravanthi R
ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಕುಡಿದ ಮತ್ತಿನಲ್ಲಿ ಹ**ಲ್ಲೆ - ಓರ್ವನ ಬಂಧನ

ಕುಡಿತದ ಅಮಲಿನಲ್ಲಿ ಕ್ಷುಲ್ಲಕ ಗಲಾಟೆ ಒಂದು ಕೊಲೆಗೆ ಕಾರಣವಾಗಿದೆ. ವಿಜಯ್ ಎಂಬಾತನ ಮೇಲೆ ಶಿವು ಮತ್ತು ಆತನ ಗ್ಯಾಂಗ್ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿಜಯ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ, ಶಿವುನನ್ನು ಬಂಧಿಸಿ ಇತರೆ ಆರೋಪಿಗಳ ಹುಡುಕಾಟದಲ್ಲಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ನಗರದ ಕಾಟನ್‌ಪೇಟೆ ಪೋಲಿಸ್‌ ಠಾಣಾ ವ್ಯಾಪ್ತಿಯಲ್ಲಿ ಹುಚ್ಚಾಟದ ಘಟನೆಯೊಂದು ನಡೆದಿದೆ. ಕುಡಿದ ಅಮಲಿನಲ್ಲಿ ಮತ್ತೇರಿ ಕ್ಷುಲ್ಲಕ ಗಲಾಟೆಯೊಂದು ಕೊಲೆಯಾಗಿ ಮಾರ್ಪಟ್ಟಿದೆ. ಶಿವು ಅಂಡ್‌ ಗ್ಯಾಂಗ್ ಸೇರಿಕೊಂಡು ವಿಜಯ್‌ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವಿಜಯ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಮನಸ್ತಾಪದಿಂದ ಶುರುವಾಗಿ, ಹತ್ಯೆಗೈಯ್ಯುವಲ್ಲಿ ಅಂತ್ಯವಾಗಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಳೆದ ರಾತ್ರಿ ಕುಡಿದ ಅಮಲಿನಲ್ಲಿ ವಿಜಯ್ ಮತ್ತು ಶಿವು ಗ್ಯಾಂಗ್ ನಡುವೆ ಗಲಾಟೆ ಮೊದಲುಗೊಂಡಿದೆ. ಈ ವೇಳೆ ವಿಜಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿರುವ ಹಲ್ಲೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಈ ಸಲುವಾಗಿ ಆರೋಪಿಗಳನ್ನು ಬಂಧಿಸಿದ್ದು, ಕ್ರಮಕೈಗೊಂಡಿದ್ದಾರೆ. Disha 31 Topic-wise UPSC Civil Services IAS Prelims Previous Year Solved Papers 1 & 2 (1995 - 2025) by Mrunal Patel 16th Edition | General Studies & Aptitude (CSAT) PYQs Question Bank for 2026 Exam Paperback – 28 May 2025

ಘಟನೆ ಸಂಬಂಧ ಪರಿಶೀಲನೆ ನಡೆಸಿ, ಕಾಟನ್‌ಪೇಟೆ ಪೊಲೀಸರು ಈ ಮೊದಲು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ವಿಜಯ್ ಸಾವಿನ ನಂತರ ಈಗ ಕೊಲೆ ಪ್ರಕರಣವನ್ನಾಗಿ ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿವು ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿ, ಉಳಿದ ಆರೋಪಿಗಳ ಪತ್ತೆ ಹಚ್ಚಿದ್ದಾರೆಂದು ವರದಿ ತಿಳಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ತಲೆಬುರುಡೆ ಪ್ರಕರಣ: PIL ವಜಾ, ಚಿನ್ನಯ್ಯ ತಂಡ ಮತ್ತೆ ತನಿಖೆಗೆ ಒತ್ತಾಯ!