ರಾಜ್ಯದಲ್ಲಿ ಗೊಂದಲಗಳಿಗೆ ಕಾರಣವಾಗಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ (ಜಾತಿ ಸಮೀಕ್ಷೆ) ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠವು ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿತು. ಎರಡು ದಿನಗಳ ವಾದ-ಪ್ರತಿವಾದ ಆಲಿಸಿದ ನಂತರ, ಸಮೀಕ್ಷೆಗೆ ತಡೆ ನೀಡದಿರಲು ನ್ಯಾಯಾಲಯ ನಿರ್ಧರಿಸಿದೆ.
ಆದರೆ, ದತ್ತಾಂಶದ ಗೌಪ್ಯತೆಯನ್ನು ಕಾಪಾಡುವಂತೆ ರಾಜ್ಯ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗಕ್ಕೆ ಕೆಲವು ಮಹತ್ವದ ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳ ಅಡಿಯಲ್ಲಿ ಸಮೀಕ್ಷೆ ಮುಂದುವರಿಸಲು ಅವಕಾಶ ನೀಡಲಾಗಿದೆ.
ನ್ಯಾಯಾಲಯ ವಿಧಿಸಿರುವ ಪ್ರಮುಖ ಷರತ್ತುಗಳೆಂದರೆ:
1. ಸಂಗ್ರಹಿಸಲಾದ ದತ್ತಾಂಶವನ್ನು ಸರ್ಕಾರ ಸೇರಿದಂತೆ ಯಾರಿಗೂ ಬಹಿರಂಗಪಡಿಸಬಾರದು. ಹಿಂದುಳಿದ ವರ್ಗಗಳ ಆಯೋಗವು ದತ್ತಾಂಶದ ಗೌಪ್ಯತೆಯನ್ನು ರಕ್ಷಿಸಬೇಕು.
2. ಜನರು ಸ್ವಯಂಪ್ರೇರಣೆಯಿಂದ ಮಾಹಿತಿ ನೀಡಿದರೆ ಮಾತ್ರ ಸಂಗ್ರಹಿಸಬೇಕು. ಯಾವುದೇ ಮಾಹಿತಿಯನ್ನು ಒತ್ತಾಯಪೂರ್ವಕವಾಗಿ ಪಡೆಯಬಾರದು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.
ದತ್ತಾಂಶದ ಗೌಪ್ಯತೆ ಕುರಿತು ಪ್ರಮಾಣಪತ್ರ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ ಎರಡನೇ ವಾರಕ್ಕೆ ಮುಂದೂಡಲಾಗಿದೆ. ನೀವು ಸಂಗ್ರಹಿಸುವ ದತ್ತಾಂಶವನ್ನು ಹೇಗೆ ರಕ್ಷಿಸುತ್ತೀರಿ ಎಂಬ ಹೈಕೋರ್ಟ್ ಪ್ರಶ್ನೆಗೆ, ಸರ್ಕಾರದ ಪರ ವಕೀಲ ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯಿಸಿದರು. ಸರ್ಕಾರದ ಇ-ಆಡಳಿತ ವಿಭಾಗವು ದತ್ತಾಂಶವನ್ನು ರಕ್ಷಿಸುತ್ತದೆ ಮತ್ತು ಸರ್ಕಾರಿ ಅಧಿಕಾರಿಗಳು ಮಾತ್ರ ಅದನ್ನು ನಿಯಂತ್ರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು. Disha Authentic NCERT Summary (Class 6 to 12) for UPSC & State PSC Civil Services & other Competitive Exams | Old & New NCER One Liner General Studies | IAS Prelims & Mains Paperback – 19 September 2024
ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ರಾಜ್ಯ ಒಕ್ಕಲಿಗರ ಸಂಘ ಮತ್ತು ಇತರರು ಸಮೀಕ್ಷೆಗೆ ತಡೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲರು ಮತ್ತು ಕೇಂದ್ರ ಸರ್ಕಾರದ ಪರ ವಕೀಲರು ಸಮೀಕ್ಷೆಗೆ ತಡೆ ನೀಡುವಂತೆ ಪ್ರಬಲವಾಗಿ ವಾದ ಮಂಡಿಸಿದ್ದರು. ಇದಕ್ಕೆ ರಾಜ್ಯ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗದ ವಕೀಲರು ಪ್ರತಿವಾದ ಮಂಡಿಸಿದರು.
ಎರಡು ದಿನಗಳ ಕಾಲ ನಡೆದ ವಾದ-ಪ್ರತಿವಾದದ ನಂತರ, ನ್ಯಾಯಾಲಯವು ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿ, ದತ್ತಾಂಶದ ಗೌಪ್ಯತೆ ಕಾಪಾಡುವಂತೆ ಸೂಚನೆಗಳೊಂದಿಗೆ ಮಧ್ಯಂತರ ಆದೇಶ ಹೊರಡಿಸಿತು. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಕುಡಿದ ಮತ್ತಿನಲ್ಲಿ ಹ**ಲ್ಲೆ - ಓರ್ವನ ಬಂಧನ