Skip to main content
ವಿಡಿಯೋ
1/2
business

ಸೈಬರ್ ದಾಳಿಯ ಹೊಡೆತ: ಟಾಟಾ ಮೋಟಾರ್ಸ್‌ಗೆ ಷೇರು ಮೌಲ್ಯ ಕುಸಿತ

By Shravanthi R
ಸೈಬರ್ ದಾಳಿಯ ಹೊಡೆತ: ಟಾಟಾ ಮೋಟಾರ್ಸ್‌ಗೆ ಷೇರು ಮೌಲ್ಯ ಕುಸಿತ

ಬ್ರಿಟಿಷ್‌ ಕಾರು ತಯಾರಕ ಟಾಟಾದ ಜೆಎಲ್‌ಆರ್‌ನಲ್ಲಿ ಸಂಭವಿಸಿದ ಸೈಬರ್ ದಾಳಿಯಿಂದಾಗಿ ಟಾಟಾ ಮೋಟಾರ್ಸ್‌ ಷೇರುಗಳು ಸೆಪ್ಟೆಂಬರ್ 25ರಂದು 2.5% ಕ್ಕಿಂತ ಹೆಚ್ಚು ಕುಸಿದಿವೆ. ಈ ದಾಳಿಯ ಪರಿಣಾಮವಾಗಿ ಉತ್ಪಾದನೆ ಅಕ್ಟೋಬರ್ 1 ರವರೆಗೆ ಸ್ಥಗಿತಗೊಂಡಿದ್ದು, ಸಂಭನೀಯ ಕೋಟಿಗೂ ಅಧಿಕ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಟಾಟಾ ಮೋಟಾರ್ಸ್ ಕಂಪನಿ ಷೇರುಗಳು ಸೆಪ್ಟೆಂಬರ್ 25 ರ ಗುರುವಾರದಂದು, ಷೇರು ವಹಿವಾಟಿನಲ್ಲಿ 2.5% ಮೌಲ್ಯಕ್ಕಿಂತ ಹೆಚ್ಚು ಕುಸಿದಿರುವುದಾಗಿದೆ ವರದಿಯಾಗಿದೆ. ಯುಕೆಯಲ್ಲಿರುವ ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಜಾಗ್ವಾರ್‌ ಲ್ಯಾಂಡ್‌ ರೋವರ್‌ನಲ್ಲಿ ಉಂಟಾಗಿರುವ ಸೈಬರ್‌ ಉಲ್ಲಂಘನೆಯಿಂದಾಗಿ ಈ ನಷ್ಟ ಅನುಭವಿಸಿದೆ ಎನ್ನಲಾಗಿದೆ. ಇದರಿಂದಾಗಿ, ವಾಣಿಜ್ಯ ಕ್ಷೇತ್ರದ ಪ್ರಮುಖ ಕಂಪನಿ ಟಾಟಾ ಮೋಟಾರ್ಸ್‌ನ ಷೇರುಗಳು ನೆನ್ನೆ ದಿವಸ ಭಾರಿ ಕುಸಿದಿದೆ. 

ವರದಿಗಳ ಪ್ರಕಾರ, ಟಾಟಾ ಮೋಟಾರ್ಸ್‌ನ ಪ್ರಮುಖ ಘಟಕವಾದ ಜಾಗ್ವಾರ್ ಲ್ಯಾಂಡ್ ರೋವರ್‌ಗೆ (ಜೆಎಲ್‌ಆರ್‌) ದೊಡ್ಡ ಹೊಡೆತ ಬಿದ್ದಿದ್ದು, ಸೈಬರ್ ದಾಳಿಯ ಸಮಸ್ಯೆಯ ಪರಿಣಾಮ ಅಲ್ಲಿನ ಸಿಬ್ಬಂದಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಈ ಕಾರಣ, ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ  2.5% ಕ್ಕಿಂತ ಹೆಚ್ಚು ಕುಸಿದಿದೆ ಎನ್ನಲಾಗಿದೆ. ಜೊತೆಗೆ, ಟಾಟಾ ಮೋಟಾರ್ಸ್‌ನ ಐಟಿ, ಆಟೋ ಮೇಜರ್‌ ಜೆಎಲ್‌ಆರ್‌ ಈ ಹಿಂದೆ ಸೈಬರ್‌ ವಿಮಾ ಒಪ್ಪಂದವನ್ನು ದಲ್ಲಾಳಿ ಲಾಕ್ಟಾನ್‌ವೊಂದಿಗೆ ನಡೆಸುವಲ್ಲಿ ವಿಫಲವಾದ ಕಾರಣ ಎಂದು ಮಾಹಿತಿ ತಿಳಿಸಿದೆ. Oxford Student Atlas for India | 6th Edition | For UPSC and Competitive Exams | Latest Edition Paperback –January 2025 Paperback – 1 January 2025

ಜೆಎಲ್‌ಆರ್‌ ಉತ್ಪಾದನೆ ಸ್ಥಗಿತಗೊಳಿಸಿದೆ. ಅಕ್ಟೋಬರ್‌ 1 ರ ತನಕ ಪ್ರೊಡಕ್ಷನ್‌ ವಿಸ್ತರಣೆಯನ್ನು ಒಡ್ಡಿದೆ. ಇದರಿಂದಾಗಿ ಉಂಟಾಗುವ ಆರ್ಥಿಕ ನಷ್ಟವನ್ನು ಅಂದಾಜಿಸಿರುವ ಪ್ರಕಾರ, 6,000 ಕೋಟಿಗೂ ಅಧಿಕವೆಂದು ವರದಿ ಸೂಚಿಸಿದೆ ಎನ್ನಲಾಗಿದೆ. ಇದರಿಂದಾಗಿ ಈ ಕಾರು ತಯಾರಕ ಕಂಪನಿಗೆ 2 ಬಿಲಿಯನ್‌ ಡಾಲರ್‌ನಷ್ಟು ನಷ್ಟದ ಅನುಭವಿಸಬಹುದು ಎನ್ನಲಾಗಿದೆ. ಇದನ್ನೂ ಓದಿ: ಜಾತಿ ಸಮೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್: ದತ್ತಾಂಶ ಗೌಪ್ಯತೆಗೆ ಕಟ್ಟುನಿಟ್ಟಿನ ಷರತ್ತುಗಳು!