Skip to main content
ವಿಡಿಯೋ
1/2
general

ಡಾ. ಮನ್‌ಮೋಹನ್‌ ಸಿಂಗ್‌ ಅವರ 93ನೇ ಜನ್ಮದಿನ: ರಾಷ್ಟ್ರಕ್ಕೆ ಸಲ್ಲಿಸಿದ ಅಮೂಲ್ಯ ಸೇವೆಗೆ ಪ್ರಧಾನಿಗಳ ನಮನ

By Shravanthi R
ಡಾ. ಮನ್‌ಮೋಹನ್‌ ಸಿಂಗ್‌ ಅವರ 93ನೇ ಜನ್ಮದಿನ: ರಾಷ್ಟ್ರಕ್ಕೆ ಸಲ್ಲಿಸಿದ ಅಮೂಲ್ಯ ಸೇವೆಗೆ ಪ್ರಧಾನಿಗಳ ನಮನ

ಭಾರತದ ಮಾಜಿ ಪ್ರಧಾನಿ ಹಾಗೂ ಶ್ರೇಷ್ಠ ಆರ್ಥಿಕ ತಜ್ಞ ಡಾ. ಮನ್‌ಮೋಹನ್‌ ಸಿಂಗ್‌ ಅವರ 93ನೇ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಹಲವು ಗಣ್ಯರು ದೇಶದ ಆರ್ಥಿಕ ಸುಧಾರಣೆ, ಉನ್ನತಿ ಹಾಗೂ ಜಾಗತಿಕ ಮನ್ನಣೆ ತರುವಲ್ಲಿ ಅವರ ಅಮೂಲ್ಯ ಕೊಡುಗೆ ಸ್ಮರಿಸಿ ನಮನ ಸಲ್ಲಿಸಿದ್ದಾರೆ.

ಇಂದು ದಿವಂಗತ ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞ ಡಾ. ಮನ್‌ಮೋಹನ್‌ಸಿಂಗ್‌ ಅವರ 93 ನೇ ಜನ್ಮ ದಿನಾಚರಣೆ. ಈ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಗಣ್ಯರು ಅವರನ್ನು ಸ್ಮರಿಸಿದ್ದಾರೆ. ಅವರು ರಾಷ್ಟ್ರದ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ದಿಗೆ ಸಲ್ಲಿಸಿದ ಸೇವೆಯನ್ನು ನೆನೆದು ಜನ್ಮ ವಾರ್ಷಿಕೋತ್ಸವದ ಗೌರವವನ್ನು ಸೂಚಿಸಿದ್ದಾರೆ. 

ಈ ಬಗ್ಗೆ ಪ್ರಧಾನಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. “ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಜೀ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನಗಳು. ಸಾರ್ವಜನಿಕ ಜೀವನದಲ್ಲಿ ಅವರು ನಮ್ಮ ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ನಾವು ಸ್ಮರಿಸುತ್ತೇವೆ. ಸುದೀರ್ಘ ವರ್ಷಗಳಲ್ಲಿ ಅವರ ಸೇವೆ ಪ್ರಾತಃಸ್ಮರಣೀಯ" ಎಂದು ಬರೆದುಕೊಂಡಿದ್ದಾರೆ. Certificate Physical and Human Geography 2nd Edition | Best Suited for UPSC Aspirants Paperback – 15 December 2023

ಭಾರತ ಕಂಡ ಓರ್ವ ಶ್ರೇಷ್ಠ ಅರ್ಥಶಾಸ್ರ್ತಜ್ಞರಾಗಿರುವ ಮನ್‌ಮೋಹನ್‌ಸಿಂಗ್‌ ಅವರು, 1932 ರ ಸೆ. 26 ರಂದು ಜನಿಸಿದರು. ಹಣಕಾಸು ಸಚಿವರಾಗಿ, ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತದಲ್ಲಿ ಸಮಗ್ರ ಆರ್ಥಿಕ ಸುಧಾರಣೆ ತರುವಲ್ಲಿ ಶ್ರಮಿಸಿದ್ದಲ್ಲದೇ, ದೇಶದ ಉನ್ನತಿಗಾಗಿ ಪ್ರಧಾನಿಯ ಅಧಿಕಾರವನ್ನು ಹೊಂದಿದರು. ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ (LPG) ಜಾರಿಗೆ ತರುವ ಮೂಲಕ ಭಾರತಕ್ಕೆ ವಿಶ್ವಮನ್ನಣೆಯನ್ನು ದೊರಕಿಸಿಕೊಟ್ಟರು. ಇದನ್ನೂ ಓದಿ: ಸೈಬರ್ ದಾಳಿಯ ಹೊಡೆತ: ಟಾಟಾ ಮೋಟಾರ್ಸ್‌ಗೆ ಷೇರು ಮೌಲ್ಯ ಕುಸಿತ