Skip to main content
ವಿಡಿಯೋ
1/2
politics

ರಾಜು ಕಾಗೆ ಸ್ಥಾನದಲ್ಲಿ ಶಾಶ್ವತ: ಸಿಎಂ ಸ್ಪಷ್ಟನೆ, ಅರುಣ್ ಪಾಟೀಲ್ ಗೊಂದಲಕ್ಕೆ ಅಂತ್ಯ! ಅಷ್ಟಕ್ಕೂ ಆಗಿದ್ದೇನು..?

By Sushmitha R
ರಾಜು ಕಾಗೆ ಸ್ಥಾನದಲ್ಲಿ ಶಾಶ್ವತ: ಸಿಎಂ ಸ್ಪಷ್ಟನೆ, ಅರುಣ್ ಪಾಟೀಲ್ ಗೊಂದಲಕ್ಕೆ ಅಂತ್ಯ! ಅಷ್ಟಕ್ಕೂ ಆಗಿದ್ದೇನು..?

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ರಾಜು ಕಾಗೆ ಹಾಲಿ ಅಧ್ಯಕ್ಷ ಸ್ಥಾನದಲ್ಲಿಯೇ ಮುಂದುವರಿಯಲಿದ್ದಾರೆ ಎಂದು ದೃಢಪಡಿಸಲಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದ ಕುರಿತು ಉಂಟಾಗಿದ್ದ ಗೊಂದಲಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಹಾಲಿ ಅಧ್ಯಕ್ಷ ರಾಜು ಕಾಗೆ ಅವರನ್ನು ಈ ಸ್ಥಾನದಿಂದ ತೆಗೆದುಹಾಕಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ. ರಸ್ತೆ ಗುಂಡಿ ಮುಚ್ಚದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ..!!

ಎಐಸಿಸಿ ಪ್ರಕಟಿಸಿದ ಪಟ್ಟಿಯಲ್ಲಿ ಅರುಣ್ ಪಾಟೀಲ್ ಅವರ ಹೆಸರನ್ನು ನಿಗಮದ ಅಧ್ಯಕ್ಷ ಸ್ಥಾನಕ್ಕೆ ಉಲ್ಲೇಖಿಸಿದ್ದರಿಂದ ಈ ಗೊಂದಲ ಸೃಷ್ಟಿಯಾಗಿತ್ತು. ಈ ಕುರಿತು ಚರ್ಚಿಸಲು ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು.realme GT7 Pro 5G Smartphone 12+256 Galaxy Grey, 6.78 inch Screen, 120Hz Quad-Curved Display, 5800mAh Battery, 120W Ultra Charge, 124MP AI Cameras, Snapdragon® 8 Elite Chipset, IP69

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ರಾಜು ಕಾಗೆ ಅವರಿಗೆ "ನಿಮ್ಮನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟಿಲ್ಲ. ಇದು ಪ್ರಿಂಟ್ ಮಿಸ್ಟೇಕ್ ಆಗಿದೆ. ಇದನ್ನು ಹೊರತುಪಡಿಸಿ ಯಾವುದೇ ಸಮಸ್ಯೆ ಇಲ್ಲ. ನಿಮ್ಮನ್ನೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲಾಗುವುದು" ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಸರಕಾರಕ್ಕೆ ಮುಜುಗರ ಉಂಟುಮಾಡುವ ಹೇಳಿಕೆಗಳನ್ನು ನೀಡಿದ ಕಾರಣಕ್ಕೆ ರಾಜು ಕಾಗೆ ಅವರನ್ನು ಈ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂಬ ವದಂತಿಗಳು ಹರಡಿದ್ದವು. ತೆರವಾದ ಹುದ್ದೆಗೆ ಅರುಣ್ ಪಾಟೀಲ್ ಅವರನ್ನು ನೇಮಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ಸುದ್ದಿ ಹಬ್ಬಿತ್ತು.ವಿಶ್ವಸಂಸ್ಥೆಯಲ್ಲಿ ಟರ್ಕಿ ಪ್ರಧಾನಿಯಿಂದ ಕಾಶ್ಮೀರ ವಿಷಯ ಪ್ರಸ್ತಾಪ…!!!

ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಈ ಕುರಿತು ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ರವಾನಿಸಿದ್ದರು ಎಂದು ಹೇಳಲಾಗಿತ್ತು. ಇದು, ಸರಕಾರಕ್ಕೆ ಮುಜುಗರ ಉಂಟುಮಾಡುವವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬ ಸಂದೇಶವನ್ನು ರವಾನಿಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು CWC ಸಭೆಗೆಂದು ಬಿಹಾರಕ್ಕೆ ತೆರಳಿದ್ದಾಗ, ರಾಜ್ಯದ ಒಟ್ಟು 39 ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿತ್ತು.ಚುನಾವಣಾ ರಾಜ್ಯಗಳಿಗೆ BJP ಉಸ್ತುವಾರಿ ನೇಮಕ: ಪಶ್ಚಿಮ ಬಂಗಾಳ, ಬಿಹಾರ ಹಾಗು ತಮಿಳುನಾಡು ರಾಜ್ಯ: ಮಾಹಿತಿ ಹೀಗಿದೆ

ಆ ಪಟ್ಟಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರ ಹೆಸರು ಅರುಣ್ ಪಾಟೀಲ್ ಎಂದು ನಮೂದಾಗಿದ್ದು, ಇದು ಇತ್ತೀಚಿನ ಗೊಂದಲಗಳಿಗೆ ಮೂಲ ಕಾರಣವಾಗಿತ್ತು. ಸಿಎಂ ಸ್ಪಷ್ಟನೆ ನೀಡಿದ್ದರೂ, ಇದು ನಿಜಕ್ಕೂ ಪ್ರಿಂಟ್ ಮಿಸ್ಟೇಕಾ ಅಥವಾ ಅರುಣ್ ಪಾಟೀಲ್ ಹೆಸರಿನ ಹಿಂದೆ ಯಾವುದೇ ರಾಜಕೀಯ ಲೆಕ್ಕಾಚಾರಗಳು ಇತ್ತಾ ಎಂಬ ಪ್ರಶ್ನೆ ರಾಜು ಕಾಗೆ ಬೆಂಬಲಿಗರನ್ನು ಕಾಡುತ್ತಿದೆ.