Skip to main content
ವಿಡಿಯೋ
1/2
general

ಕಿಟಕಿ ಸಜ್ಜಾ ಬಿದ್ದು ವಿದ್ಯಾರ್ಥಿ ಕಾಲು ನುಜ್ಜು ಗುಜ್ಜು, ಚಿಕಿತ್ಸೆಗೆ ಹಣವಿಲ್ಲದೆ ವಿದ್ಯಾರ್ಥಿ ಪರದಾಟ…!!

By Pavitra Ganapathi Baradavalli
ಕಿಟಕಿ ಸಜ್ಜಾ ಬಿದ್ದು ವಿದ್ಯಾರ್ಥಿ ಕಾಲು ನುಜ್ಜು ಗುಜ್ಜು, ಚಿಕಿತ್ಸೆಗೆ ಹಣವಿಲ್ಲದೆ ವಿದ್ಯಾರ್ಥಿ ಪರದಾಟ…!!

ಕಿಟಕಿಯ ಸಜ್ಜಾ ಬಿದ್ದು ವಿದ್ಯಾರ್ಥಿ ಕಾಲು ನಜ್ಜು ಗುಜ್ಜು ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆಗೆ ಹಣವಿಲ್ಲದೇ ವಿದ್ಯಾರ್ಥಿ ನರಳಾಟ ನಡೆಸುತ್ತಿದ್ದಾನೆ. ಹ್ಯಾಸ್‌ ಮ್ಯಾಟ್‌ ಆಸ್ಪತ್ರೆಯಲ್ಲಿರುವ ವಿದ್ಯಾರ್ಥಿ ದರ್ಶನ್‌ ಈಗ ಚಿಕಿತ್ಸೆ ವೆಚ್ಚವಾದ ಹಣವನ್ನು ನೀಡೋದಕ್ಕೆ ಆಗದೇ ಆಸ್ಪತ್ರೆಯಲ್ಲಿಯೇ ಇರುವ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರು: ಕಿಟಕಿಯ ಸಜ್ಜಾ ಬಿದ್ದು ವಿದ್ಯಾರ್ಥಿ ಕಾಲು ನಜ್ಜು ಗುಜ್ಜು ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆಗೆ ಹಣವಿಲ್ಲದೇ ವಿದ್ಯಾರ್ಥಿ ನರಳಾಟ ನಡೆಸುತ್ತಿದ್ದಾನೆ. ಹ್ಯಾಸ್‌ ಮ್ಯಾಟ್‌ ಆಸ್ಪತ್ರೆಯಲ್ಲಿರುವ ವಿದ್ಯಾರ್ಥಿ ದರ್ಶನ್‌ ಈಗ ಚಿಕಿತ್ಸೆ ವೆಚ್ಚವಾದ ಹಣವನ್ನು ನೀಡೋದಕ್ಕೆ ಆಗದೇ ಆಸ್ಪತ್ರೆಯಲ್ಲಿಯೇ ಇರುವ ಪರಿಸ್ಥಿತಿ ಎದುರಾಗಿದೆ. ಶಾಲೆಯಲ್ಲಿ ಈ ಘಟನೆ ನಡೆದಿರೋದರಿಂದ ಚಿಕಿತ್ಸಾ ವೆಚ್ಚವನ್ನು ಭರಿಸೋದಾಗಿ ಸ್ವಯಂ ಶಿಕ್ಷಣ ಇಲಾಖೆಯೇ ಭರವಸೆ ನೀಡಿತ್ತು. ಆದರೆ ಈಗ ಅರ್ಧದಲ್ಲೇ ಶಿಕ್ಷಣ ಇಲಾಖೆ ಕೈಕೊಟ್ಟಿದೆ. ಚಿಕಿತ್ಸಾ ವೆಚ್ಚ 7 ಲಕ್ಷ ಆಗಿತ್ತು ಆದರೆ ಜಿಲ್ಲಾಡಳಿತ ಕೇವಲ 2.5 ಲಕ್ಷವನ್ನು ನೀಡಿ ಕೈ ತೊಳೆದುಕೊಂಡಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ನಿಲ್ಲದ ಪುಡಿ ರೌಡಿಗಳ ಅಟ್ಟಹಾಸ, ಕುಡಿದ ಮತ್ತಿನಲ್ಲಿ ಕಾರು ಗಾಜು ಪುಡಿ ಪುಡಿ..!!


ಮಗನ ಸಂಪೂರ್ಣ ಚಿಕಿತ್ಸೆಗೆ ಹಣವಿಲ್ಲದೇ ತಾಯಿ ರೂಪ ಆಸ್ಪತ್ರೆಯ ಮುಂದುಗಡೆ ಪರದಾಟ ನಡೆಸುತ್ತಿದ್ದಾರೆ. ವಿದ್ಯಾರ್ಥಿ ದರ್ಶನ್‌ಗೆ ತಂದೆ ಇಲ್ಲ ತಾಯಿ ಮಾತ್ರ ಇದಾರೆ ಒಬ್ಬಂಟಿ ಪೋಷಕರಾಗಿ ಹೇಗೆ ತಾನೇ ಆ ಮಟ್ಟಿನ ಮಗನ ಚಿಕಿತ್ಸಾ ವೆಚ್ಚವನ್ನು ಭರಿಸೋದಕ್ಕೆ ಸಾಧ್ಯ. ವಿದ್ಯಾರ್ಥಿ ದರ್ಶನ್‌ ದೇವನಹಳ್ಳಿಯ ಕೋಟೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಬ್ಯಾಸ ನಡೆಸುತ್ತಿದ್ದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ದರ್ಶನ್‌ ಆಗಷ್ಟ್‌ 25 ರಂದು ಶಾಲೆಯ ಕಿಟಕಿ ಸಜ್ಜಾ ಮುರಿದು ಬಾಲಕನ ಕಾಲಿನ ಮೇಲೆ ಬೀಳುತ್ತೆ.
ಇದನ್ನೂ ಓದಿ: ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಿಂದ ರಾಜು ಕಾಗೆ ವಜಾ...ಅರುಣ್ ಪಾಟೀಲ ನೂತನ ಅಧ್ಯಕ್ಷ..!


ಅದರ ಕೆಳಗೆ ಸಿಲುಕಿ ಆತನ ಕಾಲು ನುಜ್ಜುಗುಜ್ಜಾಗಿರುತ್ತದೆ. ಚಿಕಿತ್ಸೆಗಾಗಿ ಹ್ಯಾಸ್‌ಮ್ಯಾಟ್‌ ಆಸ್ಪತ್ರೆಗೆ ದಾಖಲಿಸಲಾಗಿರುತ್ತೆ
 ಈ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಚಿಕಿತ್ಸಾ ವೆಚ್ಚ ಭರಿಸೋದಾಗಿ ಭರವಸೆಯನ್ನು ನೀಡಿರುತ್ತೆ. ಆದರೆ ಈಗ ಚಿಕತ್ಸೆಗೆ ಪೂರ್ತಿ ಹಣ ನೀಡದೇ ಕೈಕೊಟ್ಟಿದೆ ಜಿಲ್ಲಾಡಳಿತ ಚಿಕಿತ್ಸೆಗೆ ಪೂರ್ತಿ ಹಣ ನೀಡಿಲ್ಲಾ ಅನ್ನೋ ಕಾರಣಕ್ಕೆ ಚಿಕಿತ್ಸೆಯನ್ನು ನಿಲ್ಲಿಸಿದ ಆಸ್ಪತ್ರೆ.C J Enterprise Women's Pure Soft Kanjivaram Silk Saree Banarasi Design Style With Blouse Piece for Wedding (Pari9016-51)