Skip to main content
ವಿಡಿಯೋ
1/3
cinema

ಮತ್ತೆ ಶುರುವಾಯ್ತಾ ಚಿರಂಜೀವಿ Vs ಎನ್‌.ಟಿ.ಆರ್ ಫ್ಯಾಮಿಲ್ ವಾರ್...ನಾನ್ಸೆನ್ಸ್ ಎಂದಿದ್ಯಾಕೆ ಬಾಲಕೃಷ್ಣ?

By Ram Chethan
ಮತ್ತೆ ಶುರುವಾಯ್ತಾ ಚಿರಂಜೀವಿ Vs ಎನ್‌.ಟಿ.ಆರ್ ಫ್ಯಾಮಿಲ್ ವಾರ್...ನಾನ್ಸೆನ್ಸ್ ಎಂದಿದ್ಯಾಕೆ ಬಾಲಕೃಷ್ಣ?

ಆಂಧ್ರ ಅಸೆಂಬ್ಲಿಯಲ್ಲಿ ಜಗನ್ ಸರ್ಕಾರದ ವಿರುದ್ಧ ಚರ್ಚೆಯ ವೇಳೆ, ಚಿರಂಜೀವಿ ಕುರಿತು ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ನಾನ್ಸೆನ್ಸ್’ ಎಂದೆದ್ದು ಕೂಗಿದ ಅವರ ಮಾತುಗಳು ಚಿರಂಜೀವಿ–ಎನ್‌.ಟಿ.ಆರ್ ಕುಟುಂಬಗಳ ಹಳೆಯ ವೈಮನಸ್ಸಿಗೆ ಮತ್ತಷ್ಟು ಹೊತ್ತಿ ಹಾಕಿವೆ.

ದಶಕಗಳಿಂದಲೂ ಚಿರಂಜೀವಿ ಮತ್ತು ಎನ್‌.ಟಿ.ಆರ್ ಕುಟುಂಬದ ನಡುವೆ ಇರುವ ವೈಮನಸ್ಸು ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಿಂದೆ ಈ ಕುಟುಂಬಗಳ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿತ್ತು. ಚಿರಂಜೀವಿ ಸಹೋದರ ಪವನ್ ಕಲ್ಯಾಣ್, ಎನ್‌.ಟಿ.ಆರ್ ಕುಟುಂಬದ ಟಿಡಿಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಅಲ್ಲದೆ, ಚಿರಂಜೀವಿ ಮತ್ತು ಬಾಲಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪರಸ್ಪರ ಶ್ಲಾಘಿಸಿದ್ದರು. ಆದರೆ, ಈ ಸೌಹಾರ್ದ ಹೆಚ್ಚು ದಿನ ಉಳಿಯಲಿಲ್ಲ. ಈಗ ಬಾಲಕೃಷ್ಣ ಮತ್ತು ಚಿರಂಜೀವಿ ನಡುವೆ ಮತ್ತೆ ವೈಮನಸ್ಸು ತಲೆದೋರಿದೆ. ಬಾಲಯ್ಯ, ಆಂಧ್ರಪ್ರದೇಶ ಅಸೆಂಬ್ಲಿಯಲ್ಲಿ ಚಿರಂಜೀವಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪ್ರಸ್ತುತ ಆಂಧ್ರಪ್ರದೇಶ ಅಸೆಂಬ್ಲಿಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಯುತ್ತಿದೆ. ಜಗನ್ ಸರ್ಕಾರದ ಅವಧಿಯಲ್ಲಿ ಪ್ರಜಾ ಪ್ರತಿನಿಧಿಗಳು ಮತ್ತು ವಿರೋಧ ಪಕ್ಷದ ಸದಸ್ಯರ ವಿರುದ್ಧ ದಾಖಲಾದ ಪ್ರಕರಣಗಳು ಹಾಗೂ ಅವಮಾನಕರ ನಡವಳಿಕೆಗಳ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.Titan Edge Ceramic Analog White Dial Men's Watch NM1696QC04/NN1696QC04/NP1696QC04

ಈ ಸಂದರ್ಭದಲ್ಲಿ ಮಾತನಾಡಿದ ಹಾಲಿ ಸಚಿವ ಕಮಿನೇನಿ ಕೃಷ್ಣ ಶ್ರೀನಿವಾಸ್, ಜಗನ್ ಎಂತಹ ಕೆಟ್ಟ ವ್ಯಕ್ತಿಯಾಗಿದ್ದರು ಎಂಬುದನ್ನು ವಿವರಿಸಿದರು. ಮೆಗಾಸ್ಟಾರ್ ಚಿರಂಜೀವಿ ಅವರು ಜಗನ್ ಅವರನ್ನು ಭೇಟಿಯಾಗಿದ್ದ ಘಟನೆಯನ್ನು ಅವರು ಉಲ್ಲೇಖಿಸಿದರು. ಟಿಕೆಟ್ ದರಗಳನ್ನು ತೀವ್ರವಾಗಿ ಕಡಿಮೆಗೊಳಿಸಿದಾಗ, ಚಿರಂಜೀವಿ ಅವರು ಜಗನ್ ಅವರನ್ನು ಮೊದಲಿಗೆ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಅವರ ಮನೆಗೆ ಉಪಹಾರಕ್ಕೆ ಹೋಗಿ ಮಾತುಕತೆ ನಡೆಸಿದ ನಂತರ, ಚಿರಂಜೀವಿ ತೆಲುಗು ಚಿತ್ರರಂಗದ ಪ್ರಮುಖರನ್ನು ಕರೆದುಕೊಂಡು ಮುಖ್ಯಮಂತ್ರಿ ಭೇಟಿಗೆ ಹೋಗಿದ್ದರು. ಆಗ, ಸರ್ಕಾರದ ವತಿಯಿಂದಲೇ ಸಭೆಗೆ ಯಾರನ್ನು ಕರೆತರಬೇಕು ಎಂಬ ಪಟ್ಟಿಯನ್ನು ನೀಡಲಾಗಿತ್ತು. ಆ ಪಟ್ಟಿಯಂತೆ ಚಿರಂಜೀವಿ ಅವರು ಪ್ರಭಾಸ್, ಮಹೇಶ್ ಬಾಬು, ರಾಜಮೌಳಿ ಸೇರಿದಂತೆ ಕೆಲವು ಪ್ರಮುಖರನ್ನು ಮುಖ್ಯಮಂತ್ರಿ ಭೇಟಿಗೆ ಕರೆದುಕೊಂಡು ಹೋಗಿದ್ದರು.

ಈ ಕುರಿತು ಅಸೆಂಬ್ಲಿಯಲ್ಲಿ ಮಾತನಾಡಿದ ಸಚಿವ ಕಮಿನೇನಿ ಕೃಷ್ಣ ಶ್ರೀನಿವಾಸ್, "ಅವರು ಕೊಟ್ಟ ಪಟ್ಟಿಯಲ್ಲಿ ಬಾಲಕೃಷ್ಣ ಅವರ ಹೆಸರಿರಲಿಲ್ಲ. ಜಗನ್‌ಗೆ ಅವರನ್ನು ಭೇಟಿಯಾಗುವುದು ಇಷ್ಟವಿರಲಿಲ್ಲ. ಚಿರಂಜೀವಿ ಅವರು ದೊಡ್ಡ ನಟರು, ನಿರ್ದೇಶಕರು, ವಿವಾದದ ನಡುವೆಯೂ 'OG' ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? ಅಬ್ಬಾ...ಪವನ್ ಕಲ್ಯಾಣ್ ದಿಲ್ ಖುಷ್!

ನಿರ್ಮಾಪಕರನ್ನು ಕರೆದುಕೊಂಡು ಹೋದಾಗಲೂ, ಅವರ ಕಾರನ್ನು ಗೇಟ್ ಬಳಿಯೇ ತಡೆದು ನಡೆದುಕೊಂಡು ಹೋಗುವಂತೆ ಮಾಡಿದರು."

"ನಂತರ ಸಭೆಗೆ ಹೋದಾಗ ಅಲ್ಲಿ ಪೋಸಾನಿ ಮುರಳಿ ಕೃಷ್ಣ ಅವರಂತಹ ದುರುಳರನ್ನು ಸಭೆಯಲ್ಲಿ ಕೂರಿಸಿದರು. ನಂತರ ಮುಖ್ಯಮಂತ್ರಿ ಭೇಟಿಗೆ ಸಿಗುವುದಿಲ್ಲ, ಸಿನಿಮಾಟೋಗ್ರಫಿ ಮಂತ್ರಿಯೊಂದಿಗೆ ಸಭೆ ಮಾಡಿ ಎಂದು ಹೇಳಿದರು. ಆಗ ಚಿರಂಜೀವಿ ತುಸು ಗಟ್ಟಿ ದನಿಯಲ್ಲಿ, ‘ಅವರು ಹೇಳಿದ್ದಕ್ಕೆ ನಾನು ಇವರೆಲ್ಲರನ್ನು ಕಾಡಿ-ಬೇಡಿ ಕರೆದುಕೊಂಡು ಬಂದೆ' ಎಂದಾಗ ನಂತರ ಜಗನ್ ಸಭೆಗೆ ಬಂದರು. ಅಲ್ಲಿಯೂ ಸಹ ಚಿರಂಜೀವಿ ಮುಖ್ಯಮಂತ್ರಿಯನ್ನು ಮನವಿ ಮಾಡುತ್ತಿರುವ ವಿಡಿಯೋವನ್ನು ವೈರಲ್ ಮಾಡಿ ಅವರಿಗೆ ಅವಮಾನ ಮಾಡಿದರು" ಎಂದು ಕಮಿನೇನಿ ಕೃಷ್ಣ ಶ್ರೀನಿವಾಸ್ ಹೇಳಿದರು.

ಸಚಿವ ಕೃಷ್ಣ ಶ್ರೀನಿವಾಸ್ ಮಾತನಾಡಿದ ಕೂಡಲೇ ಬಾಲಕೃಷ್ಣ ಎದ್ದು ನಿಂತು, "ಆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ ನನ್ನ ಹೆಸರನ್ನು 9ನೇ ಸ್ಥಾನದಲ್ಲಿ ಹಾಕಲಾಗಿತ್ತು. ಆಗಲೇ ನಾನು ಕೇಳಿದೆ, 'ಯಾವನು ಈ ಪಟ್ಟಿ ಮಾಡಿದವನು?' ಎಂದು ಸಿಟ್ಟಿನಿಂದ ಹೇಳಿದರು."

ಮಾತು ಮುಂದುವರೆಸಿ, "ಅಲ್ಲಿ ಯಾರೂ ಗಟ್ಟಿಯಾಗಿ ಏನೂ ಮಾತನಾಡಲಿಲ್ಲ. ಚಿರಂಜೀವಿ ಗಟ್ಟಿಯಾಗಿ ಮಾತನಾಡಿದ್ದಕ್ಕೆ ಜಗನ್ ಬಂದರು ಎಂಬುದು ಸುಳ್ಳು, ನಾನ್ಸೆನ್ಸ್. ಅಲ್ಲಿ ಯಾರೂ ಗಟ್ಟಿಯಾಗಿ ಮಾತನಾಡಲೇ ಇಲ್ಲ. ಯಾರೋ ಗಟ್ಟಿಯಾಗಿ ಮಾತನಾಡಿದರು ಅದಕ್ಕೆ ಜಗನ್ ಬಂದುಬಿಟ್ಟರು ಎಂಬುದೆಲ್ಲ ಸುಳ್ಳು. ಅಲ್ಲಿ ಯಾರೂ ಸಹ ಗಟ್ಟಿಯಾಗಿ ಮಾತನಾಡಲಿಲ್ಲ" ಎಂದು ಪರೋಕ್ಷವಾಗಿ ಚಿರಂಜೀವಿ ವಿರುದ್ಧ ಬಾಲಯ್ಯ ಸಿಟ್ಟು ವ್ಯಕ್ತಪಡಿಸಿದರು.ಬರೋಬ್ಬರಿ 2 ಕೋಟಿ ಕೇಸ್ ಹಾಕಿಸಿಕೊಂಡ ಬಿಗ್‌ಬಾಸ್...ಮಾಡಿದ ತಪ್ಪಾದ್ರೂ ಏನು ಗೊತ್ತಾ?

ತಮ್ಮ ಭಾಷಣದ ಕೊನೆಯಲ್ಲಿ ಸಿಟ್ಟಿನಿಂದ 'ನಾನ್ಸೆನ್ಸ್' ಎಂದು ಬಾಲಯ್ಯ ಹೇಳಿದರು. ಚಿರಂಜೀವಿ ಗಟ್ಟಿಯಾಗಿ ಮಾತನಾಡಲಿಲ್ಲ, ಅವರ ಮಾತಿಗೆ ಹೆದರಿ ಜಗನ್ ಸಭೆಗೆ ಬರಲಿಲ್ಲ, ಆದರೆ ಜಗನ್, ಚಿರಂಜೀವಿಗೆ ಮತ್ತು ಚಿತ್ರತಂಡಕ್ಕೆ ಅವಮಾನ ಮಾಡಿದ್ದು ನಿಜವೇ ಎಂದು ಬಾಲಕೃಷ್ಣ ಹೇಳಿದ್ದಾರೆ. ಬಾಲಯ್ಯ ಅವರ ಈ ಮಾತುಗಳು ಚಿರಂಜೀವಿ ಮತ್ತು ಬಾಲಕೃಷ್ಣ ನಡುವಿನ ವೈಮನಸ್ಸನ್ನು ಮತ್ತಷ್ಟು ಹೆಚ್ಚಿಸಿವೆ.