Skip to main content
ವಿಡಿಯೋ
1/2
weather

ತೆಲಂಗಾಣ, ಹೈದರಾಬಾದ್‌ನಲ್ಲಿ ಭಾರಿ ಪ್ರಮಾಣದ ಮಳೆ, ಹವಾಮಾನ ವೈಪರೀತ್ಯ - 3 ಇಂಡಿಗೋ ವಿಮಾನಗಳು ವಿಜಯವಾಡದಲ್ಲಿ ಹಾಲ್ಟ್‌

By Shravanthi R
ತೆಲಂಗಾಣ, ಹೈದರಾಬಾದ್‌ನಲ್ಲಿ ಭಾರಿ ಪ್ರಮಾಣದ ಮಳೆ, ಹವಾಮಾನ ವೈಪರೀತ್ಯ - 3 ಇಂಡಿಗೋ ವಿಮಾನಗಳು ವಿಜಯವಾಡದಲ್ಲಿ ಹಾಲ್ಟ್‌

ಹೈದರಾಬಾದ್ ಸೇರಿದಂತೆ ತೆಲಂಗಾಣದಲ್ಲಿ ತೀವ್ರ ಮಳೆ ಸುರಿಯುತ್ತಿದ್ದು, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆಯಿಂದಾಗಿ ಜಲಾವೃತ ಸ್ಥಿತಿಗಳು ಉಂಟಾಗಿ, ಮುಂಜಾಗ್ರತಾ ಕ್ರಮವಾಗಿ ಮುನ್ನೆಚ್ಚರಿಕೆ ನೀಡಿದ್ದು, ಜಿಲ್ಲಾಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೂಚನೆ ನೀಡಿದ್ದಾರೆ. 3 ಇಂಡಿಗೋ ವಿಮಾನಗಳು ವಿಜಯವಾಡದಲ್ಲಿ ಹಾಲ್ಟ್ ಮಾಡಲಾಗಿವೆ.

ಇಂದು ಹೈದರಾಬಾದ್‌ ಸೇರಿದಂತೆ ತೆಲಂಗಾಣದಲ್ಲಿಯೂ ವ್ಯಾಪಕ ಮಳೆ ದಾಖಲಾಗಿದೆ. ಮುಂದಿನ 48 ಗಂಟೆಗಳ ಕಾಲ ಸುರಿವ ಮಳೆ ನಿರೀಕ್ಷೆಯಿಂದಾಗಿ ತೆಲಂಗಾಣಕ್ಕೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿರುವಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ನಿವಾಸಿಗಳು ಜಾಗರೂಕತೆಯಿಂದಿರಲು ಸೂಚಿಸಿದೆ. ವ್ಯತಿರಿಕ್ತ ಹವಾಮಾನ ಪರಿಣಾಮ, ಸುರಕ್ಷತಾ ಎಚ್ಚರಿಕೆಯಿಂದಾಗಿ ಮೂರು ಇಂಡಿಗೋ ವಿಮಾನಗಳು ವಿಜಯವಾಡಕ್ಕೆ ಹಿಂದಿರುಗಿವೆ. 

ಹೈದರಾಬಾದ್ ಹಾಗೂ ತೆಲಂಗಾಣದ ಹಲವು ಭಾಗಗಳಲ್ಲಿ, ಮಳೆ ಪ್ರಮಾಣ ಹೆಚ್ಚಾಗಿದ್ದು, ಅಲ್ಲಿನ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಜಲಾವೃತ ಉಂಟಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದು, ಸಂಭಾವ್ಯ ಅಪಾಯ ಹಾಗೂ ಮುಂಜಾಗ್ರತಾ ಕ್ರಮವಾಗಿ ವಿಪತ್ತು ರಕ್ಷಣಾ ತಂಡಗಳು ಸಜ್ಜುಗೊಂಡಿದೆ ಎನ್ನಲಾಗಿದೆ. ಹದಗೆಟ್ಟಿರುವ ಹವಾಮಾನದಿಂದಾಗಿ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನ ಪ್ರಯಾಣಿಕರಿಗೆ ಈ ಬದಾಲವಣೆಯ ಕ್ರಮವನ್ನು ಸೂಚಿಸಿದ್ದಾರೆ ಎನ್ನಲಾಗಿದೆ. Indian Polity Courseware (English), 8e by M Laxmikanth for UPSC CSE 2025-26 | 40+ Conceptual Videos | 95 Well-structured Chapters | 18 Insightful Appendices | Full Colour eBook | Solved 13 Previous Years' Prelim Questions (2013–2025) | 12 Years' UPSC Main Exam Questions | Practice Questions Paperback – 1 August 2025

ಹೈದರಾಬಾದ್‌, ನಿಜಾಮಾಬಾದ್, ಭುವನಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಹಾಗೂ ಗುಡುಗು ಸಹಿತ ಗಂಟೆಗೆ 40 ಕಿಮೀ ವೇಗದಲ್ಲಿ ಮೇಲ್ಮೈ ಗಾಳಿ ಬೀಸುವ ಸಾಧ್ಯತೆಯಿದೆ ಎನ್ನಲಾಗಿದೆ. ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು GHMC, HYDRAA, NDRF, ಮತ್ತು SDRF ತಂಡಗಳನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳುವಂತೆ ಹಾಗೂ ಜನರು ಮನೆಯೊಳಗೆ ಇದ್ದು ಸಹಕರಿಸುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಶುರುವಾಯ್ತಾ ಚಿರಂಜೀವಿ Vs ಎನ್‌.ಟಿ.ಆರ್ ಫ್ಯಾಮಿಲ್ ವಾರ್...ನಾನ್ಸೆನ್ಸ್ ಎಂದಿದ್ಯಾಕೆ ಬಾಲಕೃಷ್ಣ?