ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಲ್ಲಿ ಪತ್ತೆಯಾದ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದೆ. ಅಸ್ಥಿಪಂಜರ ಪತ್ತೆಯಾದ ಸ್ಥಳದಲ್ಲಿ ಸಿಕ್ಕ ಚಾಲನಾ ಪರವಾನಗಿಯ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತುಮಕೂರು ಜಿಲ್ಲೆಯ ಕುಟುಂಬವೊಂದನ್ನು ವಿಚಾರಣೆಗೆ ಕರೆದಿದ್ದಾರೆ. ಕುಟುಂಬದ ಸದಸ್ಯರು ಗುರುವಾರ ಎಸ್‌ಐಟಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ.ತಿಮರೋಡಿಯೊಂದಿಗೆ ಚಿನ್ನಯ್ಯನ 15ನೇ ವಿಡಿಯೋ ವೈರಲ್: ಅನಾಥ ಶವಗಳ ಕುರಿತು ಸ್ಫೋಟಕ ಹೇಳಿಕೆ..!
ಪತ್ತೆಯಾದ ಅಸ್ಥಿಪಂಜರ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಆದಿಶೇಷ ನಾರಾಯಣ ಅವರದ್ದು ಎಂದು ಮೂಲಗಳು ತಿಳಿಸಿವೆ. ಇವರು 2013ರಿಂದ ನಾಪತ್ತೆಯಾಗಿದ್ದರು. ಆದರೆ, ಕುಟುಂಬದವರು ಈ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ. ಬಾರ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಆದಿಶೇಷ ನಾರಾಯಣ ಅವರ ಅಸ್ಥಿಪಂಜರ ಇತ್ತೀಚೆಗೆ ಬಂಗ್ಲೆಗುಡ್ಡದಲ್ಲಿ ಪತ್ತೆಯಾಗಿತ್ತು. ಪ್ರಸ್ತುತ, ಎಸ್‌ಐಟಿ ಅಧಿಕಾರಿಗಳು ಅವರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದಾರೆ.realme GT 7 5G Smartphone 12+256GB Blue, 6.78 inch Screen, 120HZ Curved Vision Display, 7000mAh Battery, 120W Ultra Charge, 140MP AI Cameras, Dimensity 9400e Flagship chip, IP69
ವ್ಯಕ್ತಿ ಆಗಾಗ್ಗೆ ಯಾರಿಗೂ ಹೇಳದೆ ಹೋಗುತ್ತಿದ್ದರು. ಹಲವು ದಿನಗಳ ಬಳಿಕ ವಾಪಸ್ಸಾಗುತ್ತಿದ್ದರು. ಹೀಗಾಗಿ, ನಾವು ದೂರು ನೀಡಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. "ಪೊಲೀಸರು ಈಗ ಮಾಹಿತಿ ನೀಡಿ, ಡಿಎನ್‌ಎ ಪರೀಕ್ಷೆಗೆ ಒಳಪಡುವಂತೆ ತಿಳಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಮತ್ತೊಂದು ಅಸ್ಥಿಪಂಜರದ ಗುರುತು ಪತ್ತೆಯಾಗಿದ್ದು, ಅದು ಕೊಡಗಿನ ಯು.ಬಿ. ಅಯ್ಯಪ್ಪ ಅವರದ್ದಾಗಿತ್ತು. ಅಯ್ಯಪ್ಪ ಅವರ ಪುತ್ರ ಜೀವನ್ ಕೂಡ ನಿನ್ನೆ ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ್ದರು.ಇಂದು ಬೆಳ್ತಂಗಡಿ ಕೋರ್ಟ್ ಮುಂದೆ ಆರೋಪಿ ಚಿನ್ನಯ್ಯ ಹಾಜರ್…!!
ಪ್ರಕರಣದ ದೂರುದಾರ ಮತ್ತು ಸಾಕ್ಷಿದಾರ ಚಿನ್ನಯ್ಯ ಎರಡನೇ ಬಾರಿಗೆ ಸೆಕ್ಷನ್ 183 ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ನ್ಯಾಯಾಧೀಶರ ಮುಂದೆ ಚಿನ್ನಯ್ಯನನ್ನು ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಅವರ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.