ದಾವಣಗೆರೆಯಲ್ಲಿ ನಡೆದ ದಸರಾ ಉತ್ಸವದಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯದಲ್ಲಿ ಹಿಂದುತ್ವದ ಅಲೆ ವ್ಯಾಪಕವಾಗಿ ಹರಡಿದೆ ಎಂದು ಅಭಿಪ್ರಾಯಪಟ್ಟರು. ತಾವು ಮುಖ್ಯಮಂತ್ರಿಯಾದರೆ, ಹಿಂದೂ ವಿರೋಧಿಗಳನ್ನು ಎದುರಿಸಲು ಪೊಲೀಸರಿಗೆ ಎಕೆ-47 ರೈಫಲ್‌ಗಳನ್ನು ನೀಡುವ ಭರವಸೆ ನೀಡಿದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ 'ತುಷ್ಟೀಕರಣ ನೀತಿ'ಯನ್ನು ಕಟುವಾಗಿ ಟೀಕಿಸಿದರು.
ಸೆಪ್ಟೆಂಬರ್ 26 ರಂದು ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತ್ನಾಳ, "ಇನ್ನೂ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಸರ್ಕಾರವು ಅಧಿಕಾರದಲ್ಲಿದ್ದು, ನಂತರ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾದರೆ, ಪೊಲೀಸರ ಕೈಗೆ ಮೊದಲು ಎಕೆ-47 ನೀಡುತ್ತೇನೆ" ಎಂದು ಘೋಷಿಸಿದರು. ಹಿಂದೂಗಳ ವಿರುದ್ಧ ಧ್ವನಿ ಎತ್ತುವವರಿಗೆ ಗುಂಡು ಹಾರಿಸುವುದು ಖಚಿತ ಎಂದು ಎಚ್ಚರಿಸಿದರು. Objective Indian Polity (English), 2e by M Laxmikanth for UPSC CSE Prelims 2025-26 | 13 new chapters | 1650 Topicwise Practice Questions covering the entire syllabus | 10 Model Test Papers Paperback – 30 August 2021
ನಗರದ ಶ್ರೀ ಸಿದ್ದೇಶ್ವರ ಮಿಲ್ ಆವರಣದಲ್ಲಿರುವ ಶ್ರೀ ಜೋಡಿ ಬನ್ನಿ ಮಹಾಂಕಾಳಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ರಾತ್ರಿ ನಡೆದ ಶ್ರೀ ದೇವನಗರಿ ದಸರಾ ಸಾಂಸ್ಕೃತಿಕ ಉತ್ಸವದ 5ನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಈ ಮಾತುಗಳನ್ನಾಡಿದರು.
ತಾನು ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತನಾಗಿಲ್ಲ ಎಂದು ಹೇಳಿದ ಯತ್ನಾಳ, ಹಿಂದೆ ನನಗೆ ದಾವಣಗೆರೆಯವರೆಗಿನ ಜನರಿಗೆ ಮಾತ್ರ ಗೊತ್ತಿತ್ತು. ಆದರೆ ಈಗ ನಾನು ಇಡೀ ಕರ್ನಾಟಕದ ವ್ಯಾಪ್ತಿಯಲ್ಲಿದ್ದೇನೆ. ಮಂಡ್ಯದ ಮದ್ದೂರಿನಲ್ಲೂ ಹಿಂದುತ್ವದ ಅಲೆ ಎದ್ದಿದೆ. ಮೊನ್ನೆ ಸುಮಾರು 20 ಸಾವಿರ ಯುವಕರು ಸ್ವಯಂ ಪ್ರೇರಿತರಾಗಿ ಬೈಕ್ ರ್ಯಾಲಿಯಲ್ಲಿ ನನ್ನನ್ನು ಸ್ವಾಗತಿಸಿದ್ದರು ಎಂದು ಹೇಳಿದರು. ಇದನ್ನೂ ಓದಿ: ಫ್ಲೆಕ್ಸ್ ಬೋರ್ಡ್ ಘರ್ಷಣೆಗೆ ಸಿಡಿದ ಯತ್ನಾಳ್...'ನಮ್ಮ ತಾಳ್ಮೆ ಪರೀಕ್ಷಿಸಬೇಡಿ' ಎಂದು ಎಚ್ಚರಿಕೆ!