ಅಮೆರಿಕಾ: ಸೆಪ್ಟೆಂಬರ್ 26, 2025 ರಂದು ವೈಟ್ ಹೌಸ್‌ನಲ್ಲಿ ನಡೆದ ಪತ್ರಿಕಾ ಸಂವಾದದ ಸಂದರ್ಭದಲ್ಲಿ, ಓವಲ್ ಆಫೀಸ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಶಲ್ ಆಸಿಮ್ ಮುನೀರ್‌ರ ಭೇಟಿಯ ಬಗ್ಗೆ ಹಾಸ್ಯಾಸ್ಪದ ಉತ್ತರ ನೀಡಿದ್ದಾರೆ.
ತಡವಾಗಿ ಆಗಮಿಸಿದ ಟ್ರಂಪ್, ಪತ್ರಿಕಾಗೋಷ್ಠಿಯಲ್ಲಿ ಹಾಸ್ಯದಿಂದ ಹೇಳಿದರು: "ಅವರು ಈ ಕೊಠಡಿಯಲ್ಲೇ ಇರಬಹುದು, ನನಗೆ ಗೊತ್ತಿಲ್ಲ ಏಕೆಂದರೆ ನಾವು ತಡವಾಗಿದ್ದೇವೆ... ಅವರು ಬಹುಶಃ ಸುಂದರವಾದ ಓವಲ್ ಆಫೀಸ್‌ನಲ್ಲಿ ಎಲ್ಲಾದರೂ ಇರಬಹುದು." ಈ ಹೇಳಿಕೆ ಅಲ್ಲಿದ್ದವೆರೆಲ್ಲರ ನಗೆಗೆ ಕಾರಣವಾಯಿತಾದರೂ, ಶರೀಫ್ ಮತ್ತು ಮುನೀರ್ ಸುಮಾರು 30 ನಿಮಿಷಗಳ ಕಾಲ ಕಾಯಬೇಕಾಯಿತು.ಇದನ್ನು ಓದಿ: USA ನಿರ್ಮಿತ F-16 ಯುದ್ದ ವಿಮಾನವನ್ನು ಹೊಡೆದುರಳಿಸಿದ್ದ ಮಿಗ್- 21 ನಿವೃತ್ತಿ: ಕಾರಣ ಹೀಗಿದೆ
ಘಟನೆಯ ಮುಖ್ಯ ವಿವರಗಳು:
ಗೊಂದಲದ ಕ್ಷಣ: ಶರೀಫ್ ಸಂಜೆ 5:00ಗೆ ವೈಟ್ ಹೌಸ್‌ಗೆ ಆಗಮಿಸಿದರು, ಆದರೆ ಟ್ರಂಪ್ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುವಲ್ಲಿ ತೊಡಗಿದ್ದರು. ಪಾಕಿಸ್ತಾನದ ತಂಡ, ಮುನೀರ್ ಸೇರಿದಂತೆ, ಸುಮಾರು 30 ನಿಮಿಷ ಕಾಯುತ್ತ ಕುಳಿತಿದ್ದರು. ನಂತರ ದ್ಚಿಪಕ್ಷೀಯ ಭೇಟಿ 5:30 PM ET ಯಿಂದ ಆರಂಭವಾಗಿ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು, 6:18 PM ET ಯಲ್ಲಿ ಕೊನೆಗೊಂಡಿತು.YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal
ಟ್ರಂಪ್‌ರ ಹೇಳಿಕೆ: ಶರೀಫ್ ಮತ್ತು ಮುನೀರ್‌ರನ್ನು "ಶ್ರೇಷ್ಠ ವ್ಯಕ್ತಿಗಳು" ಮತ್ತು "ಶ್ರೇಷ್ಠ ನಾಯಕರು" ಎಂದು ಕರೆದರು, ಅವರು ಯುಎಸ್-ಪಾಕಿಸ್ತಾನ ಸಂಬಂಧವನ್ನು ಬಲಪಡಿಸುವ ಕೀಲಿ ಕೈ ಎಂದು ಬಣ್ಣಿಸಿದರು.
ಭೇಟಿಯಲ್ಲಿ ಬಾಗವಹಿಸಿದ್ದವರು: ಈ ಸಭೆಯಲ್ಲಿ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸಹ ಭಾಗವಹಿಸಿದ್ದರು.
ಸಂದರ್ಭ: ಇದು ಶರೀಫ್‌ರ ಮೊದಲ ಅಧಿಕೃತ ದ್ವಿಪಕ್ಷೀಯ ಭೇಟಿಯಾಗಿದ್ದು, ಟ್ರಂಪ್‌ರ ಮೊದಲ ಅವಧಿಯಲ್ಲಿ 2019 ರಲ್ಲಿ ಮಾಜಿ ಪಾಕ್ ಪಿಎಂ ಇಮ್ರಾನ್ ಖಾನ್‌ರ ಭೇಟಿಯ ನಂತರ ಸುಮಾರು ಆರು ವರ್ಷಗಳ ನಂತರದ ಭೇಟಿಯಾಗಿದೆ.