ಕರ್ನಾಟಕ ರಾಜ್ಯದ 34 ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ರಾಜ್ಯ ಸರ್ಕಾರವು ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಪ್ರಕಟಗೊಂಡ ಪಟ್ಟಿಯಲ್ಲಿ ಕೆಲವು ಗೊಂದಲಗಳಿದ್ದವು. ಆದರೆ, ಅಂತಿಮವಾಗಿ ಎಐಸಿಸಿ ರವಾನಿಸಿದ್ದ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಮಾರ್ಪಾಡುಗಳನ್ನು ಮಾಡಿ, ಅಂತಿಮ ಮುದ್ರೆ ಒತ್ತಿದ್ದಾರೆ.ಇದನ್ನೂ ಓದಿ: ದಾವಣಗೆರೆ ಬ್ಯಾನರ್ ವಿವಾದ: 8 ಮಂದಿ ಅರೆಸ್ಟ್…!!
ಸೆಪ್ಟೆಂಬರ್ 26ರಂದು ಹೊರಡಿಸಲಾದ ಆದೇಶದ ಪ್ರಕಾರ, ನೂತನವಾಗಿ ನೇಮಕಗೊಂಡ ಅಧ್ಯಕ್ಷರು ತಮ್ಮ ಸ್ಥಾನದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಸೇವೆ ಸಲ್ಲಿಸಲಿದ್ದಾರೆ. ಕೆಲವು ದಿನಗಳಿಂದ ತೀವ್ರ ಗೊಂದಲಕ್ಕೀಡಾಗಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೂ ಕಾಗೆ ಅವರೇ ಮುಂದುವರಿಯಲಿದ್ದಾರೆ.ಇದನ್ನೂ ಓದಿ: ಶಿಕ್ಷಕರಿಗೆ ಜಾತಿ ಗಣತಿ ಕುರಿತು ಖಡಕ್ ವಾರ್ನಿಂಗ್ ನೀಡಿದ ಸಿಎಂ ಸಿದ್ದರಾಮಯ್ಯ, ಜಾತಿ ಗಣತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ..!!
ಇನ್ನು, ಎಐಸಿಸಿ ಕಳುಹಿಸಿದ್ದ ಮೂಲ ಪಟ್ಟಿಯಲ್ಲಿ ಇಲ್ಲದಿದ್ದರೂ, ಸಿಎಂ ಸಿದ್ದರಾಮಯ್ಯ ಅವರು ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಅವರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಒಟ್ಟಾರೆ, ಎಐಸಿಸಿ ನೀಡಿದ್ದ 39 ಹೆಸರುಗಳ ಪೈಕಿ ಸಿಎಂ ಸಿದ್ದರಾಮಯ್ಯ ಅವರು 34 ಮಂದಿಗೆ ಅಂಕಿತ ಹಾಕಿದ್ದಾರೆ. ಈ ಪಟ್ಟಿಯನ್ನು ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಇಲಾಖೆಗಳಿಗೆ ರವಾನಿಸಲಾಗಿದೆ.Sidhidata Women's Kanjivaram Banarasi Soft Silk Saree With Unstitched Blouse Piece (Silk Box Flower)
ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರ ಅಧಿಕೃತ ಪಟ್ಟಿ ಹೀಗಿದೆ:
ಪಿ. ರಘು – ಸಫಾಯಿ ಕರ್ಮಚಾರಿ ಆಯೋಗ
ಶಿವಲೀಲಾ ವಿನಯ್ ಕುಲಕರ್ಣಿ – ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ವಡ್ನಾಳ್ ಜಗದೀಶ್ – ಜೀವವೈವಿಧ್ಯ ಮಂಡಳಿ
ಮುರಳಿ ಅಶೋಕ್ – ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಡಾ. ಮೂರ್ತಿ – ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ
ಕರ್ನಲ್ ಮಲ್ಲಿಕಾರ್ಜುನ್ – ಮಾಜಿ ಸೈನಿಕರ ಕಲ್ಯಾಣ ಮಂಡಳಿ
ಡಾ. ಬಿ.ಸಿ. ಮುದ್ದುಗಂಗಾಧರ್ – ಮಾವು ಅಭಿವೃದ್ಧಿ ನಿಗಮ
ಶಾಲೆಟ್ ಪಿಂಟೋ – ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಜಿ.ಎಚ್. ಮರಿಯೋಜಿ ರಾವ್ – ಮರಾಠ ಅಭಿವೃದ್ಧಿ ನಿಗಮ
ಎಂ.ಎ. ಗಫೂರ್ – ಕರಾವಳಿ ಅಭಿವೃದ್ಧಿ ಪ್ರಾಧಿಕಾರ
ಕೆ. ಹರೀಶ್ ಕುಮಾರ್ – ಮೆಸ್ಕಾಂ
ಎನ್. ಸಂಪಂಗಿ – ಕರ್ನಾಟಕ ರಾಜ್ಯ ಉಗ್ರಾಣ ನಿಗಮ
ವೈ. ಸಯೀದ್ ಅಹ್ಮದ್ – ದೇವರಾಜ ಅರಸು ಟ್ರಕ್ ಟರ್ಮಿನಲ್
ಮಹೇಶ್ ಎಂ. – ಕಾಡುಗೊಲ್ಲ ಅಭಿವೃದ್ಧಿ ನಿಗಮ
ಎಚ್.ಬಿ. ಮಂಜಪ್ಪ – ಬಯಲುಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ
ಭರಮಣ್ಣ ಉಪ್ಪಾರ – ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
ಅಗಾ ಸುಲ್ತಾನ್ – ಕೇಂದ್ರ ಪರಿಹಾರ ಸಮಿತಿ
ಎಸ್.ಜಿ. ನಂಜಯ್ಯನಮಠ – ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
ಅರುಣ್ ಕುಮಾರ್ ಪಾಟೀಲ್ – ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ಬಾಬು ಹೊನ್ನಾ ನಾಯ್ಕ್ – ಕಾಡಾ, ಭೀಮರಾಯನಗುಡಿ, ಕಲಬುರಗಿ
ಯುವರಾಜ್ ಕದಮ್ – ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ, ಬೆಳಗಾವಿ
ಪ್ರವೀಣ್ ಕುಮಾರ್ ಪಾಟೀಲ್ – ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ
ಮಂಜುನಾಥ ಪೂಜಾರಿ – ನಾರಾಯಣ ಗುರು ಅಭಿವೃದ್ಧಿ ನಿಗಮ
ಎಂ.ಎಸ್. ಮುತ್ತುರಾಜ್ – ಸವಿತಾ ಸಮಾಜ ಅಭಿವೃದ್ಧಿ ನಿಗಮ
ನಂಜಪ್ಪ – ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
ವಿಶ್ವಾಸ್ ಕುಮಾರ್ ದಾಸ್ – ಗಾಣಿಗ ಅಭಿವೃದ್ಧಿ ನಿಗಮ
ಎಸ್. ಗಂಗಾಧರ್ – ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್
ಪಟೇಲ್ ಶಿವಣ್ಣ – ಹಾಸನ ನಗರಾಭಿವೃದ್ಧಿ ಪ್ರಾಧಿಕಾರ
ಡಾ. ಶ್ರೀನಿವಾಸ್ ವೇಲು – ಕುಂಬಾರ ಅಭಿವೃದ್ಧಿ ನಿಗಮ
ಟಿ.ಎಂ. ಶಹೀದ್ ತೆಕ್ಕಿಲ್ – ರಾಜ್ಯ ಕನಿಷ್ಠ ವೇತನ ಮಂಡಳಿ
ಚೇತನ್ ಕೆ. ಗೌಡ – ರಾಜ್ಯ ಜವಳಿ, ಮೂಲ ಸೌಕರ್ಯ ಅಭಿವೃದ್ಧಿ ನಿಗಮ
ಲಾವಣ್ಯ ಬಲ್ಲಾಳ್ ಜೈನ್ – ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆ
ಎಚ್.ಡಿ. ಗಣೇಶ್ – ಮೈಸೂರು ಪೇಂಟ್ಸ್, ವಾರ್ನಿಷ್ ಲಿಮಿಟೆಡ್
ನಿಕೇತ್ ರಾಜ್ – ಬಿಎಂಟಿಸಿ