ಜಗತ್ತು ಜಡವಲ್ಲ. ಅದಕ್ಕಾಗಿ ಭೂಮಿ ಸಂಚರಿಸುತ್ತದೆ. ಅದಕ್ಕೂ ಪ್ರವಾಸದ ಮಹತ್ವವಿದೆ. ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವ ನಾಣ್ಣುಡಿಯು ಅರ್ಥಪೂರ್ಣವೆನಿಸಿರುವುದು. ಇಂದು ವಿಶ್ವ ಪ್ರವಾಸೋದ್ಯಮ ದಿನವಾಗಿದೆ. ಬಹುಮುಖತೆಯ ಸಂಕೇತವಾಗಿರುವ ಪ್ರವಾಸವು ನಮಗೆ ಜೀವನ ಪರ್ಯಟನೆ, ಉದ್ಯೋಗ ಸೃಷ್ಟಿ, ಸಂಸ್ಕೃತಿ ಸಂಚಲನ ಮೌಲ್ಯಗಳನ್ನು ಪರಿಚಯಿಸುತ್ತದೆ.
ಜಗತ್ತಿನ ಸಾಂಸ್ಕೃತಿಕ ವೈವಿಧ್ಯತೆ, ಆರ್ಥಿಕ ಅಭಿವೃದ್ಧಿ ಮತ್ತು ಪರಂಪರೆಯ ಸಂರಕ್ಷಣೆಗೆ ಪ್ರವಾಸೋದ್ಯಮದ ಪಾತ್ರವು ಅಮೂಲ್ಯವಾಗಿದೆ. ಸೆಪ್ಟೆಂಬರ್ 27 ರಂದು ಆಚರಿಸಲಾಗುವ ವಿಶ್ವ ಪ್ರವಾಸೋದ್ಯಮ ದಿನವು, ಸುಸ್ಥಿರ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮದ ಮಹತ್ವವನ್ನು ಒತ್ತಿಹೇಳುತ್ತದೆ.
ಜಾಗತಿಕ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರವನ್ನು ಬಹುಮುಖ್ಯವಾಗಿ ಪರಿಗಣಿಸಿ, ಈ ಬಗ್ಗೆ ಜಾಗೃತಿ ಮೂಡಿಸಲು 1980 ರಲ್ಲಿ ವಿಶ್ವಸಂಸ್ಥೆಯ, ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) ಸೆಪ್ಟೆಂಬರ್ 27 ರಂದು ಪ್ರತಿ ವರ್ಷ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸುವಂತೆ ಕೋರಿದೆ. ದೇಶದ ಆರ್ಥಿಕತೆ, ಐತಿಹಾಸಿಕ ಹೆಜ್ಜೆಗಳ ಮೈಲಿಗಲ್ಲನ್ನು ಸ್ಮರಿಸಿ, ಅಭಿವೃದ್ದಿ ಹೆಚ್ಚಿಸುವಲ್ಲೂ ಪ್ರಮುಖ ಪಾತ್ರ ಹೊಂದಿರುವ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಈ ದಿನದಂದು ಪರಿಸರ ಸಂರಕ್ಷಣೆ ಧ್ಯೇಯದೊಟ್ಟಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗಿದೆ. GoTo Guide for NTA UGC NET/ SET/ JRF Paper 1 Teaching & Research Aptitude (Compulsory) with Chapter-wise 2025 - 2016 Previous Year Questions 4th Edition | NEP 2020 Paperback – 15 April 2025
ಜ್ಞಾನ, ಆಚಾರ-ವಿಚಾರಗಳ ಸ್ಮರಿಕೆ, ಜೀವನಶೈಲಿ ಸಮರ್ಪಣೆ ಸೇರಿದಂತೆ ಈ ದಿನವು ವಿಶೇಷತೆಯಿಂದ ಕೂಡಿದೆ. ವಿಶ್ವ ಪ್ರವಾಸೋದ್ಯಮ ದಿನವನ್ನು ಪಯಣಿಸುವ ರೂಪಾಂತರದ ಶಕ್ತಿಯ ಪ್ರತಿಬಿಂಬಿತವಾಗಿ ಆಚರಿಸಲಾಗಿದೆ. ಇದು ಕೇವಲ ರಜಾದಿನಗಳಂದು ವಿಹಾರಿಸುವುದಕ್ಕೂ ಮೀರಿ; ಸುಸ್ಥಿರ ಪ್ರವಾಸೋದ್ಯಮ, ಸಾಂಸ್ಕೃತಿಕ ವಿನಿಮಯ ಮತ್ತು ಸಮುದಾಯಗಳಿಗೆ ಪ್ರಯೋಜನಕಾರಿಯಾದ, ಪರಂಪರೆಯನ್ನು ಸಂರಕ್ಷಿಸುವ ಮತ್ತು ಜವಾಬ್ದಾರಿಯುತ ಪ್ರವಾಸೀ ತಾಣಗಳ ಮಾಹಿತಿ ಮತ್ತು ಪ್ರವಾಸಿಗರ ಪ್ರಯಾಣದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಇದನ್ನೂ ಓದಿ: ಅಕ್ಸೆಂಚರ್‌ನಲ್ಲಿ ಉದ್ಯೋಗ ಕತ್ತರಿ - ಮೂರು ತಿಂಗಳಲ್ಲಿ 11,000 ಉದ್ಯೋಗಿಗಳು ಕೆಲಸದಿಂದ ವಜಾ.!