ಚಿಕ್ಕಬಳ್ಳಾಪುರ (ಸೆ.28): ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಗಣತಿದಾರ ಶಿಕ್ಷಕಿಯೊಬ್ಬರಿಗೆ ನಾಯಿ ಕಡಿದು ಗಾಯಗೊಂಡ ಘಟನೆ ಶನಿವಾರ ನಗರದಲ್ಲಿ ನಡೆದಿದೆ. ಗಾಯಗೊಂಡ ಶಿಕ್ಷಕಿಯನ್ನು ಕೂತನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರಜನಿ ಎಂದು ಗುರ್ತಿಸಲಾಗಿದೆ. ತಿಮ್ಮಕ್ಕ ಲೇಔಟ್‌ನ ಪಿಡಿಒ ನಾರಾಯಣಸ್ವಾಮಿ ಅವರ ಮನೆಯಲ್ಲಿ ಸಮೀಕ್ಷೆ ಮುಗಿಸಿ ಹೊರಬರುವಾಗ ಮನೆಯಲ್ಲಿದ್ದ ನಾಯಿ ದಾಳಿ ಮಾಡಿ ರಜನಿಯವರನ್ನು ಕಚ್ಚಿ ಗಾಯಗೊಳಿಸಿದೆ.
ತಕ್ಷಣ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ರಜನಿಯವರಿಗೆ ವೈದ್ಯರು ದಿನನಿತ್ಯ ರಾಬೀಸ್ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಗಣತಿದಾರರು, "ನಮಗೆ ಅಪರಿಚಿತ ಮತ್ತು ಅಜ್ಞಾತ ಪ್ರದೇಶಗಳಲ್ಲಿ ಸಮೀಕ್ಷೆಗೆ ನಿಯೋಜಿಸಲಾಗಿದೆ. ಯಾವ ಮನೆಯಲ್ಲಿ ಅಥವಾ ಬೀದಿಯಲ್ಲಿ ನಾಯಿಗಳು ದಾಳಿ ಮಾಡಬಹುದು ಎಂದು ತಿಳಿದಿಲ್ಲ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ. Guess Dare Floral Fruity Liquid Eau De Toilette - 100 Ml (For Women)
ಮಂಡ್ಯದಲ್ಲಿ ಬೀದಿನಾಯಿಗಳ ದಾಳಿ: 18ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ ಮಂಡ್ಯದಲ್ಲಿ ಬೀದಿನಾಯಿಗಳ ದಾಳಿಯಿಂದ ಎಂಟು ಮಕ್ಕಳು ಸೇರಿದಂತೆ 18 ಜನ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಮತ್ತು ಶನಿವಾರ ಮುಸ್ಲಿಂ ಬ್ಲಾಕ್, ಚನ್ನಪಟ್ಟಣ ರಸ್ತೆ, ಕನಕಪುರ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೀದಿನಾಯಿಗಳು 18 ಜನರನ್ನು ಕಚ್ಚಿ ತೀವ್ರ ಗಾಯಗೊಳಿಸಿವೆ. ಗಾಯಗೊಂಡವರಿಗೆ ಹಲಗೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮುಂದಿನ ಚಿಕಿತ್ಸೆಗಾಗಿ ಮಳವಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿರಂತರ ದಾಳಿಗಳಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೊರಗೆ ಓಡಾಡಲು ಭಯಪಡುವ ಸ್ಥಿತಿ ತಲುಪಿದೆ. ಬೆಳಗಿನ ಜಾವ ಪತ್ರಿಕೆ ವಿತರಕರು ಮತ್ತು ಹಾಲು ವಿತರಕರಿಗೂ ನಾಯಿಗಳ ಹಾವಳಿಯಿಂದ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. Maharashtra Dy CM Eknath Shinde Praises PM Modi for Elevating India as 'Vishwaguru'
ಹಲಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಬೀದಿಗಳಲ್ಲಿ ಓಡಾಡುವ ನಾಯಿಗಳಿಂದ ಜನರು ಮತ್ತು ಮಕ್ಕಳು ಹೊರಗೆ ಬರಲು ಭಯಪಡುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ಚೆಂದಿಲ್ ಅವರನ್ನು ಸಂಪರ್ಕಿಸಿದಾಗ, "ಹಲಗೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಯಿಗಳ ಹಾವಳಿ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.