ತಮಿಳುನಾಡಿನ ಕರೂರು ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಪ್ರತಿಕ್ರಿಯಿಸಿದ್ದಾರೆ. ರ್ಯಾಲಿ ಸಂದರ್ಭದಲ್ಲಿ ಸುಮಾರು 30 ಕ್ಕೂ ಹೆಚ್ಚು ಜನರ ಪ್ರಾಣ ಬಲಿಯಾಗಿರುವುದಕ್ಕೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಯಾವುದೇ ರಾಜಕೀಯ ಹೇಳಿಕೆ ತಾನು ನೀಡುವುದಿಲ್ಲ ಹಾಗೂ ಘಟನೆ ಸಂಬಂಧ ತನಿಖೆ ಆಯೋಗದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈವರೆಗೆ ರಾಜಕೀಯ ರ್ಯಾಲಿಯಲ್ಲಿ ಇಷ್ಟೊಂದು ಸಾವು ನೋವು ಸಂಭವಿಸಿದ್ದ ಸಂದರ್ಭ ಇಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಕಾಲಿವುಡ್ ನ ಖ್ಯಾತ ನಟ ಹಾಗೂ ರಾಜಕಾರಣಿ ವಿಜಯ್ ದಳಪತಿ ಅವರ ರಾಜಕೀಯ ರ್ಯಾಲಿ ಸಂದರ್ಭದಲ್ಲಿ ಕರೂರಿನ ಸ್ಥಳದಲ್ಲಿ ಅನೇಕ ಜನರು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದೊಂದು ನಿಜಕ್ಕೂ ಭಯಾನಕ ದುರಂತವೇ ಸರಿ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಹೇಳಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನು; ಗಾಯಗೊಂಡವರಿಗೆ 1 ಲಕ್ಷ ಪರಿಹಾರವಾಗಿ ಘೋಷಣೆ ಮಾಡಿದ್ದು, ಗಾಯಗೊಂಡವರ ಪರಿಸ್ಥಿತಿಯನ್ನು ಗಮನಿಸಲು ಆಸ್ಪತ್ರೆಗೆ ಭೇಟಿಯಾದರು. PW NTA 68 UGC NET Paper 1 (Teaching & Research Aptitude) Previous Year Solved Papers with Complete Chapter Notes I Unitwise and Topicwise | 17 Years PYQs upto June 2025 I NET, JRF, SET [Paperback] PW Paperback – 16 July 2025
ಇದೇ ವೇಳೆ ಅವರು, ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ದುರ್ಘಟನೆ ನಡೆದಿದೆ ಎಂದಿದ್ದಾರೆ. ದುರಂತದ ಪ್ರಾಥಮಿಕ ವರದಿ ಬಳಿಕ ಮುಂದಿನ ಕ್ರಮ ಕುರಿತಾಗಿ ತಿಳಿಸಲಾಗುವುದು ಎಂದಿದ್ದಾರೆ. ಕಾಲ್ತುಳಿತ ದುರಂತದ ತನಿಖೆಗೆ ರಾಜ್ಯ ಸರ್ಕಾರದಿಂದ ಏಕಸದಸ್ಯ ತನಿಖಾ ಆಯೋಗದ ಮುಖ್ಯಸ್ಥರಾಗಿ ನಿವೃತ್ತ ನ್ಯಾಯಮೂರ್ತಿ ಅರುಣ್ ಜಗದೀಶನ್ ಅವರನ್ನು ನೇಮಿಸಲಾಗಿದೆ. ಇವರ ನೇತೃತ್ವದಲ್ಲಿ ಸಾಂತಕುಲಂ ಕಸ್ಟಡಿ ಸಾವಿನ ತನಿಖೆಯನ್ನು ನಡೆಸಲಾಗಿತ್ತು ಎಂದು ಮಾಹಿತಿ ದೊರಕಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ, ನಟ ಹಾಗೂ ರಾಜಕಾರಣಿ ವಿಜಯ್ ದಳಪತಿ ಅವರ ಬಂಧನದ ಬಗ್ಗೆ ಅನೇಕ ಚರ್ಚೆಗಳು, ಊಹೆಗಳು ಹುಟ್ಟಿಕೊಂಡಿದ್ದು; ಕಾರ್ಯಕ್ರಮದಲ್ಲಿ ಪೊಲೀಸ್ ಬಂದೋಬಸ್ತ್ ಹಾಗೂ ಜನಸಂದಣಿ ನಿಯಂತ್ರಣದ ಕುರಿತು ಟೀಕೆಗಳು ಎದ್ದಿವೆ. ಇದರ ಕುರಿತಾಗಿ ಪ್ರತಿಕ್ರಿಯಿಸಿದ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಹೆಸರನ್ನು ಉಲ್ಲೇಖಿಸದೇ, ರಾಜಕೀಯ ಪಕ್ಷ ನಡೆಸಿದ ಕಾರ್ಯಕ್ರಮದಿಂದಾಗಿ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಇಂತಹ ದುಸ್ಥಿತಿ ಇನ್ನೆಂದಿಗೂ ಸಂಭವಿಸಬಾರದು ಎಂದು ಹೇಳಿದರು. ಇದನ್ನೂ ಓದಿ: ನನ್ನ ಹೃದಯ ಒಡೆದು ಹೋಗಿದೆ, ನೋವು, ದುಃಖದಿಂದ ನರಳುತ್ತಿದ್ದೇನೆ: ಕಾಲ್ತುಳಿತ ಘಟನೆ ಬಗ್ಗೆ ನಟ ವಿಜಯ್ ಮೊದಲ ಪ್ರತಿಕ್ರಿಯೆ