Skip to main content
ವಿಡಿಯೋ
1/2
politics

ರಾಮನಗರ: ಡಿಜಿಟಲ್ ಬೂತ್ ಮೂಲಕ ಗ್ಯಾರಂಟಿ ಯಶಸ್ಸಿಗೆ ಡಿಕೆಶಿ ಕರೆ..!

By Sushmitha R
ರಾಮನಗರ: ಡಿಜಿಟಲ್ ಬೂತ್ ಮೂಲಕ ಗ್ಯಾರಂಟಿ ಯಶಸ್ಸಿಗೆ ಡಿಕೆಶಿ ಕರೆ..!

ರಾಮನಗರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗ್ಯಾರಂಟಿ ಅನುಷ್ಠಾನ ಸಮಿತಿಯ ಪದಾಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಸರಿಯಾದ ತಿಳಿವಳಿಕೆ ಮೂಡಿಸುವುದು ಅನಿವಾರ್ಯ ಎಂದು ಹೇಳಿದರು

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗ್ಯಾರಂಟಿ ಅನುಷ್ಠಾನ ಸಮಿತಿಯ ಪದಾಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಸರಿಯಾದ ತಿಳಿವಳಿಕೆ ಮೂಡಿಸುವುದು ಅನಿವಾರ್ಯ ಎಂದು ಹೇಳಿದರು.ಬೆಂಗಳೂರು ಜಿಬಿಎ ಕಾರ್ಪೊರೇಷನ್‌ಗಳ ಚುನಾವಣೆಗೆ ತಯಾರಿ..!

ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಫಲಾನುಭವಿಗಳ ಸಮಾವೇಶ ನಡೆಸಬೇಕು ಎಂದು ಸೂಚಿಸಿದರು. ಜೆಡಿಎಸ್-ಬಿಜೆಪಿ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸದಂತೆ ಷಡ್ಯಂತ್ರ ಮಾಡುತ್ತಿವೆ. ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸಲು ಅಪಪ್ರಚಾರ ನಡೆಸುತ್ತಿವೆ ಎಂದು ಟೀಕಿಸಿದ ಶಿವಕುಮಾರ್, ಇದನ್ನು ತಡೆಯಲು ಸಮಿತಿ ಸದಸ್ಯರು ಪ್ರತಿ ಮನೆಯೂ ಸಂಪರ್ಕಿಸಬೇಕು ಎಂದು ಹೇಳಿದರು. OnePlus Nord 5 | Snapdragon 8s Gen 3 | Stable 144FPS Gaming | Dual 50MP Flagship Camera | Powered by OnePlus AI | 8GB + 256GB | Marble Sands

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಐದು ಗ್ಯಾರಂಟಿಗಳ ಫಲಾನುಭವಿಗಳನ್ನು ಸೇರಿಸಿ ಸಮಾವೇಶ ನಡೆಸಿ, ಅವರಿಂದಲೇ ಯೋಜನೆಗಳಿಂದ ಬದುಕು ಬದಲಾವಣೆಯ ಕಥೆಗಳನ್ನು ಹಂಚಿಕೊಳ್ಳಿಸಬೇಕು ಎಂದರು. ಪ್ರತಿ ಬೂತ್‌ನಲ್ಲಿ ಡಿಜಿಟಲ್ ಬೂತ್ ಅಥವಾ ಯೂತ್ ಗ್ರೂಪ್ ಹೆಸರಿನಲ್ಲಿ ಫಲಾನುಭವಿಗಳ ವಾಟ್ಸ್‌ಆಪ್ ಗುಂಪುಗಳನ್ನು ರಚಿಸಿ, ಅಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಿದರು.

ಇದರ ಮುಖ್ಯ ಉದ್ದೇಶ ವಿರೋಧ ಪಕ್ಷಗಳ ಅಪಪ್ರಚಾರವನ್ನು ತಡೆದು, ಯೋಜನೆಗಳ ಸತ್ಯಾಂಶಗಳನ್ನು ಜನರಿಗೆ ತಲುಪಿಸುವುದು ಎಂದು ಸ್ಪಷ್ಟಪಡಿಸಿದರು. ಸರ್ಕಾರ ನಿಮ್ಮನ್ನು ನಾಯಕರೆಂದು ಗುರುತಿಸಿ ಜವಾಬ್ದಾರಿ ನೀಡಿದೆ. ತಾಲ್ಲೂಕು ಮಟ್ಟದಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳ ಸಭೆ ಕರೆದು, ಪಂಚ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಖಚಿತಪಡಿಸಬೇಕು. ಶಾಸಕರಿಗಿಂತಲೂ ಶಕ್ತಿಯುತವಾಗಿ ಕೆಲಸ ಮಾಡುವ ಅಧಿಕಾರ ಸರ್ಕಾರ ನೀಡಿದೆ ಎಂದು ತಿಳಿಸಿದರು.ಧಾರವಾಡ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ: ಸಮಸ್ಯೆಗಳಿಂದ ಬಳಲುತ್ತಿರುವ ಗಣತಿದಾರರ ಅಹವಾಲು ಸಿ.ಟಿ. ರವಿ ಬಹಿರಂಗ ಪತ್ರದಲ್ಲಿ..!

ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಡಿ.ಕೆ. ಶಿವಕುಮಾರ್ ಈ ಯೋಜನೆಗಳ ರೂವಾರಿಯಾಗಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ರಾಹುಲ್ ಗಾಂಧಿಯವರ ನ್ಯಾಯ್ ಯೋಜನೆಯನ್ನು ಕರ್ನಾಟಕಕ್ಕೆ ತಂದಿದ್ದಾರೆ. ಇದರ ಫಲವಾಗಿ 1 ಲಕ್ಷ ಕೋಟಿ ರೂಪಾಯಿ ನೇರವಾಗಿ ಜನರ ಖಾತೆಗೆ ಹಬ್ಬಿದೆ ಎಂದರು.

ಸರ್ಕಾರ ಮಾತಿನಂತೆ ಯೋಜನೆಗಳನ್ನು ಪಕ್ಷಾತೀತ, ಜಾತ್ಯತೀತವಾಗಿ ಅನುಷ್ಠಾನಗೊಳಿಸಿದೆ. ರಾಮನಗರ ಜಿಲ್ಲೆಯಲ್ಲಿ 98% ಅನುಷ್ಠಾನ ಸಾಧ್ಯವಾಗಿದೆ ಎಂದರು. ಕಾರ್ಯಾಗಾರದಲ್ಲಿ ದೇವೇಗೌಡರ ಕುಟುಂಬ ಹಾಗೂ ರಾಮನಗರ ರಾಜಕಾರಣದ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಶಿವಕುಮಾರ್, ಅವರಿಗೆ ಟಾಂಗ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು. ನಾವೆಲ್ಲಾ ಬೆಂಗಳೂರು ಜಿಲ್ಲೆಯವರು. ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಪಂ ಸದಸ್ಯನಾಗಿದ್ದೆ ಎಂದು ನೆನಪಿಸಿಕೊಂಡರು."PM ಮೋದಿ ಅವರು ಭಾರತವನ್ನು ವಿಶ್ವಗುರುವಾಗಿ ಸ್ಥಾಪಿಸಿದ್ದಾರೆ": ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ