ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಸಮೀಕ್ಷೆಯ ವೇಳೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಅವರು, ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ನಾನು ಸಿಎಂ ಆಗಿದ್ರೆ ಹಿಂದೂ ವಿರೋಧಿಗಳನ್ನ ಮಟ್ಟ ಹಾಕಲು ಪೊಲೀಸರಿಗೆ AK 47 ಕೊಡ್ತಿದ್ದೆ- ಬಸನಗೌಡ ಪಾಟೀಲ್ ಯತ್ನಾಳ್!
ಸಿ.ಟಿ. ರವಿ ಅವರ ಪತ್ರದಲ್ಲಿ, ಹೆಚ್ಚುವರಿ ಜವಾಬ್ದಾರಿಗಳಿಂದ ಈಗಾಗಲೇ ಬಳಲಿರುವ ಶಿಕ್ಷಕರು, ಈ ಸಮೀಕ್ಷೆಯಿಂದ ಇನ್ನಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಲವೆಡೆ ಗಣತಿದಾರರಿಗೆ ಸ್ಥಳ ನಿಯುಕ್ತಿ ಸೇರಿದಂತೆ ಮಾಹಿತಿ ಸಂಗ್ರಹಿಸಲು ನೀಡಿರುವ ಅಪ್ಲಿಕೇಶನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಗಳಿಂದಲೂ ತೊಂದರೆಯಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ.Naixa Women's Red Vichitra Silk Embroidered Flared Kurta with Pant and Dupatta Sets (Available in Plus Size) (NX-643)
ಸಮೀಕ್ಷೆಗೆ ಪೂರ್ವತಯಾರಿ ಮತ್ತು ತಾಂತ್ರಿಕ ವ್ಯವಸ್ಥೆ ರೂಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ. ಪ್ರಾಯೋಗಿಕವಾಗಿ ಟ್ರಯಲ್ ರನ್ ನಡೆಸಿದ ನಂತರವಷ್ಟೇ ಸಮೀಕ್ಷಾ ಕಾರ್ಯವನ್ನು ವಿಸ್ತರಿಸಬೇಕಿತ್ತು ಎಂದು ಅವರು ಸಲಹೆ ನೀಡಿದ್ದಾರೆ.
ಮನೆಗಳ ನಿಖರವಾದ ಸರಣಿ ಜೋಡಣೆ ಇಲ್ಲದಿರುವುದು ಗಣತಿದಾರರಿಗೆ ಸಮಸ್ಯೆಯಾಗಿದೆ. ಇದರಿಂದ ಒಂದೇ ಮನೆಯನ್ನು ಎರಡು ಬಾರಿ ದಾಖಲಿಸುವ ಅಥವಾ ಮನೆಗಳು ಗಣತಿಯಿಂದ ತಪ್ಪಿಹೋಗುವ ಸಾಧ್ಯತೆ ಇದೆ. ಮನೆ ಗುರುತಿಸಲು ನೀಡಿರುವ ಯು.ಎಚ್.ಐ.ಡಿ. ಸಂಖ್ಯೆಯ ಮೂಲಕ ಮಾಹಿತಿ ಹುಡುಕುವಲ್ಲಿಯೂ ತಾಂತ್ರಿಕ ದೋಷಗಳು ಕಂಡುಬರುತ್ತಿದ್ದು, ಇದು ಗಣತಿದಾರರ ಸಮಯ ಮತ್ತು ಶ್ರಮವನ್ನು ವ್ಯರ್ಥ ಮಾಡುತ್ತಿದೆ.ಧರ್ಮಸ್ಥಳ 'ಬುರುಡೆ ಗ್ಯಾಂಗ್' ಪ್ರಕರಣ: ಸುಪ್ರೀಂ ಟೀಕೆ, ಗೃಹ ಸಚಿವರು ಮೌನ!
ಗಣತಿದಾರರು ಮತ್ತು ಸಮೀಕ್ಷೆಯ ಮಾಹಿತಿ ನೀಡುವವರಿಗೆ ಒಟಿಪಿ ಸರಿಯಾಗಿ ಬಾರದಿರುವುದು ಪ್ರಕ್ರಿಯೆಗೆ ಅಡ್ಡಿಯಾಗಿದೆ. ಆಧಾರ್ ದೃಢೀಕರಣಕ್ಕೂ ಇದೇ ಸಮಸ್ಯೆ ಎದುರಾಗಿದೆ ಎಂದು ಸಿ.ಟಿ. ರವಿ ಪತ್ರದಲ್ಲಿ ತಿಳಿಸಿದ್ದಾರೆ. ಪ್ರತಿಯೊಂದು ಮನೆಯ ಸಮೀಕ್ಷೆಗೆ 60 ಪ್ರಶ್ನೆಗಳನ್ನು ಕಡ್ಡಾಯಗೊಳಿಸಿರುವುದು ಗಣತಿದಾರರಿಗೆ ಹೊರೆಯಾಗಿದ್ದು, ಮಾಹಿತಿ ನೀಡುವವರಲ್ಲೂ ಬೇಸರ ಮೂಡಿಸಿದೆ.
ಗಣತಿದಾರರಿಗೆ ಮತ್ತು ಅವರ ಮೇಲಿನ ಅಧಿಕಾರಿಗಳಿಗೆ ಗಣತಿ ಪೂರ್ತಿಗೊಳಿಸಲು ಬೆದರಿಕೆ ಹಾಕಲಾಗುತ್ತಿದೆಯೇ ಹೊರತು, ಅವರ ಸಮಸ್ಯೆಗಳನ್ನು ಕೇಳಿ ಪರಿಹರಿಸುವ ಕೆಲಸ ಆಗುತ್ತಿಲ್ಲ ಎಂದು ಸಿ.ಟಿ. ರವಿ ಮುಖ್ಯಮಂತ್ರಿಯವರ ಗಮನ ಸೆಳೆದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಹಿರಂಗ ಪತ್ರದಲ್ಲಿ ಅವರು ಆಗ್ರಹಿಸಿದ್ದಾರೆ.34 ನಿಗಮ-ಮಂಡಳಿಗಳ ನೂತನ ಅಧ್ಯಕ್ಷರ ನೇಮಕ...ಸಿಎಂ ಸಿದ್ದರಾಮಯ್ಯ ಒತ್ತಿದ ಅಂತಿಮ ಮುದ್ರೆ!