ನಟ, ರಾಜಕಾರಣಿ ವಿಜಯ್ ಮತ್ತು ಅವರು ಸ್ಥಾಪಿಸಿರುವ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ವಿರುದ್ಧ ವಾಣಿಜ್ಯ ಚಿಹ್ನೆ ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಸೆಪ್ಟೆಂಬರ್ 26 ರಂದು ನಟನ ಪ್ರತಿಕ್ರಿಯೆ ಕೇಳಿದೆ [ಜಿಬಿ ಪಚೈಯಪ್ಪನ್ ಮತ್ತು ತಮಿಳಗ ವೆಟ್ರಿ ಕಳಗಂ ನಡುವಣ ಪ್ರಕರಣ].Levi's Men's Slim Fit Mid Rise 511 Mid-Rise Jeans
ತಾವು ನಡೆಸುತ್ತಿರುವ ಥೊಂಡೈ ಮಂಡಲ ಸಾಂದ್ರೋರ್ ಧರ್ಮ ಪರಿಬಲನ ಸಭಾ ಎಂಬ ಟ್ರಸ್ಟ್ ಬಳಸುತ್ತಿದ್ದ ಧ್ವಜವನ್ನು ನಕಲು ಮಾಡಿ TVK ಧ್ವಜ ರಚಿಸಲಾಗಿದೆ ಎಂದು ಟ್ರಸ್ಟ್ ಪ್ರತಿನಿಧಿಯಾದ ಜಿ ಬಿ. ಪಚೈಯಪ್ಪನ್ ದೂರಿದ್ದರು. ಆದರೆ ಟಿವಿಕೆ ಧ್ವಜ ಬಳಸದಂತೆ ತಡೆಯಲು ಮಧ್ಯಂತರ ಆದೇಶ ನೀಡುವುದಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ನಿರಾಕರಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಪಚೈಯಪ್ಪನ್ ಮತ್ತು ಅವರ ಟ್ರಸ್ಟ್ ಹೈಕೋರ್ಟ್ ವಿಭಾಗೀಯ ಪೀಠದ ಮೊರೆ ಹೋಗಿತ್ತು.
ಪ್ರಕರಣವನ್ನು ಸೆಪ್ಟೆಂಬರ್ 26 ರಂದು ಆಲಿಸಿದ ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಮುಮ್ಮಿನೇನಿ ಸುಧೀರ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠ, ವಿಜಯ್ ಮತ್ತವರ ಪಕ್ಷ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದು 6 ವಾರಗಳ ಬಳಿಕ ಮತ್ತೆ ವಿಚಾರಣೆ ನಡೆಯಲಿದೆ. ಮೇಲ್ಮನವಿ ಪುರಸ್ಕರಿಸಿದರೆ ಏಕಸದಸ್ಯ ಪೀಠ ವಾಣಿಜ್ಯ ಚಿಹ್ನೆಗೆ ಸಂಬಂಧಿಸಿದ ಮುಖ್ಯ ವ್ಯಾಜ್ಯದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡುವುದಕ್ಕೆ ಅಡ್ಡಿಯಾಗದು ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.ಇದನ್ನು ಓದಿ: ತಮಿಳುನಾಡಿನ ಕರೂರು ದುರಂತ: ಕಾಲ್ತುಳಿತಕ್ಕೆ, ಸಾವಿಗೆ ಕಾರಣ ಬಿಚ್ಚಿಟ್ಟ ವಿಪಕ್ಷ ನಾಯಕ R. ಅಶೋಕ: ವಿಜಯ್ ಅವರದ್ದು ತಪ್ಪಿದೆ
ಆಗಸ್ಟ್ 2024 ರಲ್ಲಿ ಅನಾವರಣಗೊಂಡ TVK ಧ್ವಜವು ನೋಡಲು ತಮ್ಮ ಟ್ರಸ್ಟ್ನ ನೋಂದಾಯಿತ ವಾಣಿಜ್ಯ ಚಿಹ್ನೆಯನ್ನು ಹೋಲುತ್ತದೆ. ಇದು ಕೇಂದ್ರ ವೃತ್ತಾಕಾರದ ವಿಶಿಷ್ಟ ಲಕ್ಷಣದೊಂದಿಗೆ ಕೆಂಪು-ಹಳದಿ-ಕೆಂಪು ತ್ರಿವರ್ಣವನ್ನು ಒಳಗೊಂಡಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನ ಸೆಳೆದಿದ್ದರು.
TVK ಮತ್ತು ನಟ/ರಾಜಕಾರಣಿ ವಿಜಯ್ ತಮ್ಮ ಧ್ವಜದ ಬಳಕೆ ಮಾಡುವುದರ ವಿರುದ್ಧ ಶಾಶ್ವತ ತಡೆಯಾಜ್ಞೆ ನೀಡಬೇಕು. ವಾಣಿಜ್ಯ ಚಿಹ್ನೆ ಮತ್ತು ಹಕ್ಕುಸ್ವಾಮ್ಯದ ಉಲ್ಲಂಘನೆ ಮಾಡಿರುವುದಕ್ಕಾಗಿ ₹5 ಲಕ್ಚ ರೂಪಾಯಿ ಹಾನಿ ಪರಿಹಾರ ನೀಡಬೇಕು. ಚಿಹ್ನೆಯನ್ನು ಉಲ್ಲಂಘಿಸುವ ಮೂಲಕ ಮಾಡಿಕೊಂಡಿರುವ ಲಾಭದ ವಿವರಗಳನ್ನು ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕು. ಚಿಹ್ನೆಯ ಉಲ್ಲಂಘನೆಯ ಮೂಲಕ ಮುದ್ರಿಸಲಾದ ಧ್ವಜಗಳು, ಇತರೆ ವಸ್ತುಗಳು ಮತ್ತು ಜಾಹೀರಾತುಗಳು ಸೇರಿದಂತೆ ಎಲ್ಲಾ ವಸ್ತುಗಳ ನಾಶಗೊಳಿಸಬೇಕು ಹಾಗೂ ನ್ಯಾಯಾಲಯದ ವೆಚ್ಚವನ್ನು ಪಕ್ಷ ಮತ್ತು ನಟ ಭರಿಸಬೇಕು ಎಂದು ಕೋರಲಾಗಿತ್ತು.