Skip to main content
ವಿಡಿಯೋ
1/2
technology

ಸ್ವದೇಶಿ ನಿರ್ಮಿತ Arattai - ನೂತನ ಮೆಸೇಜಿಂಗ್‌ ಆಪ್‌ ಬಗ್ಗೆ ಇಲ್ಲಿದೆ ಮಾಹಿತಿ

By Shravanthi R
ಸ್ವದೇಶಿ ನಿರ್ಮಿತ Arattai - ನೂತನ ಮೆಸೇಜಿಂಗ್‌ ಆಪ್‌ ಬಗ್ಗೆ ಇಲ್ಲಿದೆ ಮಾಹಿತಿ

ಭಾರತದ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆಯಾಗಿ, ಚೆನ್ನೈ ಮೂಲದ ಝೋಹೋ ಸಂಸ್ಥೆಯಿಂದ ಬಿಡುಗಡೆಯಾದ ʻಅರಟ್ಟೈʼ ಮೆಸೇಜಿಂಗ್‌ ಆಪ್‌ now serves as a secure, user-friendly alternative to WhatsApp ಎಂದಿದೆ. ತನ್ನದೇ ವೈಶಿಷ್ಟ್ಯಗಳನ್ನು ಹೊಂದಿರುವ ಈ ಆಪ್‌ ಮೇಡ್‌ ಇನ್ ಇಂಡಿಯಾ ನಿಟ್ಟಿನಲ್ಲಿ ಉತ್ತೇಜನ ಪಡೆದಿದೆ.

ಭಾರತವು ತನ್ನ ಸ್ವದೇಶಿ ತಂತ್ರಜ್ಞಾನವನ್ನು ಉತ್ತೇಜಿಸುವಲ್ಲಿ ಯಶಸ್ವಿ ಪ್ರಯತ್ನ ನಡೆಸಿದೆ. ಚೆನ್ನೈ ಮೂಲದ ಝೋಹೋ ಕಾರ್ಪೋರೇಷನ್‌ ನಿರ್ಮಿಸಿರುವ ಈ ಹೊಸ ಅಪ್ಲಿಕೇಶನ್‌, ಡಿಜಿಟಲ್‌ ಫ್ಲಾಟ್‌ಫಾರ್ಮ್‌ಗಳ ಮ‍ಧ್ಯೆ ಭರವಸೆ ಮೂಡಿಸಿದೆ. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಐಟಿ ಸಚಿವರಾದ ಅಶ್ವಿನಿ ವೈಷ್ಣವ್‌ ಅವರು ಇದಕ್ಕೆ ಸಾರ್ವಜನಿಕವಾಗಿ ಪ್ರೋತ್ಸಾಹವನ್ನು ಸೂಚಿಸಿದ್ದಾರೆ ಎನ್ನಲಾಗಿದೆ. 

ಅರಟ್ಟೈ ಎಂಬುದೊಂದು ವಾಟ್ಸ್ಯಾಪ್‌ ಪರ್ಯಾಯವಾಗಿ ಪರಿಕಲ್ಪಿಸಿರುವ ಮೆಸೆಜಿಂಗ್‌ ಆಪ್‌ಆಗಿದೆ. ಮೇಡ್‌ ಇನ್‌ ಇಂಡಿಯಾದ ಅಡಿಯಲ್ಲಿ ಇದಕ್ಕೆ ಅನುಮೋದನೆಯನ್ನು ನೀಡಲಾಗಿದೆ. ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಧರ್ಮೇಂದ್ರ ಪ್ರಧಾನ್‌ ಅವರು ಇದೊಂದು ಉಚಿತ, ಸುರಕ್ಷಿತ ಹಾಗೂ ಸುಲಭ ಇಂಟರ್ಫೇಸ್‌ಗೆ ಸಹಾಯಕಾರಿಯಾಗಿದೆ ಎನ್ನಲಾಗಿದೆ. ಝೋಹೋದ ಕಾರ್ಯಕ್ಷಮತೆಯನ್ನು ಪ್ರಶಂಸಿಸಿ, ಝೋಹೋದ ಪ್ರಮುಖ ವಿಜ್ಞಾನಿ ಶ್ರೀಧರ್‌ ವೆಂಬು, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಕೂಡ ಕಂಪನಿಯ ಸಾಮರ್ಥ್ಯದ ಕುರಿತಾಗಿ ಈ ಹಿಂದಿನ ಮೈಕ್ರೋಸಾಫ್ಟ್‌ ಪ್ರಾಜೆಟ್‌ ಉದಾಹರಣೆ ನೀಡಿದರು. Lenovo V15 G4 AMD Ryzen 5 7520U 15.6 inch FHD Laptop, AMD Graphics, 16GB DDR5 5500Mhz Ram, 512GB SSD NVMe, Windows 11, Dolby Audio, Arctic Grey, 1 Year Onsite Brand Warranty

ಅರಟ್ಟೈ ಎಂದರೇನು?

ತಮಿಳಿನಲ್ಲಿ ಹೀಗಂದರೆ ಕ್ಯಾಶುಯಲ್‌ ಟಾಕ್‌ ಎಂದರ್ಥ. ಈ ಅಪ್ಲಿಕೇಶನ್‌ ಯೂಸೇಜ್‌ ಬಗ್ಗೆ ಹೇಳುವುದಾದರೆ, ಇದರ ಬಳಕೆದಾರರಿಗೆ ಟೆಕ್ಸ್ಟ್‌ ಮೆಸೇಜ್‌ ಕಳುಹಿಸಲು, ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು, ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡಲು, ಪೋಸ್ಟ್ ಮಾಡಲು, ದಾಖಲೆಗಳನ್ನು ಕಳುಹಿಸಲು; ಒಟ್ಟಾರೆ, ವಾಟ್ಸಾಪ್‌ನಂತೆಯೇ ವ್ಯವಹಾರಗಳಿಗೆ ಅನುಕೂಲವಾಗುವಂತೆ ಇರಿಸಲಾಗಿದೆ. ಎಂಡ್‌-ಟು- ಎಂಡ್‌ ಎನ್‌ಕ್ರಿಪ್ಷನ್‌ ಹೊಂದಿದ್ದು, ಭದ್ರತೆ ಹಾಗೂ ತನ್ನದೇ ವೈಶಿಷ್ಟ್ಯಗಳನ್ನು ಹೊಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಸ್ಕೈವಾಕ್ ಕುಸಿತದಿಂದ ಸಂಚಾರ ಸ್ಥಗಿತ: ಬೆಂಗಳೂರು–ತಿರುಪತಿ ಹೆದ್ದಾರಿಯಲ್ಲಿ ಪರದಾಡಿದ ಪ್ರಯಾಣಿಕರು.!