Skip to main content
ವಿಡಿಯೋ
1/2
entertainment

ಸೆಲೆನಾ ಗೊಮೆಜ್ weds ಬೆನ್ನಿ ಬ್ಲಾಂಕೊ: ಹೊಸ ಜೀವನಕ್ಕೆ ಕಾಲಿಟ್ಟ ಪಾಪ್‌ ಸಂಗೀತಗಾರರು..

By Shravanthi R
ಸೆಲೆನಾ ಗೊಮೆಜ್ weds ಬೆನ್ನಿ ಬ್ಲಾಂಕೊ: ಹೊಸ ಜೀವನಕ್ಕೆ ಕಾಲಿಟ್ಟ ಪಾಪ್‌ ಸಂಗೀತಗಾರರು..

ಅಮೆರಿಕದ ಪಾಪ್ ಗಾಯಕಿ ಸೆಲೆನಾ ಗೊಮೆಜ್ ಅವರು ತಮ್ಮ ದೀರ್ಘಕಾಲದ ಗೆಳೆಯ ಹಾಗೂ ಸಂಗೀತ ನಿರ್ಮಾಪಕ ಬೆನ್ನಿ ಬ್ಲಾಂಕೊ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ವಿನೂತನ ಶೈಲಿಯ ಫೋಟೋ ಹಾಗೂ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಅಮೆರಿಕಾದ ಪ್ರಖ್ಯಾತ ಪಾಪ್ ಗಾಯಕಿ ಸೆಲೆನಾ ಗೊಮೆಜ್‌ ಅವರು ಬೆನ್ನಿ ಬ್ಲಾಂಕೊ ಅವರೊಟ್ಟಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ಯಾಲಿಫೋರ್ನಿಯಾದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಕೈ ಕೈ ಹಿಡಿದು ಒಟ್ಟಾಗಿ ನಡೆದಿದ್ದಾರೆ. ವಿವಾಹ ಸಮಾರಂಭದ ಫೋಟೋ ಮತ್ತು ವಿಡಿಯೋಗಳನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

2015 ರಲ್ಲಿ ಬಿಡುಗಡೆಯಾದ ʻರಿವೈವಲ್‌ʼ ಆಲ್ಬಂನಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಅದಾದ ಬಳಿಕ 2019 ರಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. 2023 ರ ʻಸಿಂಗಲ್ ಸೂನ್‌ʼ ಹಾಡು ಬಿಡುಗಡೆ ಸಂದರ್ಭದಲ್ಲಿ ಬೆನ್ನಿ ಜೊತೆಯಾಗಿದ್ದರು. ಕಳೆದ ವರ್ಷ ಈ ಜೋಡಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಈ ವರ್ಷ ಮಾರ್ಚ್ ನಲ್ಲಿ ʻಐ ಸೆಡ್‌ ಲವ್‌ ಯು ಫಸ್ಟ್ʼ ಎನ್ನುವ ಆಲ್ಬಮ್ ಅನ್ನು ಬಿಡುಗಡೆ ಮಾಡಿದ್ದರು. Lenovo Smartchoice Ideapad Slim 3 13Th Gen Intel Core I7-13620H 15.3 Inch(38.8Cm) WUXGA IPS Laptop(16GB RAM/512GB SSD/Windows 11/Office Home 2024/Backlit Keyboard/1Yr ADP Free/Grey/1.6Kg),83K100CJIN

ತಮ್ಮ ದೀರ್ಘಕಾಲದ ಗೆಳೆಯ ಬೆನ್ನಿ ಬ್ಲಾಂಕೊ ಅವರು ಹಾಡು ರೆಕಾರ್ಡಿಂಗ್‌ ನಿರ್ಮಾಪಕರಾಗಿದ್ದು, ಇವರೊಟ್ಟಿಗೆ ಸಾಂಟಾ ಬಾರ್ಬರಾದಲ್ಲಿ ರಾಜವೈಭದಂತಹ ವಿವಾಹದ ಬಳಿಕ ಪ್ರಣಯ ವಿಹಾರ ನಡೆಸಿದರು. ಅವರ ಅಭಿಮಾನಿಗಳು ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ. ಖ್ಯಾತ ಗಾಯಕ ಜಸ್ಟನ್‌ ಬೀಬರ್‌ ಅವರೊಟ್ಟಿಗೆ ಸೆಲೆನಾ ಅವರು ಲವ್‌ ಫೇಲ್ಯೂರ್‌ ಬಳಿಕ ಈ  ಸುದ್ದಿ ಪಾಪ್ ಲೋಕದಲ್ಲಿ ಹರಿದಾಡಿದೆ ಎನ್ನಲಾಗಿದೆ. ಆದರೆ, 2018 ರಲ್ಲಿ ಹೈಲಿ ಅವರೊಂದಿಗೆ ಜಸ್ಟಿನ್ ಮದುವೆಯಾದರು. ಇದನ್ನೂ ಓದಿ: ಸ್ವದೇಶಿ ನಿರ್ಮಿತ Arattai - ನೂತನ ಮೆಸೇಜಿಂಗ್‌ ಆಪ್‌ ಬಗ್ಗೆ ಇಲ್ಲಿದೆ ಮಾಹಿತಿ