Skip to main content
ವಿಡಿಯೋ
1/2
sports

2025 ಏಷ್ಯಾ ಕಪ್ ಫೈನಲ್‌: ಅಭಿಷೇಕ್ ಶರ್ಮಾ vs ಶಾಹೀನ್ ಶಾ ಅಫ್ರಿದಿ; ಇಬ್ಬರ ಪೈಪೋಟಿ ರೋಚಕವಾಗಿರುತ್ತದೆ: ಕೋಚ್ ಮಾರ್ಕೆಲ್‌

By Gireesh Vasishta
2025 ಏಷ್ಯಾ ಕಪ್ ಫೈನಲ್‌: ಅಭಿಷೇಕ್ ಶರ್ಮಾ vs ಶಾಹೀನ್ ಶಾ ಅಫ್ರಿದಿ; ಇಬ್ಬರ ಪೈಪೋಟಿ ರೋಚಕವಾಗಿರುತ್ತದೆ: ಕೋಚ್ ಮಾರ್ಕೆಲ್‌

ಈ ಟೂರ್ನಿಯಲ್ಲಿ ಭಾರತಕ್ಕಾಗಿ ಅಭಿಷೇಕ್ ಶರ್ಮಾ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ, 6 ಪಂದ್ಯಗಳಲ್ಲಿ 309 ರನ್‌ಗಳೊಂದಿಗೆ, ಸ್ಟ್ರೈಕ್ ರೇಟ್ 204.64 ರೊಂದಿಗೆ, ರನ್‌ಸ್ಕೋರರ್ ಚಾರ್ಟ್‌ನಲ್ಲಿ ಮುಂದಿದ್ದಾರೆ, ಪಾಕಿಸ್ತಾನಕ್ಕಾಗಿ ಅಫ್ರಿದಿ ಕೂಡ ಪ್ರಮುಖ ಆಟಗಾರನಾಗಿದ್ದು, ಟೂರ್ನಿಯಲ್ಲಿ 9 ವಿಕೆಟ್‌ಗಳನ್ನು ತೆಗೆದಿದ್ದಾರೆ. ಆದರೆ ಏಷ್ಯಾ ಕಪ್‌ನಲ್ಲಿ ಭಾರತ ವಿರುದ್ಧ ಇಲ್ಲಿವರಗೆ ಯಾವುದೇ ವಿಕೆಟ್ ತೆಗೆದಿಲ್ಲ.

ಭಾರತ ಮತ್ತು ಪಾಕಿಸ್ತಾನ ನಡುವಿನ 2025 ಏಷ್ಯಾ ಕಪ್ ಫೈನಲ್‌ ಬಗ್ಗೆ, ಭಾರತದ ಬೌಲಿಂಗ್ ಕೋಚ್ ಮೋರ್ನ್ ಮಾರ್ಕೆಲ್ ಅವರು ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಓಪನರ್ ಅಭಿಷೇಕ್ ಶರ್ಮಾ ಮತ್ತು ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ನಡುವಿನ ಆಟ ಬಲು ರೋಚಕವಾಗಿರುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡರು. ಈ ಎದುರಾಟವು "ಆಸನದ ಅಂಚಿನಲ್ಲಿ" ಕೂರಿಸುವ ಯುದ್ಧವಾಗಬಹುದು ಎಂದು ಮಾರ್ಕೆಲ್ ವಿವರಿಸಿದರು, ಎರಡು ಆಟಗಾರರೂ ಧೈರ್ಯಶಾಲಿಗಳು, ಎರಡು ತಂಡದಿಂದ ಉತ್ತಮ ಆಟವನ್ನು ನೀರಿಕ್ಷಿಸಬಹುದು ಎಂದು ವಿವರಿಸಿದರು.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+

ಪಾಕಿಸ್ತಾನ ತಂಡದ ಬೌಲಿಂಗ್ ಸಲಹೆಗಾರರಾಗಿ ಹಿಂದೆ ಅಫ್ರಿದಿಯೊಂದಿಗೆ ಕೆಲಸ ಮಾಡಿದ್ದ ಮಾರ್ಕೆಲ್ ಅವರು, ಅಫ್ರಿದಿ ಧೈರ್ಯಶಾಲಿ ಬೌಲರ್ ಆಗಿದ್ದು ಬ್ಯಾಟ್ಸ್‌ಮೆನ್‌ಗಳನ್ನು ತ್ವರಿತವಾಗಿ ಔಟ್‌ ಮಾಡಲು ಪ್ರಯತ್ನಪಡುತ್ತಾರೆ ಎಂದರು, ಆದರೆ ಅಭಿಷೇಕ್ ಶರ್ಮಾ ಸಹ ಅಷ್ಟೇ ಧೈರ್ಯಶಾಲಿ ಮತ್ತು ಹಿಂಜರಿಯುವುದಿಲ್ಲ, ಅವರ ಹಿಂದಿನ ಆಟದ ವೈಖರಿ ಫ್ಯಾನ್‌ಗಳಿಗೆ ರೋಚಕತೆಯನ್ನು ಉಂಟುಮಾಡಿವೆ ಎಂದರು. ವಿಶೇಷವಾಗಿ, ಏಷ್ಯಾ ಕಪ್‌ನಲ್ಲಿ ಅಭಿಷೇಕ್‌ ಶರ್ಮಾ ಅಫ್ರಿದಿಯ ಮೊದಲ ಎಸತವನ್ನು ನೇರವಾಗಿ ಬೌಂಡರಿ ಹೊಡೆದು ಮತ್ತು ಸಿಕ್ಸ್ ಹೊಡೆದು ಆರಂಭಿಸಿದ್ದರು ಎಂದರು.ಇದನ್ನು ಓದಿ: ಮನೆ-ಮನ ರಂಜಿಸಲು ಮತ್ತೆ ಬಂತು ಬಿಗ್‌ ಬಾಸ್‌ ಸೀಸನ್‌-12: ಹೊಸ ರೂಪ, ಅದೇ ಮನರಂಜನೆ: ಇಂದು ಗ್ರ್ಯಾಂಡ್‌ ಓಪನಿಂಗ್‌

ಈ ಟೂರ್ನಿಯಲ್ಲಿ ಭಾರತಕ್ಕಾಗಿ ಅಭಿಷೇಕ್ ಶರ್ಮಾ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ, 6 ಪಂದ್ಯಗಳಲ್ಲಿ 309 ರನ್‌ಗಳೊಂದಿಗೆ, ಸ್ಟ್ರೈಕ್ ರೇಟ್ 204.64 ರೊಂದಿಗೆ, ರನ್‌ಸ್ಕೋರರ್ ಚಾರ್ಟ್‌ನಲ್ಲಿ ಮುಂದಿದ್ದಾರೆ, ಪಾಕಿಸ್ತಾನಕ್ಕಾಗಿ ಅಫ್ರಿದಿ ಕೂಡ ಪ್ರಮುಖ ಆಟಗಾರನಾಗಿದ್ದು, ಟೂರ್ನಿಯಲ್ಲಿ 9 ವಿಕೆಟ್‌ಗಳನ್ನು ತೆಗೆದಿದ್ದಾರೆ. ಆದರೆ ಏಷ್ಯಾ ಕಪ್‌ನಲ್ಲಿ ಭಾರತ ವಿರುದ್ಧ ಇಲ್ಲಿವರಗೆ ಯಾವುದೇ ವಿಕೆಟ್ ತೆಗೆದಿಲ್ಲ, ಎರಡು ಪಂದ್ಯಗಳಲ್ಲಿ 5.5 ಓವರ್‌ಗಳಲ್ಲಿ 63 ರನ್‌ಗಳನ್ನು ಕೊಟ್ಟಿದ್ದಾರೆ. ಆದಾಗ್ಯೂ, ಬಾಂಗ್ಲಾದೇಶ ವಿರುದ್ಧದ ಅತ್ಯಗತ್ಯ ಗೆಲುವಿನ ಪಂದ್ಯದಲ್ಲಿ 3 ವಿಕೆಟ್ ತೆಗೆದುಕೊಂಡಿರುವುದು ಅವರ ಅಸಾಮಾನ್ಯ ಪ್ರದರ್ಶನವನ್ನು ತೋರುತ್ತದೆ ಎಂದರು.

ಈ ಹಿನ್ನೆಲೆಯಲ್ಲಿ ಕ್ರಿಕೆಟ್‌ ಫ್ಯಾನ್‌ಗಳು ಕಾಯುತ್ತಿದ್ದ ರೋಚಕ ಪಂದ್ಯವನ್ನು ಇಂದು ರಾತ್ರಿ ವೀಕ್ಷಿಸಬಹುದು. ಪಂದ್ಯ ಆರಂಭ: ಸಂಜೆ- 6.00 ಗಂಟೆ: ಲೈವ್‌ 8.00 ಗಂಟೆಯಿಂದ