Skip to main content
ವಿಡಿಯೋ
1/2
sports

ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ - ಶೀತಲ್‌ ದೇವಿ ಸಾಧನೆಗೆ ಶ್ಲಾಘನೆ - ತೊಮನ್‌ ಕುಮಾರ್‌ಗೂ ಬಂಗಾರದ ಪದಕ.!

By Shravanthi R
ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ - ಶೀತಲ್‌ ದೇವಿ ಸಾಧನೆಗೆ ಶ್ಲಾಘನೆ - ತೊಮನ್‌ ಕುಮಾರ್‌ಗೂ ಬಂಗಾರದ ಪದಕ.!

ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಎರಡು ಚಿನ್ನದ ಬೇಟೆ! ಅರ್ಜುನ ಪ್ರಶಸ್ತಿ ಪುರಸ್ಕೃತ ಶೀತಲ್ ದೇವಿ, ಮಹಿಳಾ ಆರ್ಚರಿ ವಿಭಾಗದಲ್ಲಿ ಚಿನ್ನ ಗೆದ್ದರು. ಪುರುಷರ ವಿಭಾಗದಲ್ಲಿ ತೊಮನ್ ಕುಮಾರ್‌ ಕೂಡ ಚಿನ್ನದ ಪದಕ ಗೆದ್ದಿದ್ದಾರೆ.

ದಕ್ಷಿಣ ಕೊರಿಯಾದ ಗ್ವಾಂಗ್‌ಜುದಲ್ಲಿ ಶನಿವಾರ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಹೆಮ್ಮೆ, ಅರ್ಜುನ ಪ್ರಶಸ್ತಿ ಪುರಸ್ಕೃತೆ, ಶೀತಲ್‌ ದೇವಿಗೆ ಚಿನ್ನದ ಪದಕ ಒಲಿದಿದೆ. ಕೈಗಳ ಸಹಾಯವಿಲ್ಲದೆ, ಚಿನ್ನದ ಪದಕ ಗೆದ್ದ ವಿಶ್ವದ ಮೊದಲ ಮಹಿಳಾ ಸ್ಪರ್ಧಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜೊತೆಗೆ ಸಹ ಆಟಗಾರ ತೊಮನ್‌ ಕುಮಾರ್‌ ಅವರಿಗೂ ವಿಶ್ವ ಪ್ಯಾರಾ ಆರ್ಚರಿ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಲಭಿಸಿದೆ. 

ಜಮ್ಮು ಮತ್ತು ಕಾಶ್ಮೀರಾದ ಶೀತಲ್‌ ದೇವಿಗೆ 18 ವರ್ಷ ವಯಸ್ಸಷ್ಟೇ.! ಆರ್ಚರಿ ಮಹಿಳಾ ಕಾಂಪೌಂಡ್‌ ವಿಭಾಗದ ಪಂದ್ಯದಲ್ಲಿ ಟರ್ಕಿಯ ಆಗ್ರ ಕ್ರಮಾಂಕದ ಸ್ಪರ್ಧಿ ಹಾಗೂ ವಿಶ್ವದ ನಂ.1 ಬಿಲ್ಲುಗಾರ್ತಿ ಓಝ್ನೂರ್ ಕ್ಯೂರ್ ಗಿರ್ಡಿ ಅವರನ್ನು 146-143 ಅಂಕಗಳ ಅಂತರದಿಂದ ಸೋಲಿಸಿ, ಈ ಪದಕವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಅವರು ಕೈಗಳ ಸಹಾಯವಿಲ್ಲದೇ ತಮ್ಮ ಗಲ್ಲ ಮತ್ತು ಕಾಲಿನಿಂದಲೇ ಬಾಣ ಪ್ರಯೋಗಿಸಿ ತಮ್ಮ ಹೆಸರನ್ನು ಮತ್ತೊಮ್ಮೆ ವಿಶ್ವ ವ್ಯಾಪಿಯಲ್ಲಿ ಪಸರಿಸಿದ್ದಾರೆ. Lenovo V15 Intel Core i3 13th Gen (16GB RAM/512GB SSD/Windows 11 Home/Office 2024/Iron Grey) 15.6" FHD (1920x1080) Antiglare 250 Nits Thin & Light Laptop/1Y Onsite/1.65 kg, 83CCA08KIN

ಈ ಹಿಂದೆ ಅಮೆರಿಕದ ಮ್ಯಾಟ್ ಸ್ಟುಟ್ಜ್‌ಮನ್‌ ಪುರುಷರ ವಿಭಾಗದಲ್ಲಿ, ದುಬೈ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕೈಗಳ ಸಹಾಯವಿಲ್ಲದೆ ಭಾಗವಹಿಸಿರುವ ದಾಖಲೆ ಮೆರೆದಿದ್ದರು. ಇದೀಗ ಶೀತಲ್‌ ಅವರು, ಏಕೈಕ ಮಹಿಳೆ ಎನಿಸಿಕೊಂಡು ಈ ಟೂರ್ನಿಯಲ್ಲಿ, ತಮ್ಮ ಗಲ್ಲದ ಹಾಗೂ ಕಾಲಿನ ನೆರವಿನಿಂದ ಬಾಣ ಪ್ರಯೋಗಿಸಿ ಈ ಸಾಧನೆಗೈದಿದ್ದಾರೆ. ಪುರುಷರ ವಿಭಾಗದಲ್ಲಿಯೂ ಪ್ರತಿಸ್ಪರ್ಧಿ ರಾಕೇಶ್‌ ಕುಮಾರ್‌ ಅವರನ್ನು 40-20 ಅಂತರದಿಂದ ತೊಮನ್‌ ಅವರು ಚಿನ್ನ ಪದಕ ಗೆದ್ದು ಸಂಭ್ರಮಿಸಿದರು. ಇದರ ಮುಖೇನ ಭಾರತಕ್ಕೆ ಚಿನ್ನ ಗೆದ್ದ ತಂದು ಇಬ್ಬರೂ ದಾಖಲೆ ನಿರ್ಮಿಸಿದ್ದಾರೆ.

ತೊಮನ್‌ ಅವರು ನಕ್ಸಲ್‌ ಐಇಡಿ ಸ್ಪೋಟದಲ್ಲಿ ತಮ್ಮ ಕಾಲು ಕಳೆದುಕೊಂಡಿದ್ದರು. 30 ವರ್ಷದ ಅವರು, ಇದುವರೆಗೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಬಿಲ್ಲುಗಾರಿಕೆ ಪಂದ್ಯಗಳಲ್ಲಿ ಏಳು ಪದಕಗಳನ್ನು ಗೆದ್ದುಕೊಂಡಿದ್ದಾರೆ ಎನ್ನಲಾಗಿದೆ. ಜೋಡಿ ಚಿನ್ನದ ಪದಕ ಖುಷಿಯಲ್ಲಿರುವ ಶೀತಲ್-ತೊಮನ್ ಈ ಹಿಂದೆ, ಮಿಶ್ರ ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದರು. ಬ್ರಿಟನ್‌ನ ಗ್ರಿನ್‌ಹ್ಯಾಮ್ ಹಾಗೂ ನಾಥನ್ ಮೆಕ್‌ಕ್ವೀನ್‌ರನ್ನು 152-149 ಅಂಕಗಳ ಅಂತರದಿಂದ ಮಣಿಸಿದ್ದರು. ಇದನ್ನೂ ಓದಿ: ಸೆಲೆನಾ ಗೊಮೆಜ್ weds ಬೆನ್ನಿ ಬ್ಲಾಂಕೊ: ಹೊಸ ಜೀವನಕ್ಕೆ ಕಾಲಿಟ್ಟ ಪಾಪ್‌ ಸಂಗೀತಗಾರರು..