Skip to main content
ವಿಡಿಯೋ
1/2
general

ಮುಂಬೈನಲ್ಲಿ ರಾತ್ರಿಯಿಡೀ ಧಾರಾಕಾರ ಮಳೆ, ಪ್ರವಾಹಭೀತಿ - ʻರೆಡ್ ಅಲರ್ಟ್ʼ ಘೋಷಣೆ!

By Shravanthi R
ಮುಂಬೈನಲ್ಲಿ ರಾತ್ರಿಯಿಡೀ ಧಾರಾಕಾರ ಮಳೆ, ಪ್ರವಾಹಭೀತಿ - ʻರೆಡ್ ಅಲರ್ಟ್ʼ ಘೋಷಣೆ!

ಮುಂಬೈ ಮಹಾನಗರದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಮಟ್ಟದ ಮಳೆಯಾಗಿದೆ. ದಕ್ಷಿಣ ಮುಂಬೈನ ಹಲವು ಭಾಗಗಳು ಜಲಾವೃತವಾಗಿದ್ದು, ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರತೀಯ ಹವಾಮಾನ ಇಲಾಖೆಯಿಂದ ‘ರೆಡ್ ಅಲರ್ಟ್’ ಘೋಷಿಸಿದ್ದು, ರಸ್ತೆಗಳು, ರೈಲು ಮಾರ್ಗಗಳು ಹಾಗೂ ಬಸ್‌ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ ಎನ್ನಲಾಗಿದೆ.

ಮುಂಬೈ: ಕಳೆದ 24 ಗಂಟೆಗಳಲ್ಲಿ ಮಹಾನಗರ ದಕ್ಷಿಣ ಮುಂಬೈನ ಕೆಲವು ಭಾಗಗಳಲ್ಲಿ ವಾಡಿಕೆಗೂ ಮಿಗಿಲಾಗಿ ಹೆಚ್ಚು ಮಳೆಯಾಗಿದೆ ಎಂದು ವರದಿಯಾಗಿದೆ. ರಾತ್ರಿಯಿಡೀ ಬಿರುಸಿನ ಮಳೆಯಾರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ. ಮಳೆಯಿಂದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ದೇಶದ ವಾಣಿಜ್ಯ ರಾಜಧಾನಿ ಮಳೆಗೆ ಪ್ರವಾಹ ಭೀತಿಯಿಂದ ತತ್ತರಿಸಿದೆ. ಭಾರಿ ಮಳೆಗೆ ʻರೆಡ್ ಅಲರ್ಟ್ʼ ಘೋಷಣೆಯಾಗಿದ್ದು ಭಾರತೀಯ ಅವಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ಭಾನುವಾರ ಬೆಳಗಿನ ಜಾವದ ವೇಳೆ ಮಳೆ ಕಡಿಮೆಯಾಗಿದೆ ಎನ್ನಲಾಗಿದೆ. ರಾತ್ರಿಯಿಡೀ ಧಾರಾಕಾರ ಮಳೆಯಾಗಿದ್ದು, 100 ಮೀ. ಮೀ ಗಿಂತ ಹೆಚ್ಚು ಮಳೆ ಆಗಿದೆ ಎಂದು ತಿಳಿಸಿದೆ. ಅಧಿಕ ಮಳೆಯ ಪ್ರಭಾವ, ಅಲ್ಲಿರುವ ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆಯ ಸ್ಥಳೀಯ ರೈಲು ಸೇವೆಗಳು ವಿಳಂಬಗೊಂಡಿದ್ದು, ವಿದ್ಯುತ್ ಸರಬರಾಜು ಸೇರಿದಂತೆ ಸಾರಿಗೆ ಸಂಸ್ಥೆ ಬಸ್ ಗಳ ಸೇವೆಯಲ್ಲಿಯೂ ವ್ಯತ್ಯಾಸ ಉಂಟಾಗಿದೆ. ರಸ್ತೆಗಳಲ್ಲಿ ನಿಂತ ನೀರಿನ ಪರಿಣಾಮ ಸಂಚಾರ ಸೇವೆಯಲ್ಲಿ ವ್ಯತ್ಯಯವಾಗಿದೆ. ಶನಿವಾರದಂದೇ ಮುಂದುವರೆದು, ಅತಿ ಹೆಚ್ಚಿನ ಮಳೆ ಮುನ್ಸೂಚನೆ ನೀಡಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  Lenovo IdeaPad Slim 3, Intel Core i3 13th Gen 1315U, 8GB RAM, 512GB SSD, FHD 15.6"(39.6cm), Windows 11, Office 2024, Grey, 1.6Kg, 82X700G5IN, Alexa Built-in, 1Yr ADP Free, 3 Month Game Pass Laptop

ಇಂದು ಮೋಡಕವಿದ ವಾತಾವರಣದೊಂದಿಗೆ ಆಕಾಶದಲ್ಲಿ ಭಾರಿ ಮಳೆ ಆಗುವ ಗುಣಲಕ್ಷಣಗಳು ಕಂಡುಬಂದಿದೆ ಎನ್ನಲಾಗಿದೆ. ಮಧ್ಯರಾತ್ರಿ ಬೆಂಬಿಡದೆ ಸುರಿದ ದಾಖಲೆಯ ಮಳೆಗೆ ನಗರ ತೀವ್ರ ಮುಳುಗಿ ಹೋದಂತೆ ಕಂಡಿದೆ. ತೀವ್ರ ಮಳೆಯಿಂದ ನಗರದ ಪ್ರಮುಖ ಪ್ರದೇಶಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಇದನ್ನೂ ಓದಿ: ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ - ಶೀತಲ್‌ ದೇವಿ ಸಾಧನೆಗೆ ಶ್ಲಾಘನೆ - ತೊಮನ್‌ ಕುಮಾರ್‌ಗೂ ಬಂಗಾರದ ಪದಕ.!