Skip to main content
ವಿಡಿಯೋ
1/3
general

ಮೈಸೂರು ದಸರಾ ಉದ್ಘಾಟನೆ: ಬಾನು ಮುಷ್ತಾಕ್‌ರಿಂದ ಟೀಕಾಕಾರರಿಗೆ ಪ್ರೀತಿಯ ಉತ್ತರ

By Vinutha U
ಮೈಸೂರು ದಸರಾ ಉದ್ಘಾಟನೆ: ಬಾನು ಮುಷ್ತಾಕ್‌ರಿಂದ ಟೀಕಾಕಾರರಿಗೆ ಪ್ರೀತಿಯ ಉತ್ತರ

ತಮ್ಮ ಉದ್ಘಾಟನಾ ಭಾಷಣದಲ್ಲಿ ವಿರೋಧಿಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಅವರು, ಇದೀಗ ತಮ್ಮ ವಿರುದ್ಧದ ಟೀಕೆಗಳಿಗೆ ಧನ್ಯವಾದ ಸಂದೇಶವನ್ನು ರವಾನಿಸಿದ್ದಾರೆ. “ದ್ವೇಷಕ್ಕೆ ಪ್ರೀತಿಯೇ ಉತ್ತರ” ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 28, 2025: ಬಾರಿಯ ಮೈಸೂರು ದಸರಾವನ್ನು ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಲೇಖಕಿ ಬಾನು ಮುಷ್ತಾಕ್ ಉದ್ಘಾಟಿಸಿದ್ದಾರೆ. ಆದರೆ, ಆಯ್ಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೆಲವರು ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗೆ ಮೊರೆ ಹೋಗಿದ್ದರು. ಆದರೂ, ಟೀಕೆಗಳ ಮಧ್ಯೆಯೇ ಬಾನು ಮುಷ್ತಾಕ್ ಸಂಪ್ರದಾಯಬದ್ಧವಾಗಿ ದಸರಾ ಉದ್ಘಾಟಿಸಿ, ಹಿಂದೂ ಸಂಪ್ರದಾಯದಂತೆ ಹೂವು ಮುಡಿದು, ಚಾಮುಂಡೇಶ್ವರಿ ಆರತಿಯನ್ನು ಸ್ವೀಕರಿಸುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ವಿರೋಧಿಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಅವರು, ಇದೀಗ ತಮ್ಮ ವಿರುದ್ಧದ ಟೀಕೆಗಳಿಗೆ ಧನ್ಯವಾದ ಸಂದೇಶವನ್ನು ರವಾನಿಸಿದ್ದಾರೆ. “ದ್ವೇಷಕ್ಕೆ ಪ್ರೀತಿಯೇ ಉತ್ತರಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಮುಂಬೈನಲ್ಲಿ ರಾತ್ರಿಯಿಡೀ ಧಾರಾಕಾರ ಮಳೆ, ಪ್ರವಾಹಭೀತಿ - ʻರೆಡ್ ಅಲರ್ಟ್ʼ ಘೋಷಣೆ!

ಬಾನು ಮುಷ್ತಾಕ್ ಧನ್ಯವಾದ ಸಂದೇಶ: ಪ್ರೀತಿಯ ಉರಿಯಮ್ಮ/ಉರಿಯಪ್ಪನವರೇ,
ನಿಮ್ಮ ಮಾತುಗಳ ಬಿರುಗಾಳಿಯನ್ನು ನಾನು ಓದುತ್ತಿದ್ದೇನೆ. ನೀವು ಬರೆದ ಪದಗಳಲ್ಲಿ ನೋವು, ಅಸಹನೆ, ಕೆಲವೊಮ್ಮೆ ಕೋಪವೂ ಇದೆ. ಆದರೆ, ಎಲ್ಲವನ್ನೂ ಎದುರಿಸಲು ನನಗೆ ಯಾವುದೇ ರಕ್ಷಣೆಯ ಅ ಗತ್ಯವಿಲ್ಲ. ಏಕೆಂದರೆ, ನಾನು ಬರವಣಿಗೆಯ ಹಾದಿಯಲ್ಲಿ ಕಾಲಿಟ್ಟ ದಿನದಿಂದಲೂ ತಿಳಿದಿದ್ದೇನೆಪದಗಳು ಪ್ರೀತಿಯನ್ನೂ ಹುಟ್ಟಿಸುತ್ತವೆ, ದ್ವೇಷವನ್ನೂ ಹುಟ್ಟಿಸುತ್ತವೆ. ಎರಡೂ ನನ್ನ ಬರಹಗಾರ್ತಿಯ ಜೀವನದ ಭಾಗವೇ.

ಬುಕ್ಕರ್ ಪ್ರಶಸ್ತಿ ನನಗೆ ವೈಯಕ್ತಿಕ ಜಯವಲ್ಲ; ಅದು ಕನ್ನಡ ಭಾಷೆಯ ಮಣ್ಣಿನ ಧ್ವನಿಗೆ ಸಿಕ್ಕ ಗೌರವ, ನನ್ನ ಜೀವನದ ಅನುಭವಗಳ ಸಾರ. ನಿಮ್ಮ ಅಸಹನೆಯನ್ನು ನಾನು ತಿರಸ್ಕರಿಸುವುದಿಲ್ಲ; ಅದನ್ನು ಮತ್ತೊಂದು ಧ್ವನಿಯಾಗಿ, ಮತ್ತೊಂದು ಪ್ರಶ್ನೆಯಾಗಿ ಸ್ವೀಕರಿಸುತ್ತೇನೆ. ಸಾಹಿತ್ಯದ ಶಕ್ತಿಯೇ ಅದುಒಪ್ಪಿಗೆಯನ್ನೂ, ವಿರೋಧವನ್ನೂ ಹುಟ್ಟಿಸುತ್ತದೆ. ಆದರೆ, ಕೊನೆಯಲ್ಲಿ ಅದು ಚಿಂತನೆಗೆ ದಾರಿ ತೆರೆಯುತ್ತದೆ. ನೀವು ನನ್ನ ಬಗ್ಗೆ ಕಟುವಾಗಿ ಬರೆದಾಗ, ನಾನು ಯೋಚಿಸುವುದು ಹೀಗೆ: “ನನ್ನ ಪದಗಳು ನಿಮಗೆ ತಲುಪಿವೆ. ನೀವು ಅವುಗಳನ್ನು ನಿರ್ಲಕ್ಷಿಸಿಲ್ಲ. ಅವು ನಿಮ್ಮನ್ನು ಏನೋ ಒಂದು ರೀತಿಯಲ್ಲಿ ತಟ್ಟಿವೆ.” ಇದು ನನಗೆ ಸಾಕು, ದ್ವೇಷಕ್ಕೆ ಪ್ರೀತಿಯೇ ಉತ್ತರ ದ್ವೇಷಕ್ಕೆ ಪ್ರೀತಿಯೇ ಉತ್ತರ, ಅಸಹನೆಗೆ ಸಂವಾದವೇ ಉತ್ತರ, ನಿಂದನೆಗೆ ಮೌನದಲ್ಲಿ ಹೊಳೆಯುವ ಸತ್ಯವೇ ಉತ್ತರ. ನಿಮ್ಮ ಪ್ರತಿಯೊಂದು ಕಮೆಂಟ್ಗೂ ನಾನು ಧನ್ಯವಾದ ಹೇಳುತ್ತೇನೆ, ಏಕೆಂದರೆ ಅವು ನನ್ನ ಹೆಜ್ಜೆಗಳನ್ನು ಮತ್ತಷ್ಟು ಬಲಪಡಿಸುತ್ತವೆ. ನೀವು ನನ್ನನ್ನು ತಡೆಯಲು ಸಾಧ್ಯವಿಲ್ಲ, ಏಕೆಂದರೆ ನಾನು ಕೇವಲ ಬಾನು ಎಂಬ ವ್ಯಕ್ತಿಯಲ್ಲ; ನಾನು ಕೋಟ್ಯಾಂತರ ಕನ್ನಡಿಗರ ಹೃದಯಗಳ ಪ್ರತಿಧ್ವನಿ. ನಿಮ್ಮ ವೈಯಕ್ತಿಕ ಹಿತಾಸಕ್ತಿಗಳಿಂದ ನೀವು ಇದರಲ್ಲಿ ಸೇರ್ಪಡೆಯಾಗದಿದ್ದರೆ, ನನಗೆ ಬೇಸರವಿಲ್ಲ. Guess Dare Floral Fruity Liquid Eau De Toilette - 100 Ml (For Women)

ನಿಮ್ಮ ಪದಗಳ ಬಾಣಗಳು ಕೆಲವೊಮ್ಮೆ ಕೆಂಪಾಗಿ ಉರಿಯುತ್ತವೆ, ಕೆಲವೊಮ್ಮೆ ಕಲ್ಲಿನಂತೆ ಹೃದಯಕ್ಕೆ ತಾಗುತ್ತವೆ. ಆದರೆ, ನಾನು ಹೆದರಲ್ಲ, ಕುಗ್ಗಲ್ಲ. ಏಕೆಂದರೆ, ಬರವಣಿಗೆಯ ದಾರಿಯಲ್ಲಿ ಪ್ರೀತಿಯಷ್ಟೇ ದ್ವೇಷವೂ ಹೂವಾಗಿ ಅರಳುತ್ತದೆ. ಬುಕ್ಕರ್ ಪ್ರಶಸ್ತಿ ನನ್ನ ವೈಯಕ್ತಿಕ ಸ್ವಾರ್ಥವಲ್ಲ; ಅದು ಕನ್ನಡದ ಮಣ್ಣಿನ ಮೆಲುಕು, ನನ್ನ ಜನರ ನೋವು, ಕನಸು, ಹೋರಾಟದ ಸಾರ.

ನಾನು ಕನ್ನಡಿಗರ ಕನಸಿನ ಪ್ರತಿಧ್ವನಿ
ನೀವು ಕೋಪದಿಂದ ಬರೆದಾಗ, ನಾನು ಅದನ್ನು ಅಪಮಾನವೆಂದು ತೆಗೆದುಕೊಳ್ಳುವುದಿಲ್ಲ. ಅದರೊಳಗೆ ಒಂದು ತವಕ, ಒಂದು ಪ್ರಶ್ನೆ ಇದೆ; ಅದು ಸಾಹಿತ್ಯದ ಭಾಗವೇ. ನಿಮ್ಮ ಕಟುವಾದ ಪದಗಳಿಗೆ ನಾನು ಕೃತಜ್ಞಳಾಗಿದ್ದೇನೆ, ಏಕೆಂದರೆ ಅವು ನನ್ನ ಹೆಜ್ಜೆಗಳನ್ನು ಗಟ್ಟಿಗೊಳಿಸುತ್ತವೆ, ನನ್ನ ಹಾದಿಯನ್ನು ತೆರೆಯುತ್ತವೆ. ನಾನು ಕೇವಲ ಬಾನು ಅಲ್ಲ; ನಾನು ಕನ್ನಡಿಗರ ಕನಸು, ಅವರ ಶಬ್ದದ ಪ್ರತಿಧ್ವನಿ, ಅವರ ಬದುಕಿನ ಬಿಂಬ. ನಿಮ್ಮ ಅಸಹನೆಯ ಬೆಂಕಿ ನನ್ನ ಹೃದಯದಲ್ಲಿ ಬೆಳಕಾಗಲಿಅದೇ ನಮ್ಮ ನಡುವಿನ ನಂಟು. ನಿಮ್ಮ ಮಾತುಗಳಲ್ಲಿರುವ ಕೋಪ, ಅಸಹನೆ, ನೋವನ್ನು ನಾನು ತಪ್ಪಿಸಿಕೊಳ್ಳುವುದಿಲ್ಲ. ನಾನು ಅವುಗಳನ್ನು ಓದುತ್ತೇನೆ, ಮನಸ್ಸಿಗೆ ಒಗ್ಗಿಸಿಕೊಳ್ಳುತ್ತೇನೆ. ಬರವಣಿಗೆಯ ದಾರಿಯಲ್ಲಿ ಗುಲಾಬಿಯೂ ಅರಳುತ್ತದೆ, ಮುಳ್ಳೂ ಬೆಳೆಯುತ್ತದೆ. ಬುಕ್ಕರ್ ಪ್ರಶಸ್ತಿ ನನ್ನ ವೈಯಕ್ತಿಕ ಜಯವಲ್ಲ; ಅದು ಕನ್ನಡ ಭಾಷೆಯ ಶಕ್ತಿ. ನಿಮ್ಮ ಕೋಪದ ಹಿಂದೆ ಒಂದು ಪ್ರಶ್ನೆ ಇದೆ ಎಂದು ನಾನು ನೋಡುತ್ತೇನೆ. ಪ್ರಶ್ನೆಗೆ ನನ್ನ ಉತ್ತರಪ್ರೀತಿ, ಸಂವಾದ, ಸತ್ಯ.