ಬಾಂಬೆ ಹೈಕೋರ್ಟ್ ನಾಗಪುರ ಪೀಠದ ವಕೀಲರ ಸಂಘ ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯೂರ್ತಿ ಎ ಎಸ್ ಚಂದೂರ್ಕರ್ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಮಾಜಿಕ ಮಾಧ್ಯಮ ಹಾಗೂ ಹೆಚ್ಚ ಮಾತನಾಡಬೇಕಾದ ಅವಶ್ಯಕತೆಯಿಂದಾಗಿ ನ್ಯಾಯಾಧೀಶರು ಮಾತಿನ ಬಗೆಗಿನ ಸಂಯಮದಿಂದ ದೂರ ಸರಿದಂತೆ ಕಾಣುತ್ತಿದೆ. ಪ್ರತಿಯೊಂದು ಪದವೂ ಸುದ್ದಿಯಾಗುತ್ತಿದ್ದು ಇದು ಹಾಲಿ ನ್ಯಾಯಮೂರ್ತಿಗಳನ್ನು ಆಕರ್ಷಿಸಬಹುದು.
ಇನ್ನೂ ಕೆಟ್ಟ ಸಂಗತಿ ಎಂದರೆ ನಿವೃತ್ತ ನ್ಯಾಯಮೂರ್ತಿಗಳೂ ಕೂಡ ಮಾತನಾಡುವುದೇ ಪೂರ್ಣಾವಧಿಯ ಕೆಲಸ ಎಂಬಂತೆ ತಮಗೆ ಮಾತನಾಡಲು ಸಮಯ ಬಂದಿದೆ ಎಂದು ಭಾವಿಸುತ್ತಾರೆ. ನನ್ನ ಅಭಿಪ್ರಾಯದಲ್ಲಿ, ಅದು ನಮ್ಮ ವ್ಯವಸ್ಥೆ ಕಾರ್ಯನಿರ್ವಹಿಸುವ ಸರಿಯಾದ ಮಾರ್ಗವಲ್ಲ ಎಂದು ಅವರು ವಿವರಿಸಿದರು. Guess Dare Floral Fruity Liquid Eau De Toilette - 100 Ml (For Women)
ಮಾತನಾಡಬೇಕಿರುವುದು ನ್ಯಾಯಾಧೀಶರಲ್ಲ ಬದಲಿಗೆ ತೀರ್ಪುಗಳು ಎಂದು ನುಡಿದ ನ್ಯಾ. ನರಸಿಂಹ ಅವರು ತಾವು ಮಾತನಾಡದೆ ತಮ್ಮ ತೀರ್ಪುಗಳು ಮಾತನಾಡುವಂತೆ ಮಾಡುವ ನ್ಯಾಯಮೂರ್ತಿಯಾಗಿದ್ದಾರೆ ಎ ಎಸ್ ಚಂದೂರ್ಕರ್ ಎಂದು ಶ್ಲಾಘಿಸಿದರು.
ನ್ಯಾಯವಿತರಣೆ ವ್ಯವಸ್ಥೆಯಲ್ಲಿ ನ್ಯಾಯಾಧೀಶರು ನೇಪಥ್ಯದಲ್ಲಿ ಇರುವುದು ಅಗತ್ಯ ಎಂದು ನಂಬುತ್ತೇನೆ. ಮೈಸೂರು ದಸರಾ ಉದ್ಘಾಟನೆ: ಬಾನು ಮುಷ್ತಾಕ್‌ರಿಂದ ಟೀಕಾಕಾರರಿಗೆ ಪ್ರೀತಿಯ ಉತ್ತರ
ನ್ಯಾಯಧೀಶರು ಕಾಣಿಸಿಕೊಳ್ಳಬಾರದು. ತೀರ್ಪು ನೀಡುವುದನ್ನು ಹೊರತುಪಡಿಸಿ ಈ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರು ಕಾಣಿಸಿಕೊಳ್ಳುಯವ ಅಗತ್ಯವಿಲ್ಲ, ನ್ಯಾಯಾಧೀಶ, ಆತನ ವ್ಯಕ್ತಿತ್ವ ಎಲ್ಲವೂ ಅನಗತ್ಯ. ನ್ಯಾಯಾಧೀಶರು ತೀರ್ಪು ನೀಡುವುದಕ್ಕಿಂತ ಹೆಚ್ಚಿನದೇನನ್ನೂ ಮಾಡದೆ ನೇಪಥ್ಯದಲ್ಲಿರಬೇಕು ಎಂದರು.