Skip to main content
ವಿಡಿಯೋ
1/2
general

ಬಾಕ್ಸರ್ ಮೇರಿ ಕೋಮ್‌ ನಿವಾಸದಲ್ಲಿ ಕಳ್ಳತನ: ಲಕ್ಷಾಂತರ ರೂಪಾಯಿಯ ವಸ್ತುಗಳನ್ನು ದೋಚಿದ ಮಾಡಿದ ಖದೀಮರು

By Vinutha U
ಬಾಕ್ಸರ್ ಮೇರಿ ಕೋಮ್‌ ನಿವಾಸದಲ್ಲಿ ಕಳ್ಳತನ: ಲಕ್ಷಾಂತರ ರೂಪಾಯಿಯ ವಸ್ತುಗಳನ್ನು ದೋಚಿದ ಮಾಡಿದ ಖದೀಮರು

ಶಂಕಿತರು ಸ್ಕೂಟರ್ನಲ್ಲಿ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

ಫರೀದಾಬಾದ್: 6 ಬಾರಿ ವಿಶ್ವ ಚಾಂಪಿಯನ್ ಮತ್ತು 1 ಬಾರಿ ಒಲಂಪಿಕ್ ಪದಕ ವಿಜೇತೆಯಾದ ಭಾರತದ ಖ್ಯಾತ ಬಾಕ್ಸಿಂಗ್ ತಾರೆ ಮೇರಿ ಕೋಮ್ ಅವರ ಮೇಘಾಲಯದ ಸೊಹ್ರಾದಲ್ಲಿ ಆಯೋಜನೆಗೊಂಡಿದ್ದ ಅಂತರಾಷ್ಟ್ರೀಯ ಅರೆ ಮ್ಯಾರಥ್ಯಾನ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗ ಫರೀದಾಬಾದ್ನ ಸೆಕ್ಟರ್ . 46 ರಲ್ಲಿರುವ ಅವರ ನಿವಾಸಕ್ಕೆ ಕಳ್ಳರು ಕನ್ನ ಹಾಕಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಎರಡು ಅಂತಸ್ತಿನ ಮೇಲೆ ಮೇರಿ ಕೋಮ್ ಅವರ ಬಂಗಲೇಗೆ ಸೆಪ್ಟೆಂಬರ್ 24 ರ ಮಧ್ಯರಾತ್ರಿ ದುಷ್ಕರ್ಮಿಗಳು ಒಳನುಸುಳಿ, ಬಂಗಲೆಗೆ ಹೊಂದಿಕೊಂಡಿರುವ ಪಕ್ಕದಲ್ಲಿನ ಖಾಲಿ ನಿವೇಶನದ ಮೂಲಕ ಟೆರೆಸ್ ಮೇಲಿನ ಗಾಜಿನ ಕಿಟಕಿಯನ್ನು ಒಡೆದು ಮನೆ ಒಳಗೆ ನುಗ್ಗಿದ್ದಾರೆ ನಂತರ ಮೇರಿ ಕೊಂ ಅವರಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿದ್ದಾರೆ ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಮಿಳುನಾಡು: ಕಾಲ್ತುಳಿತದ ಬಗ್ಗೆ ಸ್ವತಂತ್ರ ತನಿಖೆ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ವಿಜಯ್ ನೇತೃತ್ವದ TVK ಪಕ್ಷ

ಮನೆಯ ಬಳಿ ಏಣಿ ಇಟ್ಟಿರುವುದು ಸೇರಿದಂತೆ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ ಅಕ್ಕ ಪಕ್ಕದ ಮನೆಯವರು ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮ್ಯಾನೇಜರ್ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಸೆಪ್ಟೆಂಬರ್ 27 ರಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಾಗ ಈ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ.Guess Dare Floral Fruity Liquid Eau De Toilette - 100 Ml (For Women)

ಬಂಗಲೆಗೆ ಬೀಗ ಹಾಕಿದ್ದರೂ ದುಷ್ಕರ್ಮಿಗಳು ಕಟಕಿಯನ್ನು ಧ್ವಂಸಗೊಳಿಸಿ, ಮೊದಲ ಮಹಡಿಯ ಬಾಲ್ಕನಿಯಲ್ಲಿನ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಂಕಿತರು ಸ್ಕೂಟರ್ನಲ್ಲಿ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.