Skip to main content
ವಿಡಿಯೋ
1/2
entertainment

ಗಾನಕೋಗಿಲೆ ಸ್ಮರಣಾರ್ಥವಾಗಿ ‘ರಾಷ್ಟ್ರೀಯ ಲತಾ ಮಂಗೇಶ್ಕರ್’ ಪ್ರಶಸ್ತಿ - ಸೋನು ನಿಗಮ್‌ ಭಾಜನ

By Shravanthi R
ಗಾನಕೋಗಿಲೆ ಸ್ಮರಣಾರ್ಥವಾಗಿ ‘ರಾಷ್ಟ್ರೀಯ ಲತಾ ಮಂಗೇಶ್ಕರ್’ ಪ್ರಶಸ್ತಿ - ಸೋನು ನಿಗಮ್‌ ಭಾಜನ

ಭಾರತದ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು `ರಾಷ್ಟ್ರೀಯ ಲತಾ ಮಂಗೇಶ್ಕರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆಪ್ಟೆಂಬರ್ 28 ರಂದು ಇಂದೋರ್‌ನಲ್ಲಿ ನಡೆದ ಲತಾ ಮಂಗೇಶ್ಕರ್ ಅವರ 96 ನೇ ಜನ್ಮದಿನ ಸ್ಮರಣಾರ್ಥದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ʻರಾಷ್ಟ್ರೀಯ ಲತಾ ಮಂಗೇಶ್ಕರ್‌ʼ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆ. 28 ಭಾನುವಾರ ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಅವರ 96 ನೇ ಜನ್ಮ ದಿನ ಸ್ಮರಣಾರ್ಥವಾಗಿ ಇಂದೋರ್‌ನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಅವರು ಈ ಗೌರವವನ್ನು ಸ್ವೀಕರಿಸಿದರು. ಲಘು ಸಂಗೀತ ಕ್ಷೇತ್ರದಲ್ಲಿ ಅವರ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 

1929 ರ ಸೆಪ್ಟೆಂಬರ್ 28 ಇಂದೋರ್ ನಲ್ಲಿ ಜನಿಸಿದ ಲತಾ ಮಂಗೇಶ್ಕರ್ ಅವರು, 2022 ರ ಫೆಬ್ರವರಿ 6 ರಂದು ಮುಂಬೈನಲ್ಲಿ ನಿಧನರಾದರು. ಅವರ ನೆನೆಪಿನಲ್ಲಿ ಇಂದೋರ್‌ನಲ್ಲಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗಾಯಕ ಸೋನು ನಿಗಮ್ ಅವರಿಗೆ ʻರಾಷ್ಟ್ರೀಯ ಲತಾ ಮಂಗೇಶ್ಕರ್ʼ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 96 ನೇ ಜನ್ಮದಿನದ ಪ್ರಯುಕ್ತ ಇಂದೋರ್‌ನಲ್ಲಿ ನಡೆದ ಸಮಾರಂಭದಲ್ಲಿ ಮದ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಂದ ಸೋನು ನಿಗಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಭಾರತ ಕಂಡ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರಿನಲ್ಲಿ ನೀಡಲಾಗುವ ವಿಶಿಷ್ಟ ಪ್ರಶಸ್ತಿ ಇದಾಗಿದೆ. ಸಂಗೀತ ಕ್ಷೇತ್ರದಲ್ಲಿ ಅವರು ನೀಡಿದ ಅಗಣಿತ ಸಾಧನೆಯನ್ನು; ಸುಮಧುರ ಗಾನ ಸುಧೆ ನೆನೆದು ಕಲಾವಿದರ ಅತ್ಯುತ್ತಮ ಪ್ರದರ್ಶನಗಳಿಗೆ ಸಂದುವ ಗೌರವ ಇದು ಎಂದು ಮುಖ್ಯಮಂತ್ರಿ ತಿಳಿಸಿದರು. HP 15,Intel Ultra 5 125H (16GB DDR5, 1TB SSD) FHD, IPS, 15.6''/39.6cm, Win11, M365 Basic(1yr)*Office24, Silver, 1.65kg, fd1354TU, Intel Arc Graphics, FHD Camera w/Shutter, AI Powered Laptop

ಮೂರು ದಶಕಗಳ ಕಾಲ ಲತಾಮಂಗೇಶ್ಕರ್ ಅಲಂಕಾರ್‌ ಸಮಾರಂಭದಲ್ಲಿ ಪ್ರದರ್ಶನ ನೀಡಿದ್ದೆ. ಇಂದು ಇದೇ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ತುಂಬಾ ಖುಷಿಯಾಗುತ್ತಿದೆ. ಲತಾ ಅವರು ಸ್ಪೂರ್ತಿ ಮಾತ್ರವಲ್ಲ, ಜೀವಂತ ಸಂಗೀತದ ಶಕ್ತಿಯೂ ಹೌದು. ಈ ಗೌರವವನ್ನು ಸ್ವೀಕರಿಸಲು ನಾನು ಧನ್ಯನಾಗಿದ್ದೇನೆ. ನನ್ನ ಜೀವನದ ಅತ್ಯಂತ ವಿಶೇಷಕ್ಷಣಗಳಲ್ಲಿ ಇದು ಒಂದಾಗಿದೆ ಎಂದು ಸೋನು ನಿಗಮ್ ಭಾವಕರಾದರು.

1984 ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ಲಘು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಗೌರವ ಸೂಚಕ ಪ್ರಶಸ್ತಿ, ರಾಷ್ಟ್ರೀಯ ಲತಾ ಮಂಗೇಶ್ಕರ್ ಪ್ರಶಸ್ತಿ. ಅಲ್ಲಿನ ರಾಜ್ಯ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ನೀಡಲಾಗುವುದು. ಸುಪ್ರಸಿದ್ದ ಗಾಯಕರಾದ ಕಿಶೋರ್ ಕುಮಾರ್, ಆಶಾ ಬೋಸ್ಲೆ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇದನ್ನೂ ಓದಿ: ಮುಂಬೈನಲ್ಲಿ ರಾತ್ರಿಯಿಡೀ ಧಾರಾಕಾರ ಮಳೆ, ಪ್ರವಾಹಭೀತಿ - ʻರೆಡ್ ಅಲರ್ಟ್ʼ ಘೋಷಣೆ!