'ಬಿಗ್ ಬಾಸ್ ಕನ್ನಡ ಸೀಸನ್ 12' ರ ಕುರಿತಾದ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿದ್ದವು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಸೆಪ್ಟೆಂಬರ್ 29 ರಂದು ಒಟ್ಟು 19 ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
ರಿಯಾಲಿಟಿ ಶೋ ಆರಂಭಕ್ಕೂ ಮುನ್ನವೇ ಸಾಮಾಜಿಕ ಮಾಧ್ಯಮಗಳಲ್ಲಿ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೊಂದು ಹರಿದಾಡಿತ್ತು. ಆದರೆ, ಅಧಿಕೃತವಾಗಿ ಮನೆ ಪ್ರವೇಶಿಸಿದವರ ಪಟ್ಟಿಗೂ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಗಿದ್ದ ಪಟ್ಟಿಗೂ ಕೊಂಚ ವ್ಯತ್ಯಾಸವಿದೆ.
ಶ್ವೇತಾ ಪ್ರಸಾದ್ ಅವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಚರ್ಚೆಯಾಗಿತ್ತು. ಆದರೆ, 19 ಸ್ಪರ್ಧಿಗಳ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿಲ್ಲ. ಸ್ವತಃ ಅವರೇ ಬಿಗ್ ಬಾಸ್ಗೆ ಹೋಗುವುದಾಗಿ ಹೇಳಿಕೊಂಡಿದ್ದರು.Kamiliant American Tourister Medium Harrier Small, & Large 360 Degree Spinner Suitcase/Large Hard 4 Wheels Trolley Bag Sp3Pcset Slt Gry, 78 Cm, Grey
ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು, ಉತ್ತರ ಕರ್ನಾಟಕದ ಪ್ರಿಯಾ ಸವದಿ, ಸಾಮಾಜಿಕ ಮಾಧ್ಯಮ ಪ್ರಭಾವಿ ಸೂರಜ್ ಗೌಡ, ಅನನ್ಯಾ ಅಮರ್ ಅಥವಾ ಅಂಕಿತಾ ಅಮರ್, ಸನರ್ಜಿತ್ ಲಂಕೇಶ್ ಮತ್ತು ದಿವ್ಯಾ ವಸಂತ್ ಅವರ ಹೆಸರುಗಳು ಕೂಡ ಚರ್ಚೆಯಲ್ಲಿದ್ದವು. ಆದರೆ, ಇವರಾರೂ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿಲ್ಲ.
‘ಬಿಗ್ ಬಾಸ್ ಕನ್ನಡ ಸೀಸನ್ 12' ಅದ್ದೂರಿಯಾಗಿ ಪ್ರಾರಂಭಗೊಂಡಿದ್ದು, 19 ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಮನೆಯ ಅದ್ದೂರಿ ಅಲಂಕಾರವನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಬಿಗ್‌ಬಾಸ್ ಮನೆಗೆ ಬಾಂಬ್ ಬೆದರಿಕೆ...ಈಗ ಯುಟರ್ನ್ ಹೊಡೆದ ಮಮ್ಮಿ ಅಶೋಕ್ ಕ್ಷಮೆಯಾಚನೆ!
ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಸ್ಪರ್ಧಿಗಳೆಂದರೆ: ಕಾಕ್ರೋಚ್ ಸುಧಿ, ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಮಂಜು ಭಾಷಿಣಿ, ಮಾಳು, ಮಲ್ಲಮ್ಮ, ಕಾವ್ಯಾ ಶೈವ, ಕರಿ ಬಸಪ್ಪ, ಆ್ಯಂಕರ್ ಜಾನ್ವಿ, ಗಿಲ್ಲಿ ನಟ, ಧ್ರುವಂತ್, ಧನುಷ್, ಚಂದ್ರಪ್ರಭ, ಅಶ್ವಿನಿ, ಅಶ್ವಿನಿ ಗೌಡ, ಅಭಿಷೇಕ್, ಡಾಗ್ ಸತೀಶ್, ಮಿರ್ಚಿ ಆರ್ಜೆ ಅಮಿತ್.