ಧರ್ಮಸ್ಥಳಕ್ಕೆ ಭಕ್ತರು ಬರುವುದನ್ನು ತಡೆಯಲು ಸಂಚುಕೋರರು ನಡೆಸಿದ ಹುನ್ನಾರ ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ಬಯಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಚಂಡಿಕಾ ಹೋಮ ನಡೆಸಿದ ನಂತರ ಬೆಳ್ತಂಗಡಿ ತಾಲ್ಲೂಕಿನ 81 ಗ್ರಾಮಸ್ಥರು ಆಯೋಜಿಸಿದ್ದ ಸತ್ಯ ದರ್ಶನ ಸಮಾವೇಶದಲ್ಲಿ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಎಸ್‌ಐಟಿ ರಚಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಅವರು, ಎಸ್‌ಐಟಿ ಇಲ್ಲದಿದ್ದರೆ ಸತ್ಯ ಹೊರಬರುತ್ತಿರಲಿಲ್ಲ ಎಂದರು.
ಎಸ್‌ಐಟಿ ರಚನೆಯನ್ನು ಮೊದಲ ದಿನವೇ ತಾವು ಸ್ವಾಗತಿಸಿದ್ದು, ಇದೀಗ ಸಂಚುಕೋರರು ಯಾರೆಂಬುದು ಬಹಿರಂಗವಾಗಿದೆ ಎಂದು ಹೆಗ್ಗಡೆ ಹೇಳಿದರು. ಧರ್ಮಸ್ಥಳಕ್ಕೆ ಭಕ್ತರು ಬರುವುದನ್ನು ನಿಲ್ಲಿಸಿ, ಕ್ಷೇತ್ರವನ್ನು ನಾಶಪಡಿಸುವುದು ಅವರ ಉದ್ದೇಶವಾಗಿತ್ತು ಎಂದರು. HP Omen, 14th Gen Intel Core i7-14650HX, 8GB RTX 5060, 24GB DDR5(Upgradeable) 1TB SSD, 165Hz, 2k WUXGA, 3ms, 400 nits, 16''/40.6cm, Win11, M365* Office24, Black, 2.43kg, am0239TX, RGB Gaming Laptop
ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯನ್ನು ಹೊರತುಪಡಿಸಿ, ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಚಿನ್ನವನ್ನು ಬೆಂಕಿಗೆ ಹಾಕಿದಾಗ ಅದು ಮತ್ತಷ್ಟು ಕಂಗೊಳಿಸುವಂತೆ, ಧರ್ಮಸ್ಥಳವು ಈ ಸವಾಲಿನ ನಡುವೆಯೂ ಮತ್ತಷ್ಟು ಪ್ರಕಾಶಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು.
ಪ್ರಸ್ತುತ, ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಬಂದು ಬೆಂಬಲ ಸೂಚಿಸಿದ್ದಾರೆ. ಆರಂಭದಲ್ಲಿ ತಮ್ಮ ತಾಲ್ಲೂಕಿನಿಂದ ಜನ ಬರಲಿಲ್ಲ ಎಂಬ ಮಾತಿತ್ತು, ಆದರೆ ಇಂದು ಬೆಳ್ತಂಗಡಿ ತಾಲ್ಲೂಕಿನ ಜನರೂ ಆಗಮಿಸಿ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಶೀಘ್ರದಲ್ಲೇ ಧರ್ಮಸ್ಥಳದಿಂದ ಹಲವಾರು ಸಮಾಜಮುಖಿ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು. ಭಕ್ತರ ಬೆಂಬಲ ತಮ್ಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಇದನ್ನೂ ಓದಿ: ಅಮೆರಿಕಾದ ಮಿಚಿಗನ್‌ನ ಚರ್ಚ್‌ಗೆ ಬೆಂಕಿ ಹಚ್ಚಿ, ಗುಂಡಿನ ದಾಳಿ - ದಾಳಿಕೋರ ಸೇರಿ ನಾಲ್ವರ ಹ**ತ್ಯೆ.!