ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಉಪ ಗವರ್ನರ್ ಆಗಿ ಮೂರು ವರ್ಷಗಳ ಅವಧಿಗೆ ಶಿರೀಶ್ ಚಂದ್ರ ಮುರ್ಮು ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸದ್ಯ ಆರ್ಬಿಐ ಉಪಗವರ್ನರ್ ಆಗಿರುವ ರಾಜೇಶ್ವರ್ ರಾವ್ ಅವರ ಅವಧಿ ಅ.8ರಂದು ಕೊನೆಗೊಳ್ಳಲಿದ್ದು, ಅದಾದ ಬಳಿಕ ಅ.9ರಿಂದ ನೂತನ ಉಪಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ಅಧಿಕಾರ ಸ್ವೀಕರಿಸಲಿದ್ದಾರೆ.ಇದನ್ನೂ ಓದಿ: ಅಮೆರಿಕಾದ ಮಿಚಿಗನ್‌ನ ಚರ್ಚ್‌ಗೆ ಬೆಂಕಿ ಹಚ್ಚಿ, ಗುಂಡಿನ ದಾಳಿ - ದಾಳಿಕೋರ ಸೇರಿ ನಾಲ್ವರ ಹ**ತ್ಯೆ.!
ಪ್ರಸ್ತುತ ಇವರು ಆರ್ಬಿಐನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಬಿಐ ನಾಲ್ಕು ಉಪಗವರ್ನರ್ಗಳನ್ನು ಹೊಂದಿದ್ದು, ಪ್ರತಿಯೊಬ್ಬರೂ ಹಣಕಾಸು ನೀತಿ, ಬ್ಯಾಂಕಿಂಗ್ ಮೇಲ್ವಿಚಾರಣೆ ಮತ್ತು ಹಣಕಾಸು ಮಾರುಕಟ್ಟೆಗಳ ನಿಯಂತ್ರಣದಂತಹ ನಿರ್ಣಾಯಕ ಕ್ಷೇತ್ರಗಳ ಬಗ್ಗೆ ಕಾರ್ಯನಿರ್ವಹಿಸುತ್ತಾರೆ.ಇದನ್ನೂ ಓದಿ: ಭಾರತದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?
ಈ ಪೈಕಿ ಶಿರೀಶ್ ಚಂದ್ರ ಮುರ್ಮು ಅವರು ಒಂದು ಅಥವಾ ಹೆಚ್ಚಿನ ಖಾತೆಗಳ ಉಸ್ತುವಾರಿ ವಹಿಸಿಕೊಳ್ಳುವ ನಿರೀಕ್ಷೆಯಿದ್ದು, ಈವರೆಗೂ ಖಾತೆಗಳ ಉಸ್ತುವಾರಿ ಬಗ್ಗೆ ನಿಖರವಾದ ಮಾಹಿತಿ ಅಧಿಕೃತವಾಗಿ ಘೋಷಣೆಯಾಗಿಲ್ಲ. ಸದ್ಯಕ್ಕೆ ಅವರನ್ನು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದ್ದು, ಆರ್ಬಿಐ ಉಪಗವರ್ನರ್ ಆಗಿ ನೇಮಿಸಲಾಗಿದೆ.MANOHARI Women's Trendy Banarasi Woven Saree with Heavy Jacquard Work, Elegant Design, Silk Saree with Maching Lace Border Unstitched Blouse Piece for Weddings & Festive Occasions