ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರಿಸುವ ಕುರಿತು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯು, ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ಶಿಫಾರಸು ಮಾಡಿದೆ. ರಾಜ್ಯದಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ ವರದಿ ಮಹತ್ವ ಪಡೆದುಕೊಂಡಿದೆ.ಇದನ್ನೂ ಓದಿ: ಗೋಕರ್ಣ ಗುಹೆಯಿಂದ ರಷ್ಯಾ ಮಹಿಳೆ ಮರಳಿ ತಾಯ್ನಾಡಿಗೆ…!!
ವರದಿಯ ಪ್ರಕಾರ, ಕುರುಬ ಸಮುದಾಯದವರು ಕುಲಕಸುಬನ್ನು ಆಧರಿಸಿ ಜೀವನ ನಡೆಸುತ್ತಿದ್ದಾರೆ. ತಮ್ಮದೇ ಆದ ಸಂಸ್ಕೃತಿ, ಕಲೆ, ನೃತ್ಯ, ನ್ಯಾಯ ಪಂಚಾಯತಿ, ರೂಢಿ-ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.ಇದನ್ನೂ ಓದಿ: ಮೂರನೇ ನೋಟಿಸ್ ಬಂದರೂ ಹಾಜರಾಗದ ಮಹೇಶ್ ಶೆಟ್ಟಿ, ಪೊಲೀಸರು ಶೋಧಕ್ಕೆ ತೀವ್ರ ಸಿದ್ಧತೆ..!
ಕೇಂದ್ರ ಸರ್ಕಾರದ ಲೋಕೂರು ಸಮಿತಿಯ ಐದು ಮಾನದಂಡಗಳು ಮತ್ತು ಬುಡಕಟ್ಟು ಲಕ್ಷಣಗಳನ್ನು ಈ ಸಮುದಾಯ ಹೊಂದಿದೆ ಎಂದು ವರದಿ ಹೇಳುತ್ತದೆ. ರಾಜ್ಯದ 25 ಜಿಲ್ಲೆಗಳಲ್ಲಿ ವಾಸಿಸುವ ಕುರುಬ ಸಮುದಾಯದವರು ಈ ಲಕ್ಷಣಗಳನ್ನು ಹೊಂದಿದ್ದು, ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅರ್ಹರಾಗಿದ್ದಾರೆ ಎಂದು ವರದಿ ಸ್ಪಷ್ಟಪಡಿಸಿದೆ.
ಅಧ್ಯಯನದ ಪ್ರಕಾರ, ಕುರುಬರು ರಾಜ್ಯದಾದ್ಯಂತ ಕಂಡುಬರುತ್ತಾರೆ, ಆದರೆ ಕರಾವಳಿ ಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ರಾಜ್ಯದಲ್ಲಿ ಇವರನ್ನು ಮುಖ್ಯವಾಗಿ 'ಕುರುಬ' ಎಂದು ಗುರುತಿಸಲಾಗುತ್ತದೆ. ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 'ಧನಗರ್' ಎಂಬ ಹೆಸರಿನಿಂದ ಕರೆಯುತ್ತಾರೆ.ಇದನ್ನೂ ಓದಿ: ನವೆಂಬರ್ ನಂತರ ಸಂಪುಟ ವಿಸ್ತರಣೆ ಸಾಧ್ಯತೆ: ಸಚಿವ ಜಮೀರ್ ಅಹ್ಮದ್ ಖಾನ್..!
ಸಮುದಾಯವು ಪೌರಾಣಿಕ ಹಿನ್ನೆಲೆ ಹೊಂದಿದ್ದು, ತಮ್ಮದೇ ಆದ ನಂಬಿಕೆಗಳು, ಆಚಾರ-ವಿಚಾರಗಳು, ಮತ್ತು ಆಚರಣೆಗಳನ್ನು ಅನುಸರಿಸುತ್ತದೆ. ಇವರು ತಮ್ಮ ಕುಲಕಸುಬಿನ ಮೇಲೆ ಅವಲಂಬಿತರಾಗಿದ್ದು, ಪ್ರತ್ಯೇಕವಾಗಿ ವಾಸಿಸುವ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.MANOHARI Banarasi Silk Traditional saree with Unstitch Heavy Blouse Piece