ಕಾರವಾರ: ಗೋಕರ್ಣದ ರಾಮತೀರ್ಥ ಅರಣ್ಯದ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾದ ಮಹಿಳೆ ನೀನಾ ಕುಟೀನಾ ಹಾಗೂ ಆಕೆಯ ಮಕ್ಕಳಾದ 6 ವರ್ಷದ ಪ್ರೆಯಾ ಮತ್ತು 4 ವರ್ಷದ ಅಮಾ ಅವರನ್ನು ಗೋಕರ್ಣ ಪೊಲೀಸರು ಅವರ ಸ್ವದೇಶಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ: ಹೆಬ್ಬಾಳಕರ್ ನಾಯಕತ್ವದಲ್ಲಿ 15 ಸ್ಥಾನಗಳ ಭರ್ಜರಿ ಗೆಲುವು..!
ಜುಲೈ 10ರಂದು ಗೋಕರ್ಣ ಪೊಲೀಸರು ತಪಾಸಣೆಗೆ ತೆರಳಿದಾಗ, ರಾಮತೀರ್ಥದ ಗುಹೆಯಲ್ಲಿ ನೀನಾ ಮತ್ತು ಆಕೆಯ ಮಕ್ಕಳು ವಾಸಿಸುತ್ತಿರುವುದು ಬೆಳಕಿಗೆ ಬಂದಿತ್ತು. ಪೊಲೀಸರು ತಕ್ಷಣ ಇವರನ್ನು ರಕ್ಷಿಸಿದ್ದರು. ಇದಾದ ಬಳಿಕ, ನೀನಾಳ ಪತಿ, ರಷ್ಯಾದ ಡೋರ್‌ಶ್ಲೋಮೋ ಗೋಲ್ಡ್‌ಸ್ಟೈನ್, ಬೆಂಗಳೂರು ಹೈಕೋರ್ಟ್‌ನಲ್ಲಿ ತನ್ನ ಕುಟುಂಬವನ್ನು ರಷ್ಯಾಗೆ ಕಳುಹಿಸುವಂತೆ ಅರ್ಜಿ ಸಲ್ಲಿಸಿದ್ದರು.ಇದನ್ನೂ ಓದಿ: ಆರ್‌ಬಿಐ ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ..!!
ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಪೀಠ ತನಿಖೆಗೆ ಆದೇಶಿಸಿ, ರಷ್ಯಾಗೆ ಕಳುಹಿಸಲು ಸೂಚಿಸಿತು.ಗೋಕರ್ಣ ಪೊಲೀಸರು ಮಕ್ಕಳ ಡಿಎನ್‌ಎ ಪರೀಕ್ಷೆ ನಡೆಸಿ, ಅವರು ನೀನಾಳ ಮಕ್ಕಳೇ ಎಂದು ಖಚಿತಪಡಿಸಿಕೊಂಡರು. ಜೊತೆಗೆ, ನೀನಾಳ ವೀಸಾ ಅವಧಿ ಮುಗಿದಿರುವುದು ತನಿಖೆಯಲ್ಲಿ ದೃಢಪಟ್ಟಿತು. ಅಂತಿಮವಾಗಿ, ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ನೀನಾ ಮತ್ತು ಆಕೆಯ ಮಕ್ಕಳನ್ನು ರಷ್ಯಾಗೆ ಕಳುಹಿಸಲಾಗಿದೆ.MANOHARI Women's Trendy Banarasi Woven Saree with Heavy Jacquard Work, Elegant Design, Silk Saree with Maching Lace Border Unstitched Blouse Piece for Weddings & Festive Occasions