Skip to main content
ವಿಡಿಯೋ
1/2
crime

ಧರ್ಮಸ್ಥಳ ಪ್ರಕರಣ: ಹೊಸ ಕಥೆ ಶುರು ಮಾಡಿದ ದೂರುದಾರ ಚಿನ್ನಯ್ಯ...SIT ತನಿಖೆ ಮತ್ತೆ ತೀವ್ರ ಸಾಧ್ಯತೆ!

By Pavitra Ganapathi Baradavalli
ಧರ್ಮಸ್ಥಳ ಪ್ರಕರಣ: ಹೊಸ ಕಥೆ ಶುರು ಮಾಡಿದ ದೂರುದಾರ ಚಿನ್ನಯ್ಯ...SIT ತನಿಖೆ ಮತ್ತೆ ತೀವ್ರ ಸಾಧ್ಯತೆ!

ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೊಸ ಹೇಳಿಕೆ ನೀಡಿದ ನಂತರ, SIT ತನಿಖೆ ಮತ್ತಷ್ಟು ಚುರುಕಾಗಲಿದೆ; ತಿಮರೋಡಿ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ನಿರ್ಧರಿಸಲಾಗಿದೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳದ (SIT) ಅಧಿಕಾರಿಗಳು ಹೊಸದಾಗಿ ತನಿಖೆ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚಿನ್ನಯ್ಯ ಅವರ ಹೇಳಿಕೆಯಲ್ಲಿರುವ ಹೊಸ ಅಂಶಗಳು ಮತ್ತು ಅವುಗಳ ವಾಸ್ತವಾಂಶಗಳನ್ನು ಆಧರಿಸಿ ತನಿಖಾ ಪ್ರಕ್ರಿಯೆಯು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ.ಇದನ್ನೂ ಓದಿ: ಬಿಗ್‌ಬಾಸ್ ಕನ್ನಡ 12: ಮೊದಲ ದಿನವೇ ಶಾಕ್...ಭರವಸೆ ಇಟ್ಟುಕೊಂಡಿದ್ದ ರಕ್ಷಿತಾ ಶೆಟ್ಟಿ ಮನೆಯಿಂದ ಔಟ್!


ಕಳೆದ ವಾರ, ಚಿನ್ನಯ್ಯ ಶಿವಮೊಗ್ಗ ಜೈಲಿನಿಂದ ಮೂರು ಬಾರಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಸೆಕ್ಷನ್ 183 ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಈ ಹಿಂದೆ ನೀಡಿದ್ದ ಹೇಳಿಕೆಯಿಂದ ಅವರು ವಿಮುಖರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅವರ ವಿರುದ್ಧ ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ.ಇದನ್ನೂ ಓದಿ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯ ಆತ್ಮಚರಿತ್ರೆಗೆ ಮೋದಿಯವರಿಂದ ಮುನ್ನುಡಿ..!

ಚಿನ್ನಯ್ಯ ಅವರ ಹಿಂದಿನ ಹೇಳಿಕೆಯ ಆಧಾರದ ಮೇಲೆ ಗಿರೀಶ್ ಮಟ್ಟಣ್ಣವರ್, ಜಯನ್ ಮತ್ತು ವಿಠಲ ಗೌಡ ಅವರನ್ನು ವಿಚಾರಣೆ ನಡೆಸಲಾಗಿತ್ತು. ಆದರೆ, ಇವರ ವಿಚಾರಣೆಯ ಸಂದರ್ಭದಲ್ಲಿ ವಿರೋಧಾತ್ಮಕ ಹೇಳಿಕೆಗಳು ಬಂದಿದ್ದರಿಂದ ಚಿನ್ನಯ್ಯ ಸುಳ್ಳು ಹೇಳುತ್ತಿದ್ದಾರೆಯೇ ಎಂಬ ಸಂಶಯ ಮೂಡಿತ್ತು. ಹಾಗಾಗಿ, ಅಧಿಕಾರಿಗಳು ಹೊಸ ಹೇಳಿಕೆಯನ್ನು ಆಧರಿಸಿ ತಕ್ಷಣವೇ ತನಿಖೆ ಕೈಗೊಳ್ಳುವ ಸಾಧ್ಯತೆ ಕಡಿಮೆ.ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ 80% ಕಮಿಷನ್ ಆರೋಪ...ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆರ್.ಅಶೋಕ್ ಒತ್ತಾಯ!

ತನ್ನನ್ನು ಬಲವಂತವಾಗಿ ಹೇಳಿಕೆ ನೀಡುವಂತೆ ಮಾಡಲಾಗಿತ್ತು ಎಂದು ಚಿನ್ನಯ್ಯ ಈಗ ಹೇಳಿದ್ದರೂ, ಅಧಿಕಾರಿಗಳು ಅವರ ಹಿಂದಿನ ಹೇಳಿಕೆ ಮತ್ತು ಸೌಜನ್ಯಾ ಹೋರಾಟಗಾರರು ನೀಡಿದ ಹೇಳಿಕೆಗಳನ್ನು ತಾಳೆ ಹಾಕಿ ಪರಿಶೀಲಿಸಲಿದ್ದಾರೆ. ತಲೆಬುರುಡೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಚಿನ್ನಯ್ಯ ಹೇಳಿದರೂ, ಅದನ್ನು ಬಂಗ್ಲೆಗುಡ್ಡೆ ಕಾಡಿನಿಂದ ತರಲಾಗಿತ್ತು ಎಂಬ ಮಾಹಿತಿ ಹಿಂದೆ ತಿಳಿದುಬಂದಿತ್ತು.ಇದನ್ನೂ ಓದಿ: ಬಿಜೆಪಿ ನಾಯಕರಿಂದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪ್ರವಾಸ - ಪ್ರವಾಹಹಾನಿ ಪರಿಹಾರಕ್ಕಾಗಿ ಆಗ್ರಹ.!


ಚಿನ್ನಯ್ಯ ತನ್ನ ಹೇಳಿಕೆಯನ್ನು ಬದಲಾಯಿಸಿದ್ದರೂ, ಅಧಿಕಾರಿಗಳ ತನಿಖೆ ನಿಖರವಾಗಿದ್ದರೆ ಅವರೇ ಮತ್ತೆ ಸಿಕ್ಕಿಬೀಳುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಚಿನ್ನಯ್ಯ ನೀಡಿದ ಹೇಳಿಕೆಯ ಪ್ರತಿ ಸಿಕ್ಕ ನಂತರವೇ ಅಧಿಕಾರಿಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.SWORNOF Women's kanjivaram banarasi silk saree for Patola festival Wedding silk with rich pallu Design sarees for women with blouse piece