ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಲವು ವಿಶೇಷ ಕಾರ್ಯಕ್ರಮಗಳಲ್ಲಿ, ಸೆಪ್ಟೆಂಬರ್ 28 ರಂದು ನಡೆದ ಬೃಹತ್ ಡ್ರೋನ್ ಪ್ರದರ್ಶನವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಬನ್ನಿಮಂಟಪದ ಟಾರ್ಚ್ಲೈಟ್ ಪೆರೇಡ್ ಮೈದಾನದಲ್ಲಿ 2,983 ಡ್ರೋನ್ಗಳನ್ನು ಬಳಸಿ, ದುರ್ಗಾದೇವಿ, ಹುಲಿ, ಅಂಬಾರಿ, ಅರ್ಜುನನಂತಹ ಕಲಾಕೃತಿಗಳನ್ನು ರಚಿಸಿ ಪ್ರದರ್ಶಿಸಲಾಯಿತು. ಈ ಪ್ರದರ್ಶನದಲ್ಲಿ, ವಿಶೇಷವಾಗಿ ಹುಲಿಯ ಕಲಾಕೃತಿಯು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿ ಗಮನ ಸೆಳೆದಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ದಸರಾ ಉತ್ಸವದ ಭಾಗವಾಗಿ ಈ ಡ್ರೋನ್ ಪ್ರದರ್ಶನವನ್ನು ಆಯೋಜಿಸಿತ್ತು ಎಂದು ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ್ ರಾಜು ತಿಳಿಸಿದ್ದಾರೆ. 2024ರಲ್ಲಿ ನಡೆದ ಪ್ರದರ್ಶನದಲ್ಲಿ 1,500 ಡ್ರೋನ್ಗಳನ್ನು ಬಳಸಿದ್ದರೆ, ಈ ಬಾರಿ ಸುಮಾರು 3,000 ಡ್ರೋನ್ಗಳನ್ನು ಬಳಸಲಾಗಿದೆ. 1,985 ಡ್ರೋನ್ಗಳ ಮೂಲಕ ಹುಲಿಯ ಕಲಾಕೃತಿಯನ್ನು ರಚಿಸಿ, ಈ ವಿಶಿಷ್ಟ ಸಾಧನೆಗೆ ಲಂಡನ್ನ ತಂಡವೊಂದನ್ನು ಕರೆಸಿಕೊಳ್ಳಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.ಇದನ್ನು ಓದಿ: ಏಷ್ಯಾ ಕಪ್ 2025: ಭಾರತ ತಂಡ ಟ್ರೋಫಿ ಸ್ವೀಕರಿಸಲಿಲ್ಲ ಏಕೆ? ಕ್ಯಾಪ್ಟನ್ ಸೂರ್ಯಕುಮಾರ್ ಅವರ ಒಟ್ಟು ಸಂಭಾವನೆ ಹೀಗಿದೆ
ಈ ದಾಖಲೆ ನಿರ್ಮಾಣಕ್ಕೆ CESC ಅಗತ್ಯ ಸಿದ್ಧತೆಗಳನ್ನು ಕೈಗೊಂಡಿತ್ತು. ಪ್ರದರ್ಶನದ ಪೂರ್ವತಯಾರಿಗಳನ್ನು ಎಂಜಿನಿಯರ್ಗಳು, ಲೆಕ್ಕಪರಿಶೋಧಕರು ಮತ್ತು ಕಾನೂನು ತಜ್ಞರು ಪರಿಶೀಲಿಸಿದ್ದರು. ಈ ವರ್ಷದ ಮೈಸೂರಿನ ಬೀದಿ ದೀಪಾಲಂಕಾರ ಮತ್ತು ಡ್ರೋನ್ ಪ್ರದರ್ಶನವು ಸ್ಮರಣೀಯ ಅನುಭವ ನೀಡಲಿದೆ ಎಂದು ಮುನಿಗೋಪಾಲ್ ರಾಜು ಹೇಳಿದರು. ಈ ಪ್ರದರ್ಶನ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಅವರು ವಿವರಿಸಿದರು.Monte Carlo Mens Solid Lace Up Genuine Leather Casual Shoes (201803FW)
ಮುಖ್ಯ ಪ್ರದರ್ಶನಗಳಾದ ಅಕ್ಟೋಬರ್ 1 ಮತ್ತು 2ರ ಮುನ್ನ, ಸೆಪ್ಟೆಂಬರ್ 28 ಮತ್ತು 29 ರಂದು CESC ಎರಡು ಪ್ರಾಯೋಗಿಕ ಪ್ರದರ್ಶನಗಳನ್ನು ಆಯೋಜಿಸಿತ್ತು. ಈ ಡ್ರೋನ್ ಶೋದಲ್ಲಿ ಸೌರವ್ಯೂಹ, ವಿಶ್ವ ನಕ್ಷೆ, ಹೆಮ್ಮೆಯ ಭಾರತೀಯ ಸೈನಿಕ, ನವಿಲು, ಡಾಲ್ಫಿನ್, ಹದ್ದು, ಸರ್ಪದ ಮೇಲೆ ನೃತ್ಯ ಮಾಡುತ್ತಿರುವ ಶ್ರೀಕೃಷ್ಣ, ಕಾವೇರಿ ತಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕದ ನಕ್ಷೆ, ಐದು ಗ್ಯಾರಂಟಿ ಯೋಜನೆಗಳೊಂದಿಗೆ ಕರ್ನಾಟಕದ ನಕ್ಷೆ, ಅಂಬಾರಿ ಆನೆ ಮತ್ತು ಚಾಮುಂಡೇಶ್ವರಿಯ ಚಿತ್ರಗಳನ್ನು ಪ್ರದರ್ಶಿಸಲಾಯಿತು.